bengaluruNational

ಇಂಧನ ಬೆಲೆ ಏರಿಕೆ- ದಿನಬಳಕೆಯ ವಸ್ತುಗಳೂ ದುಬಾರಿ!

Fuel price hike veg, daily products price hike

ನವದೆಹಲಿ: ಮಧ್ಯಪ್ರಾಚ್ಯ ಯುದ್ಧದ ನೆಪವೊಡ್ಡಿ ಮೋದಿ ಸರ್ಕಾರ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಪ್ರತಿ ಲೀಟರ್ ಗೆ 3 ರೂ. ಹಾಗೂ ಸಿಎನ್ ಜಿ ಕೆಜಿಗೆ 2 ರೂ. ಏರಿಕೆ ಮಾಡಿದೆ. ಈಗಾಗಲೇ ಬೆಲೆ ಏರಿಕೆಯಿಂದ ಜರ್ಜರಿತರಾಗಿರುವ ಜನತೆ ಬೆಲೆ ಏರಿಕೆ ಸುದ್ಧಿಗೆ ದಿಗ್ಭ್ರಾಂತರಾಗಿದ್ದಾರೆ.

ದೇಶದಲ್ಲಿ ಶೇ. 65 ರಷ್ಟು ಜನತೆ ಭೂಮಾರ್ಗವನ್ನೇ ಅವಲಂಬಿಸಿ ವ್ಯವಹಾರದಲ್ಲಿ ತೊಡಗಿದ್ದಾರೆ. ಡೀಸೆಲ್ ಬೆಲೆ ಏರಿಕೆಯಿಂದ ಕೇವಲ ಸಾರಿಗೆ ವೆಚ್ಚ ಹೆಚ್ಚುವುದು ಮಾತ್ರವಲ್ಲದೇ ಜನರ ದೈನಂದಿನ ದಿನಸಿ ಸಾಮಾನುಗಳು ಮೇಲಿನ ದರವೂ ಹೆಚ್ಚುತ್ತದೆ.ಈಗಾಗಲೇ ಸಂಕಷ್ಟದಿಂದ ನಲುಗಿರುವ ಭಾರತೀಯ ಪ್ರಜೆಗಳು ದಿಕ್ಕು ತೋಚದಂತಾಗಿದ್ದಾರೆ. ಟ್ರಕ್ ಗಳ ಮೂಲಕ ಎಲ್ಲಾ ದೈನಂದಿನ ದಿನಸಿ, ತರಕಾರಿ, ಹಾಲಿನ ಸಾಮಗ್ರಿಗಳು, ಹಣ್ಣುಹಂಪಲುಗಳು ಬರುತ್ತವೆ.ತೈಲ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಎಲ್ಲಾ ವಸ್ತುಗಳ ಬೆಲೆ ಹೆಚ್ಚಳವಾಗುವುದರಲ್ಲಿ ಸಂದೇಹವೇ ಇಲ್ಲ.
ಎಲ್ಲಾ ವೆಚ್ಚಗಳು ಅಂತಿಮವಾಗಿ ಗ್ರಾಹಕರ ಮೇಲೆ ಬೀಳಲಿದೆ.

ದುಬಾರಿ ಆಗಲಿರುವ ಸಾಮಗ್ರಿಗಳು

ತರಕಾರಿಗಳು ಮತ್ತು ಹಣ್ಣುಗಳು: ಬೆಲೆ ಏರಿಕೆ ಪರಿಣಾಮ ಕಾಡುವ ಕ್ಷೇತ್ರ ದಿನಬಳಕೆಯ ತರಕಾರಿ ಹಾಗೂ ಹಣ್ಣುಹಂಪಲುಗಳ ಕ್ಷೇತ್ರದಲ್ಲಿ. ಟೊಮ್ಯಾಟೊ, ಈರುಳ್ಳಿ, ಆಲೂಗಡ್ಡೆ ಹಾಗೂ ಸೊಪ್ಪು ಎಲೆಕೋಸು ತರಕಾರಿಗಳು ಮತ್ತು ಹಣ್ಣುಗಳು ಬೇಗನೆ ಹಾಳಾಗುವ ಪದಾರ್ಥಗಳಾಗಿರುವುದರಿಂದ ಮೊದಲು ಇವುಗಳ ಬೆಲೆ ಹೆಚ್ಚಳವಾಗುತ್ತದೆ. ಸಾಗಣೆದಾರರಿಂದ ಹಿಡಿದು ಚಿಲ್ಲರೆ ವ್ಯಾಪಾರಸ್ಥರವರೆಗೆ ಪ್ರತಿಯೊಬ್ಬರೂ ಈ ಹೊರೆಯನ್ನು ಗ್ರಾಹಕರ ಮೇಲೆಯೇ ಹಾಕುತ್ತಾರೆ.
ಸಾರಿಗೆ ವೆಚ್ಚ ಹೆಚ್ಚಾಗುತ್ತಿದ್ದಂತೆ ಡೈರಿಗಳು ಹಾಲಿನ ಬೆಲೆಯನ್ನು ಹೆಚ್ಚಿಸುವುದು ಅನಿವಾರ್ಯವಾಗುತ್ತದೆ.ಹಾಲು ದುಬಾರಿಯಾಗುತ್ತಿದ್ದಂತೆ,ಅದರ ಉಪ ಉತ್ಪನ್ನಗಳಾದ ಮೊಸರು, ಪನೀರ್, ಬೆಣ್ಣೆ ಮತ್ತು ಚೀಸ್ ಬೆಲೆಗಳೂ ಸಹ ತಾನಾಗಿಯೇ ಪರಿಷ್ಕರಣೆಗೊಂಡು ದುಬಾರಿಯಾಗುತ್ತವೆ.ಇದೇ ರೀತಿ ಅಕ್ಕಿ, ಗೋಧಿ, ದ್ವಿದಳ ಧಾನ್ಯಗಳು, ಖಾದ್ಯ ತೈಲ, ಸಕ್ಕರೆ, ಚಹಾ ಪುಡಿ ಹಾಗೂ ಬಿಸ್ಕತ್ತುಗಳಂತಹ ದಿನಸಿ ಸಾಮಗ್ರಿಗಳ ಬೆಲೆ ಕ್ರಮಬದ್ಧವಾದ ರೀತಿಯಲ್ಲಿ ಗಗನಕ್ಕೇರಲಿದ್ದು ಜನಜೀವನ ಅಧೋಗತಿಗೆ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ.


ಹೋಟೆಲ್ ಮತ್ತು ರೆಸ್ಟೋರೆಂಟ್ ಮೆನು ದುಬಾರಿ!
ಜನರು ಹೊರಗಡೆ ಊಟ ಮಾಡೋ ಅಭ್ಯಾಸವನ್ನು ತ್ಯಜಿಸುವುದು ಅನಿವಾರ್ಯ.ಅನೇಕ ಹೋಟೆಲ್‌ಗಳು ಮತ್ತು ಧಾಬಾಗಳು ಪ್ರಸ್ತುತ ಸಿಎನ್‌ಜಿ (CNG) ಇಂಧನವನ್ನು ಬಳಸುತ್ತಿವೆ. ಆದರೆ, ಸಿಎನ್‌ಜಿ ದರ ಪ್ರತಿ ಕೆಜಿಗೆ ಕೇವಲ 2 ರೂಪಾಯಿಯಷ್ಟು ಹೆಚ್ಚಾಗಿರುವುದರಿಂದ ಅದರ ನೇರ ಪರಿಣಾಮ ಗ್ರಾಹಕರ ಬಿಲ್ ಮೇಲೆ ಬೀಳುತ್ತದೆ. ಹೋಟೆಲ್‌ಗೆ ಹೋಗಿ ಊಟ ಮಾಡುವುದು ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡುವುದು ಅಥವಾ ಧಾಬಾಗಳಿಂದ ಆಹಾರವನ್ನು ತರಿಸಿಕೊಳ್ಳುವುದು ನಿಧಾನವಾಗಿ ಸಾಮಾನ್ಯ ಜನರ ಕೈಗೆಟುಕದಂತೆ ದುಬಾರಿಯಾಗಲಿದೆ. ಇಂಧನ ದರ ಏರಿಕೆಯು ಕೇವಲ ಒಂದು ಕ್ಷೇತ್ರದ ಮೇಲಷ್ಟೇ ಪ್ರಭಾವ ಬೀರದೆ, ಇಡೀ ದೇಶದ ಅರ್ಥವ್ಯವಸ್ಥೆ ಹಾಗೂ ಸಾಮಾನ್ಯ ಜನರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.ತರಕಾರಿಯಿಂದ ಹಿಡಿದು ಹೋಟೆಲ್ ಊಟದವರೆಗೆ ಎಲ್ಲವೂ ದುಬಾರಿಯಾಗುತ್ತಿರುವುದು ಮಧ್ಯಮ ಹಾಗೂ ಬಡ ವರ್ಗದ ಜನರನ್ನು ಸಂಕಷ್ಟಕ್ಕೆ ತಳ್ಳಿದೆ ಸರ್ಕಾರಗಳು ಈ ಸರಣಿ ಬೆಲೆ ಏರಿಕೆಗೆ ಕಡಿವಾಣ ಹಾಕಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಿದ್ದು ಯಾವ ರೀತಿಯ ನಿರ್ಧಾರಗಳನ್ನು ಕೈಗೊಳ್ಳಲಿವೆ ಕಾದುನೋಡಬೇಕಿದೆ.

#FuelPriceHike #DieselPriceEffect #InflationAlert #VegetablePriceRise #MilkPriceHike #GroceryExpensive #HotelFoodCostly #CNGPriceRise #CommonManBurden #FreedomTVAnalysis #EconomicCrisis

Comments (0)

Your email address will not be published. Required fields are marked *

Back to top button