ಸಿನಿಮಾ

‘ಧುರಂಧರ್’ ರಣವೀರ್ ಸಿಂಗ್ ಸಿನಿಮಾ ಅಲ್ಲವೇ ಅಲ್ಲ; ಕರೀನಾ ಕಪೂರ್ ಬೋಲ್ಡ್ ಸ್ಟೇಟ್‌ಮೆಂಟ್’!

ಬಾಲಿವುಡ್‌ನ ಬಹುನಿರೀಕ್ಷಿತ ‘ಧುರಂಧರ್’ ಸಿನಿಮಾ ಈಗ ಕೇವಲ ಟ್ರೈಲರ್ ಅಥವಾ ಮೇಕಿಂಗ್‌ನಿಂದಷ್ಟೇ ಅಲ್ಲದೆ, ನಟಿ ಕರೀನಾ ಕಪೂರ್ ಖಾನ್ ಅವರ ಒಂದು ಹೇಳಿಕೆಯಿಂದ ಭಾರಿ ಸುದ್ದಿಯಲ್ಲಿದೆ. ರಣವೀರ್ ಸಿಂಗ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಬಗ್ಗೆ ಕರೀನಾ ನೀಡಿರುವ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಬೆಂಕಿಯಂತೆ ಹಬ್ಬಿದೆ. ಇತ್ತೀಚೆಗೆ ಇನ್‌ಸ್ಟಾಗ್ರಾಮ್ ಸೇರಿದಂತೆ ಹಲವು ಕಡೆ ಕರೀನಾ ಅವರ ಮಾತುಗಳು ವೈರಲ್ ಆಗುತ್ತಿದ್ದು, “ಧುರಂಧರ್ ರಣವೀರ್ ಸಿಂಗ್ ಸಿನಿಮಾ ಅಲ್ಲವೇ ಅಲ್ಲ” ಎಂದು ಕರೀನಾ ನೀಡಿರುವ ಬೋಲ್ಡ್ ಸ್ಟೇಟ್‌ಮೆಂಟ್ ಹೊಸ ಚರ್ಚೆಗೆ ನಾಂದಿ ಹಾಡಿದೆ.

ಸಾಮಾನ್ಯವಾಗಿ ಯಾವುದೇ ದೊಡ್ಡ ಸಿನಿಮಾವನ್ನು ಆ ಚಿತ್ರದ ನಾಯಕ ನಟನ ಹೆಸರಿನಿಂದಲೇ ಗುರುತಿಸಲಾಗುತ್ತದೆ. ಆದರೆ ಕರೀನಾ ಈ ಸಂಪ್ರದಾಯಕ್ಕೆ ವಿರುದ್ಧವಾಗಿ ಮಾತನಾಡಿದ್ದು, ರಣವೀರ್ ಸಿಂಗ್ ಅವರ ಸ್ಟಾರ್‌ಡಮ್ ಅನ್ನು ಸೈಡ್‌ಗೆ ತಳ್ಳಿ ನಿರ್ದೇಶಕ ಆದಿತ್ಯ ಧರ್ ಪರ ಬ್ಯಾಟ್ ಬೀಸಿದ್ದಾರೆ. “ಇದು ಪಕ್ಕಾ ನಿರ್ದೇಶಕರ ಸಿನಿಮಾ, ಸಿನಿಮಾ ಲೋಕದಲ್ಲಿ ಇದನ್ನು ಆದಿತ್ಯ ಧರ್ ಸಿನಿಮಾ ಎಂದೇ ಕರೆಯುತ್ತಾರೆ” ಎಂದು ಹೇಳುವ ಮೂಲಕ ಚಿತ್ರದ ಅಸಲಿ ಕ್ರೆಡಿಟ್ ನಿರ್ದೇಶಕರಿಗೆ ಸಲ್ಲಬೇಕು ಎಂದು ಅವರು ಪರೋಕ್ಷವಾಗಿ ಬಾಂಬ್ ಸಿಡಿಸಿದ್ದಾರೆ. ಕರೀನಾ ಅವರ ಈ ಮಾತು ರಣವೀರ್ ಸಿಂಗ್ ಅವರ ಇಮೇಜ್‌ಗೆ ಧಕ್ಕೆ ತರುತ್ತಾ ಎನ್ನುವ ಪ್ರಶ್ನೆ ಕೂಡ ಈಗ ಎದ್ದಿದೆ.

ಸದ್ಯ ಬಾಲಿವುಡ್ ಅಂಗಳದಲ್ಲಿ ಸಿನಿಮಾ ಯಾರದ್ದು ಎನ್ನುವ ದೊಡ್ಡ ವಾಗ್ವಾದ ಶುರುವಾಗಿದೆ. ಒಂದು ಚಿತ್ರದ ಯಶಸ್ಸಿನಲ್ಲಿ ನಟನ ಶ್ರಮ ಹೆಚ್ಚಿರುತ್ತಾ ಅಥವಾ ನಿರ್ದೇಶಕನ ದೂರದೃಷ್ಟಿ ಮುಖ್ಯವಾ ಎನ್ನುವ ಬಗ್ಗೆ ನೆಟ್ಟಿಗರು ಎರಡು ಗುಂಪುಗಳಾಗಿ ಚರ್ಚೆ ಮಾಡುತ್ತಿದ್ದಾರೆ. ರಣವೀರ್ ಸಿಂಗ್ ಅಂತಹ ದೊಡ್ಡ ಸ್ಟಾರ್ ನಟನ ಸಿನಿಮಾ ಬಗ್ಗೆ ಕರೀನಾ ಇಷ್ಟೊಂದು ನೇರವಾಗಿ ಕಾಲೆಳೆದಿರುವುದು ಹಲವರಿಗೆ ಆಶ್ಚರ್ಯ ಮೂಡಿಸಿದೆ. ಒಟ್ಟಿನಲ್ಲಿ ‘ಧುರಂಧರ್’ ಬಿಡುಗಡೆಗೆ ಮುನ್ನವೇ ಈ ಕ್ರೆಡಿಟ್ ವಾರ್ ಮೂಲಕ ಸಿನಿಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ರಣವೀರ್ ಅಭಿಮಾನಿಗಳು ಕರೀನಾ ಹೇಳಿಕೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಿದೆ.

Comments (0)

Your email address will not be published. Required fields are marked *

Back to top button