bengaluru

ಲಿಫ್ಟ್​​​ನಲ್ಲಿ ಸಿಲುಕಿ ಯುವಕ ದಾರುಣ ಸಾವು!

Young man dies a tragic death after getting trapped in a lift!

ಬೆಂಗಳೂರು : ಲಿಫ್ಟ್​​​ನಲ್ಲಿ ಸಿಲುಕಿ ಯುವಕ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ. ಧಾರವಾಡ ಮೂಲದ ರಾಜೇಶ್(22) ಮೃತ ದುರ್ದೈವಿ.

ಜಯನಗರದ ಹೋಟೆಲ್​​​ವೊಂದರಲ್ಲಿ ಸರಕು ಸಾಗಿಸುವ ಲಿಫ್ಟ್‌ನಲ್ಲಿ 2ನೇ ಫ್ಲೋರ್​ಗೆ ಹೋಗುವಾಗ ಈ ದುರಂತ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲಿಫ್ಟ್‌ನಲ್ಲಿ ರಾಜೇಶ್​ ಮೆಟೀರಿಯಲ್ ಸಾಗಿಸ್ತಾ ಇದ್ದ. ಲಿಫ್ಟ್ ಓಪನ್ ಆಗ್ತಿದ್ದಂತೆ ಹೊರಗಡೆ ಬರಲು ಮುಂದಾಗಿದ್ದ. ಈ ವೇಳೆ ಸಡನ್ ಆಗಿ ಲಿಫ್ಟ್ ಆಪರೇಟ್ ಆಗಿದೆ. ಆಗ ಲಿಫ್ಟ್​​ಗೆ ತಲೆ ಸಿಕ್ಕಿಕೊಂಡು ರಾಜೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. 

Comments (0)

Your email address will not be published. Required fields are marked *

Back to top button