Freedom TV

ಯಾರನ್ನು ಮೆಚ್ಚಿಸಲು BSY ಅಭಿಮಾನೋತ್ಸವ; ಯತ್ನಾಳ್ ವ್ಯಂಗ್ಯ

ಯಡ್ಡಿ ಕುಟುಂಬದ ಬ್ಲಾಕ್ ಮೇಲ್ ತಂತ್ರ ನಡೆಯೋದಿಲ್ಲ!

ಬೆಂಗಳೂರು: ಕರ್ನಾಟಕದಲ್ಲಿ ಜನರು ಕಷ್ಟಗಳಿಂದ ತತ್ತರಿಸಿ ಹೋಗುತ್ತಿದ್ದಾರೆ. ಆಡಳಿತ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿದ್ದರೆ ಬಿಜೆಪಿ ಜನರ ತೊಳಲಾಟವನ್ನು ಅರ್ಥಮಾಡಿಕೊಳ್ಳದೆ ಅಂಧತ್ವದ ಹಾದಿಯಲ್ಲಿ ಮುಂದುವಯುತ್ತಿರುವುದು ವಿಪರ್ಯಾಸ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್ ಬಿ ವೈ ವಿಜಯೇಂದ್ರ ನನ್ನು ಪದಚ್ಯುತಿಗೊಳಿಸಿ ಹಿಂದುತ್ವದ ಅಡಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಬೇರೆ ನಾಯಕರಿಗೆ ನಾಯಕತ್ವ ನೀಡಿದರೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಹೇಳಿದರು. ವಿಜಯೇಂದ್ರರವರೇ ನಾಯಕರಾಗಿ ಮುಂದುವರೆದರೆ ಬಿಜೆಪಿಯು ಕರ್ನಾಟಕದಲ್ಲಿ ಸೋಲಲಿದೆ ಎಂದು ಯತ್ನಾಳ್ ಮಾರ್ಮಿಕವಾಗಿ ನುಡಿದರು. #Yatnal #Vijayendra #BSY #BJPKarnataka #KarnatakaPolitics #Abhimanothsava

Comments (0)

Your email address will not be published. Required fields are marked *

Back to top button