ಯುದ್ಧಕ್ಕೆ ಬಂದು ಓಡಿಹೋದ ಟ್ರಂಪ್ – ಇರಾನ್ ಕದನ ವಿರಾಮಕ್ಕೆ ವ್ಯಂಗ್ಯ!

ಇರಾನ್ ಜೊತೆಗಿನ ಯುದ್ಧಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 5 ದಿನಗಳ ಕದನ ವಿರಾಮ ಘೋಷಿಸಿದ್ದಾರೆ. ಆದರೆ ಟ್ರಂಪ್ ಮಾತಿಗೆ ಇರಾನ್ ಒಪ್ಪಿಲ್ಲ. ನಮ್ಮ ಜೊತೆ ಚರ್ಚೆ ಮಾಡದೇ ಕದನ ವಿರಾಮ ಘೋಷಿಸಿದ್ದಾರೆ. ಅಮೆರಿಕ ಸೋಲುತ್ತಿದೆ ಎಂದು ಅಪಹಾಸ್ಯ ಮಾಡಿದೆ.
ದೊಡ್ಡಣ್ಣ ಡೊನಾಲ್ಡ್ ಟ್ರಂಪ್ 48 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ನಿಮ್ಮ ವಿದ್ಯುತ್ ಸ್ಥಾವರ ನಾಶ ಮಾಡುವುದಾಗಿ ಇರಾನಿಗೆ ಬೆದರಿಕೆ ಹಾಕಿದ್ದರು. ಈ ಡೆಡ್ಲೈನ್ ಒಳಗಡೆ ಇರಾನ್ ತೆರೆಯದೇ ಇದ್ದರೆ ದೊಡ್ಡ ಪ್ರಮಾಣದ ಯುದ್ಧ ನಡೆಯುವ ಸಾಧ್ಯತೆ ಇತ್ತು. ಆದರೆ, ಇರಾನ್ ಅಮೆರಿಕ ಅಧ್ಯಕ್ಷರ ಮಾತಿಗೆ ಸೊಪ್ಪು ಹಾಕಿರಲಿಲ್ಲ. ಇದೀಗ ಡೊನಾಲ್ಡ್ ಟ್ರಂಪ್ ಅವರೇ ಕದನ ವಿರಾಮ ಘೋಷಣೆ ಮಾಡಿದ್ದಾರೆ.
ಇರಾನ್ ಬೆದರಿಕೆಗೆ ಜಗ್ಗದ ಕಾರಣ ದೊಡ್ಡ ಪ್ರಮಾಣದ ದಾಳಿ ನಡೆಯಬಹುದು ಎಂದು ಊಹಿಸುತ್ತಿದ್ದಾಗಲೇ ಟ್ರಂಪ್ 5 ದಿನದ ಕದನ ವಿರಾಮ ಘೋಷಣೆ ಮಾಡಿದ್ದಾರೆ.
ಭಾರತದಲ್ಲೂ ನಾನಾ ಸಮಸ್ಯೆಗೆ ಕಾರಣವಾಗುತ್ತೆದೆ. ಅದ್ದರಿಂದ ನಾವು ಎಲ್ಲದಕ್ಕೂ ಸಜ್ಜಾಗಬೇಕು ಎಂದು ಮೋದಿ ಹೇಳಿದರು. ಇರಾನ್ ಯುದ್ಧದ ಕುರಿತು ಇದೇ ಮೊದಲ ಬಾರಿಗೆ ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವನ್ನು “ಆತಂಕಕಾರಿ” ಎಂದು ಕರೆದರು.




