
ಹೋಟೆಲ್ ಗಳಿಗೆ ಅನಧಿಕೃತ ಪ್ರವೇಶ ನಿಷೇಧ: ಬಿಸಿಸಿಐ

IPL ಇಂದು ಕೇವಲ ಕ್ರೀಡೆಯಾಗಿ ಉಳಿದಿಲ್ಲ. ಲಕ್ಷಾಂತರ ಕೋಟಿ ವಹಿವಾಟು ನಡೆಸುವ ವಾಣಿಜ್ಯ ಕ್ರೀಡೆಯಾಗಿ ಮಾರ್ಪಟ್ಟಿದೆ. ಅನೈತಿಕ ಚಟುವಟಿಕೆಗಳು, ವೇಷ್ಯಾವಾಟಿಕೆ, ಮ್ಯಾಚ್ ಫಿಕ್ಸಿಂಗ್ ಚಟುವಟಿಕೆಗಳು ಕ್ರಿಕೆಟಿಗರನ್ನೂ ಬಿಟ್ಟಿಲ್ಲ.ಈ ನಿಟ್ಟಿನಲ್ಲಿ ಐಪಿಎಲ್ ನಲ್ಲಿ ನಡೆಯುವ ಅನೈತಿಕ ಚಟುವಟಿಕೆ ಕೆಲವು ಅವ್ಯವಸ್ಥೆ, ಶಿಷ್ಟಾಚಾರ ಉಲ್ಲಂಘನೆ ಕುರಿತು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕ ಈ ದಿಟ್ಟ ನಿಲುವನ್ನು ತೆಗೆದುಕೊಂಡಿದೆ.
ಐಪಿಎಲ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಸ್ಪಾಟ್ ಫಿಕ್ಸಿಂಗ್ ಹಾಗೂ ಇತರೆ ವಾಮಮಾರ್ಗದ ಘಟನೆಗಳನ್ನು ಹತ್ತಿಕ್ಕಲು ಬಿಸಿಸಿಐ ಈ ನಿರ್ಧಾರಕ್ಕೆ ಮುಂದಾಗಿದೆ.ಹೊರಗಿನವರು ಸಹಾಯಕ ಸಿಬ್ಬಂದಿ ಮತ್ತು ಆಟಗಾರರನ್ನು ಭೇಟಿ ಮಾಡಲು ಕಡ್ಡಾಯವಾಗಿ ಅನುಮತಿ ಪತ್ರವನ್ನು ಪಡೆದಿರಬೇಕು.ಈ ನಿರ್ಧಾರ ಐಪಿಎಲ್ ನಲ್ಲಿ ವೃತ್ತಿಪರತೆ, ಸೂಕ್ತ ಭದ್ರತೆ ಮತ್ತು ಶಿಸ್ತು ಕ್ರಮಗಳನ್ನು ಬಲಪಡಿಸುವುದೇ ಮುಖ್ಯ ಎಂಬುದು ಬಿಸಿಸಿ ಅಭಿಮತವಾಗಿದೆ.
IPL2026 #BCCI #AntiCorruption #HoneyTrap #IPLSecurity #CricketNews #MatchFixing #SpotFixing




