ಲವ್ (Love)ಮಾಡೋಕೆ ಟೈಮಿಲ್ಲ ಎಂದು ಹಾಡಿನ ರೂಪದಲ್ಲಿ ಹೇಲ್ತಿದ್ದಾರೆ ಹೀರೋಯಿನ್ ಶೃತಿ ಹಾಸನ್(Shruti Hasaan) ಈ ಬ್ಯೂಟಿ ನಟಿ ಮಾತ್ರವೇ ಅಲ್ಲ.. ಉತ್ತಮ ಗಾಯಕಿ ಕೂಡ..
ತಂದೆ ಕಮಲ್ ಹಾಸನ್ ನಟಿಸಿದ ಕ್ಷತ್ರಿಯ ಪುತ್ರುಡು ಸಿನಿಮಾದಲ್ಲಿ ಮೊದಲ ಬಾರಿಗೆ ಹಾಡಲು ಶೃತಿ ಹಾಸನ್ಗೆ ಚಾನ್ಸ್ ಸಿಕ್ಕಿತ್ತು. ಬಳಿಕ ಹಲವು ಮ್ಯೂಸಿಕ್ ಆಲ್ಬಮ್ ಮಾಡಿದ್ರು.ಕಮಲ್ ಹಾಸನ್ ನಟನೆಯ ಉನ್ನೆಪೊಲ ಒರುವನ್ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ರು.
ತೆಲುಗಿನ ಈನಾಡು, ಓಮೈ ಫ್ರೆಂಡ್, ಆಗಡು, ರೇಸುಗುರ್ರಂ ಸಿನಿಮಾದಲ್ಲಿ ನಟಿ ಶೃತಿ ಹಾಸನ್ ಹಾಡಿದ್ದ ಹಾಡುಗಳು ಸಿಕ್ಕಾಪಟ್ಟೆ ಸೌಂಡ್ ಮಾಡಿದ್ವು.
ಇದೀಗ ಮತ್ತೊಮ್ಮೆ ನಟಿ ಶೃತಿ ಹಾಸನ್ ಗಾಯಕಿಯ ಅವತಾರ ಎತ್ತಿದ್ದಾರೆ. ಜಯಂರವಿ, ನಿತ್ಯಾ ಮೆನನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ತಮಿಳು ಚಿತ್ರವೊಂದಕ್ಕೆ ಎಆರ್ ರೆಹಮಾನ್ ಸಂಗೀತ ನೀಡ್ತಿದ್ದಾರೆ. ಈ ಸಿನಿಮಾದ ಕಾದಲಿಕ್ಕ ನೆರಮಿಲ್ಲೆ (ಲವ್ ಮಾಡೋಕೆ ಟೈಮಿಲ್ಲ) ಎಂಬ ಹಾಡನ್ನು ನಟಿ ಶೃತಿ ಹಾಸನ್ ಹಾಡಿದ್ದಾರೆ.