#Exclusive NewsTop News

ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ: ಸಾಲುಮರದ ತಿಮ್ಮಕ್ಕ, ಪ್ರಮೋದಾ ದೇವಿ ಸೇರಿ ಅನೇಕ ಗಣ್ಯರಿಂದ ದರ್ಶನ

ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆಯ ಸಾರ್ವಜನಿಕ ದರ್ಶನೋತ್ಸವದ ಮೊದಲ ದಿನವೇ ಶಕ್ತಿದೇವತೆಯನ್ನು ಕಣ್ತುಂಬಿಕೊಳ್ಳಲು ಜನ ಸಾಗರವೇ ಹರಿದು ಬಂದಿದೆ. ರಾಜಮಾತೆ ಪ್ರಮೋದಾದೇವಿ, ಶತಾಯುಷಿ ಸಾಲುಮರದ ತಿಮ್ಮಕ್ಕ, ಪರಿಷತ್ ಸದಸ್ಯರಾದ ಬೋಜೇಗೌಡ, ಸೂರಜ್ ರೇವಣ್ಣ, ಸಿನಿತಾರೆಯರಾದ ವಶಿಷ್ಟ ಹಾಗೂ ಹರಿಪ್ರಿಯ ಸೇರಿ ಹಲವು ಗಣ್ಯರು ಸೇರಿ ಸಾವಿರ ