
ಬೆಂಗಳೂರು: ದೇಶದಲ್ಲಿ ಇಂಧನ ದರ ಹಾಗೂ ಸಿಲಿಂಡರ್ ಬೆಲೆಗಳ ಸರಣಿ ಏರಿಕೆಯನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಿಡಿದೆದ್ದಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಜೆಪಿಯವರು ಬೆಲೆ ಏರಿಕೆ ಮಾಡಿ ಜನರ ಜೇಬು ಕತ್ತರಿಸುತ್ತಿದ್ದಾರೆ, ಆದರೆ ನಾವು ಗ್ಯಾರೆಂಟಿಗಳನ್ನು ಕೊಟ್ಟು ಜನರ ಬದುಕು ಕಾಯುತ್ತಿದ್ದೇವೆ” ಎಂದು ವಾಗ್ದಾಳಿ ನಡೆಸಿದರು.ಇದೇ ವೇಳೆ, ರಾಜ್ಯದಲ್ಲಿ ಟ್ಯಾಕ್ಸ್ ಕಡಿಮೆ ಮಾಡಿ ಎಂದು ಆಗ್ರಹಿಸುತ್ತಿರುವ ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಡಿಕೆಶಿ ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡಿದ್ದಾರೆ.

ಅಶೋಕ, ವಿಜಯೇಂದ್ರನಿಗೆ ಮಾನ ಮರ್ಯಾದೆ ಇಲ್ಲ!
ಕೇಂದ್ರದ ಆರ್ಥಿಕ ನೀತಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ಡಿಸಿಎಂ ಡಿಕೆ ಶಿವಕುಮಾರ್ “ದೇಶದಲ್ಲಿ ಇವತ್ತು ಮನೆ ಬಳಕೆ ಹಾಗೂ ವಾಣಿಜ್ಯ ಸಿಲಿಂಡರ್ ಬೆಲೆ ನಿರಂತರ ಏರುತ್ತಲೇ ಇದೆ. ಬೆಲೆ ಗಗನಕ್ಕೆ ಹೋಗ್ತಿದೆ, ಜನರ ಆದಾಯ ಪಾತಾಳಕ್ಕೆ ಹೋಗ್ತಿದೆ. ಇವತ್ತು ಇಂಧನ ದರ ಏರಿಕೆ ಎಲ್ಲರಿಗೂ ಶಾಪವಾಗಿದೆ.”
“ಕೇಂದ್ರ ಸರ್ಕಾರ ದಿನಕ್ಕೆ 1000 ಕೋಟಿಯಂತೆ ಒಟ್ಟು ಲಕ್ಷ ಕೋಟಿ ರೂಪಾಯಿ ಕಲೆಕ್ಟ್ ಮಾಡ್ತಿದೆ. ಪೆಟ್ರೋಲ್ ಬೆಲೆ ಕೇವಲ 2 ವಾರದಲ್ಲಿ ಲೀಟರ್‌ಗೆ 7.5 ರೂ. ಏರಿಕೆಯಾಗಿದೆ. ನಮ್ಮನ್ನು ನಿರಂತರವಾಗಿ ಪಿಕ್ ಪಾಕೆಟ್ ಮಾಡಲಾಗುತ್ತಿದೆ.”: “ಆರ್. ಅಶೋಕ್ ನೀವು ನಮ್ಮನ್ನು ಟ್ಯಾಕ್ಸ್ ಕಡಿಮೆ ಮಾಡಿ ಅಂತೀರಲ್ಲ, ಮೊದಲು ನೀವು ದೆಹಲಿಗೆ ಹೋಗಿ ಕೇಂದ್ರ ಸರ್ಕಾರ ಹಾಕ್ತಿರೋ ಟ್ಯಾಕ್ಸ್ ಕಡಿಮೆ ಮಾಡಿಸಯ್ಯ!” ಎಂದು ಗುಡುಗಿದರು.
