#Exclusive NewsTop News

Zaid Khan: ಡ್ರೋನ್ ಯಡವಟ್ಟು! ಜಮೀರ್ ಪುತ್ರ ಜೈದ್ ಖಾನ್ ವಿರುದ್ಧ ಗಂಭೀರ ಆರೋಪ

ಕಲ್ಟ್ ಚಿತ್ರದ ನಾಯಕ ಜೈದ್ (Zaid Khan) ಹಾಗೂ ನಿರ್ದೇಶಕ ಅನಿಲ್ (Director Anil) ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಜೈದ್ ಖಾನ್ ಅವರು ಸಚಿವ ಜಮೀರ್ ಪುತ್ರ‌ನಾಗಿದ್ದು ಕನ್ನಡ ಚಿತ್ರರಂಗದಲ್ಲಿ (Sandalwood) ಯುವನಟನಾಗಿ ಬೆಳೆಯುತ್ತಿದ್ದಾರೆ. ಜೈದ್ ಖಾನ್ ನಟಿಸುತ್ತಿರುವ ಚಿತ್ರತಂಡದ ಯಡವಟ್ಟಿಗೆ ಬೆಂಗಳೂರಿನಲ್ಲಿ ಡ್ರೋನ್ ಟೆಕ್ನಿಷಿಯನ್ ಆತ್ಮಹತ್ಯೆಗೆ ಪ್ರಯತ್ನ ಮಾಡಿರುವ ಘಟನೆ ನಡೆದಿದೆ.ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ ಡ್ರೋನ್ ಟೆಕ್ನಿಷಿಯನ್. ಬೆಂಗಳೂರಿನ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಕಳೆದ 21 ರಂದು ಕಲ್ಟ್ ಚಿತ್ರತಂಡ ಚಿತ್ರದುರ್ಗದಲ್ಲಿ ಶೂಟಿಂಗ್ ನಡೆಸುತ್ತಿತ್ತು. ಕಲ್ಟ್ ಚಿತ್ರಕ್ಕೆ ಸಂತೋಷ್ ಡ್ರೋನ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಸ್ವಂತ ಡ್ರೋನ್ ಹೊಂದಿರುವ ಸಂತೋಷ್ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ.

ದಿನಕ್ಕೆ 25 ಸಾವಿರ ಚಾರ್ಜ್ ಮಾಡಿ ಡ್ರೋನ್ ಮುಖಾಂತರ ಶೂಟ್ ಮಾಡುತ್ತಿದ್ದ ಸಂತೋಷ್ ಅವರು ಸ್ವಂತವಾಗಿ ಡ್ರೋನ್ ಖರೀದಿಸಿ ಶೂಟಿಂಗ್ ಮಾಡುತ್ತಿದ್ದರು. 25 ಲಕ್ಷ ಸಾಲ ಮಾಡಿ ಡ್ರೋನ್ ಖರೀದಿಸಿದ್ದ ಸಂತೋಷ್ ಮಾರ್ಟಿನ್ , ಯುವ ಸೇರಿದಂತೆ ಹಲವು ಚಿತ್ರಗಳಿಗೆ ಕೆಲಸ ಮಾಡಿದ್ದರು.

ಚಿತ್ರದುರ್ಗದಲ್ಲಿ ರಿಸ್ಕ್ ಮೇರೆಗೆ ಜೈದ್ ಖಾನ್ ಅವರ ಸಿನಿಮಾದಲ್ಲಿ ಶೂಟಿಂಗ್ ಮಾಡುತ್ತಿದ್ದರು. ಆದರೆ ಶೂಟಿಂಗ್ ವೇಳೆ ಡ್ರೋನ್ ವಿಂಡ್ ಫ್ಯಾನ್ ಗೆ ಟಚ್ ಆಗಿ ಪೀಸ್ ಪೀಸ್ ಆಗಿತ್ತು.

ಇದಾದ ಬಳಿಕ ಸಂತೋಷ್ ಗೆ ಕೊಂಚವೂ ನಷ್ಟವನ್ನ ಕಟ್ಟಿಕೊಡದ ಆರೋಪ ಕೇಳಿ ಬಂದಿದೆ. ಕಲ್ಟ್ ಚಿತ್ರವನ್ನ ಸಚಿವ ಜಮೀರ್ ಪುತ್ರ ಜೈದ್ ನಿರ್ಮಾಣ ಮಾಡುತ್ತಿದ್ದರು. ಇದಕ್ಕೆ ನೊಂದು ಸಂತೋಷ್ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಅದೃಷ್ಟವಶಾತ್ ಆತ್ಮಹತ್ಯೆಗೆ ಶರಣಾಗುವಾಗ ಅದನ್ನ ಕಂಡು ಕುಟುಂಬಸ್ಥರು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಟೆಕ್ನಿಷಿಯನ್ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments (0)

Your email address will not be published. Required fields are marked *

Back to top button