Freedom TV

ಐಪಿಎಲ್​ ಗೂ ಕಾಡುತ್ತಿದೆ ಹನಿಟ್ರ್ಯಾಪ್ ಜಾಲ!

Spot fixing and Honey trap in IPL

ಹೋಟೆಲ್ ಗಳಿಗೆ ಅನಧಿಕೃತ ಪ್ರವೇಶ ನಿಷೇಧ: ಬಿಸಿಸಿಐ

IPL ಇಂದು ಕೇವಲ ಕ್ರೀಡೆಯಾಗಿ ಉಳಿದಿಲ್ಲ. ಲಕ್ಷಾಂತರ ಕೋಟಿ ವಹಿವಾಟು ನಡೆಸುವ ವಾಣಿಜ್ಯ ಕ್ರೀಡೆಯಾಗಿ ಮಾರ್ಪಟ್ಟಿದೆ. ಅನೈತಿಕ ಚಟುವಟಿಕೆಗಳು, ವೇಷ್ಯಾವಾಟಿಕೆ, ಮ್ಯಾಚ್ ಫಿಕ್ಸಿಂಗ್ ಚಟುವಟಿಕೆಗಳು ಕ್ರಿಕೆಟಿಗರನ್ನೂ ಬಿಟ್ಟಿಲ್ಲ.ಈ ನಿಟ್ಟಿನಲ್ಲಿ ಐಪಿಎಲ್​ ನಲ್ಲಿ ನಡೆಯುವ ಅನೈತಿಕ ಚಟುವಟಿಕೆ ಕೆಲವು ಅವ್ಯವಸ್ಥೆ, ಶಿಷ್ಟಾಚಾರ ಉಲ್ಲಂಘನೆ ಕುರಿತು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕ ಈ ದಿಟ್ಟ ನಿಲುವನ್ನು ತೆಗೆದುಕೊಂಡಿದೆ.

ಐಪಿಎಲ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಸ್ಪಾಟ್ ಫಿಕ್ಸಿಂಗ್ ಹಾಗೂ ಇತರೆ ವಾಮಮಾರ್ಗದ ಘಟನೆಗಳನ್ನು ಹತ್ತಿಕ್ಕಲು ಬಿಸಿಸಿಐ ಈ ನಿರ್ಧಾರಕ್ಕೆ ಮುಂದಾಗಿದೆ.ಹೊರಗಿನವರು ಸಹಾಯಕ ಸಿಬ್ಬಂದಿ ಮತ್ತು ಆಟಗಾರರನ್ನು ಭೇಟಿ ಮಾಡಲು ಕಡ್ಡಾಯವಾಗಿ ಅನುಮತಿ ಪತ್ರವನ್ನು ಪಡೆದಿರಬೇಕು.ಈ ನಿರ್ಧಾರ ಐಪಿಎಲ್ ನಲ್ಲಿ ವೃತ್ತಿಪರತೆ, ಸೂಕ್ತ ಭದ್ರತೆ ಮತ್ತು ಶಿಸ್ತು ಕ್ರಮಗಳನ್ನು ಬಲಪಡಿಸುವುದೇ ಮುಖ್ಯ ಎಂಬುದು ಬಿಸಿಸಿ ಅಭಿಮತವಾಗಿದೆ.

IPL2026 #BCCI #AntiCorruption #HoneyTrap #IPLSecurity #CricketNews #MatchFixing #SpotFixing

Comments (0)

Your email address will not be published. Required fields are marked *

Back to top button