ಮೇ 30ಕ್ಕೆ ಮೋದಿ ವಿರುದ್ದ ಬೃಹತ್ ಪ್ರತಿಭಟನೆ
ಕೇಂದ್ರ ಸರ್ಕಾರದ ಈ ಜನವಿರೋಧಿ ನೀತಿಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷವು ಬೀದಿಗಿಳಿದು ಹೋರಾಡಲು ಸಜ್ಜಾಗಿದೆ. “ಇವತ್ತು ಮಧ್ಯಾಹ್ನ ನಮ್ಮ ಪಕ್ಷದ ಪ್ರಮುಖ ಸಭೆ ಇದೆ. ಕೇಂದ್ರದ ಈ ಲೂಟಿಯ ವಿರುದ್ಧ ಮೇ 30 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಜನರು ರೊಚ್ಚಿಗೆದ್ದು ಈ ಕೇಂದ್ರ ಸರ್ಕಾರವನ್ನು ಕಿತ್ತು ಹೊಗೆಯಬೇಕು” ಎಂದು ಡಿಕೆಶಿ ಕರೆ ನೀಡಿದರು.
ಮೋದಿಯದ್ದು ಭಾವನೆಗಳ ರಾಜಕೀಯ ನಮ್ಮದು ಬದುಕಿನ ರಾಜಕೀಯ!
“ನಮ್ಮ ಗ್ಯಾರೆಂಟಿ ಯೋಜನೆಗಳನ್ನು ಇಡೀ ದೇಶವೇ ಮೆಚ್ಚಿದೆ. ಗ್ಯಾರೆಂಟಿ ಇಲ್ಲದಿದ್ದರೆ ಜನರ ಬದುಕು ಇಷ್ಟೊತ್ತಿಗಾಗಲೇ ಬೀದಿಗೆ ಬರುತ್ತಿತ್ತು. ಅವರು ಜಾತಿ, ಧರ್ಮ ಅಂತ ಭಾವನೆಗಳ ಮೇಲೆ ರಾಜಕಾರಣ ಮಾಡ್ತಾರೆ. ಆದರೆ ನಾವು ಎಲ್ಲರೂ ಒಂದು ಅಂತ ಜನರ ಬದುಕಿನ ಮೇಲೆ ರಾಜಕಾರಣ ಮಾಡ್ತಿದ್ದೇವೆ” ಎಂದು ಡಿಕೆಶಿ ಹೆಮ್ಮೆಯಿಂದ ಹೇಳಿದರು.ಇದೇ ವೇಳೆ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ತುರ್ತು ಬುಲಾವ್ ನೀಡಿದೆ. ಇಂದು ಸಂಜೆಯೇ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದು, ಅವರ ಜೊತೆ ಶಾಸಕ ಅಶೋಕ್ ಪಟ್ಟಣ್ ಹಾಗೂ ಇನ್ನುಳಿದ ಸಾಕಷ್ಟು ಶಾಸಕರು ಇಂದು ಮತ್ತು ನಾಳೆ ಪ್ರತ್ಯೇಕವಾಗಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಹೈಕಮಾಂಡ್ ಕರೆದರೆ ತಾವೂ ದೆಹಲಿಗೆ ಹೋಗುವುದಾಗಿ ಡಿಕೆಶಿ ಸ್ಪಷ್ಟಪಡಿಸಿದ್ದಾರೆ.ಹಿಂದೆ ನಾನು ರಾಜ್ಯದಲ್ಲಿ ಕಾಂಗ್ರೆಸ್ 136 ಸ್ಥಾನ ಗೆಲ್ಲುತ್ತೆ ಎಂದು ಹೇಳಿದ್ದೆ, ಅದು ನಿಜವಾಯಿತು. ಈಗಲೂ ಬರೆದಿಟ್ಟುಕೊಳ್ಳಿ, ಮುಂದಿನ 2028ರ ವಿಧಾನಸಭಾ ಚುನಾವಣೆ ಮುಗಿದ ಮೇಲೂ ಇದೇ ಡಿ.ಕೆ. ಶಿವಕುಮಾರ್ ಇರ್ತಾರೆ, ಇಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿ ಇರುತ್ತದೆ” ಎಂದು ಭವಿಷ್ಯ ನುಡಿದರು.
#DKShivakumar #Siddaramaiah #CongressProtest #FuelPriceHike #KarnatakaPolitics #FreedomTV #KannadaNews #RAshok #BYVijayendra #GruhaLakshmi #CongressChaloDelhi



