#Exclusive NewsHealthTop Newsಸುದ್ದಿ

ಚೀನಾ ದೇಶ ಮತ್ತೆ ವಿಶ್ವಕ್ಕೆ ಕಂಟಕವಾಗುತ್ತಾ…?

ಬೀಜಿಂಗ್ : ಹ್ಯೂಮನ್  ಮೆಟಾಪ್ನ್ಯೂಮೋ  ವೈರಸ್ ಸೇರಿದಂತೆ ಚೀನಾದಲ್ಲಿ ಕೆಲವು ಹೊಸ ವೈರಸ್​ ಸೃಷ್ಟಿಯಾಗಿದ್ದು, ಇದು ಕೂಡ ಕೊರೊನಾ ವೈರಸ್​​ನಂತೆ ಸಾಂಕ್ರಾಮಿಕವಾಗಿ ಹರಡುವುದರಿಂದ ಮತ್ತೊಮ್ಮೆ ಹೆಲ್ತ್ ಎಮರ್ಜೆನ್ಸಿ ಸೃಷ್ಟಿಯಾಗಲಿದೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆಯಾಗಿಲ್ಲ. ಚೀನಾದಲ್ಲಿ ರೋಗಿಗಳಿಂದ ಆಸ್ಪತ್ರೆಗಳೆಲ್ಲಾ ತುಂಬಿವೆ ಎಂಬ ಪೋಸ್ಟ್​ ಒಂದು ಹರಿದಾಡುತ್ತಿದೆ. ಆದರೆ, ಈ ಪೋಸ್ಟ್​ಗಳಿಗೆ ಯಾವುದೇ ಆಧಾರವಿಲ್ಲ. ಈ ಹೊಸ ವೈರಸ್ ಬಗ್ಗೆ ಚೀನಾ ಯಾವುದೇ ಸ್ಪಷ್ಟನೆ ನೀಡಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯೂ ಈ ಬಗ್ಗೆ ಏನನ್ನೂ ಹೇಳಿಲ್ಲ.

HMPV ವೈರಸ್ ಎಂದರೇನು?

ಈ ವೈರಸ್ ದೇಹ ಹೊಕ್ಕಿದ ಮೇಲೆ ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡ್ತದೆ. ಕೆಮ್ಮು ಮತ್ತು ಸೀನುವಿಕೆಯ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ವೇಗವಾಗಿ ಹರಡುತ್ತದೆ. ಇದರ ಪ್ರೌಢಾವಸ್ಥೆಯ ಅವಧಿ ಮೂರರಿಂದ ಐದು ದಿನಗಳು. ಈ ವೈರಸ್ ಮಕ್ಕಳು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರೋರ ಮೇಲೆ ಆಕ್ರಮಣ ಮಾಡುತ್ತದೆ.

ಲಕ್ಷಣಗಳು ಏನು..?

ಕೆಮ್ಮು, ಜ್ವರ, ಮೂಗು ಕಟ್ಟುವುದು, ಶೀತ ಈ ವೈರಸ್‌ನ ಸಾಮಾನ್ಯ ಲಕ್ಷಣಗಳಾಗಿವೆ. HMPV ವೈರಸ್ ತಡೆಗಟ್ಟಲು ಯಾವುದೇ ಲಸಿಕೆ ಲಭ್ಯವಿಲ್ಲ. ಜನದಟ್ಟಣೆ ಇರುವ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಆಗಾಗ್ಗೆ ಕೈ ತೊಳೆಯುವುದಾಗಿದೆ. ಜೊತೆಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದಾಗಿದೆ.

Comments (0)

Your email address will not be published. Required fields are marked *

Back to top button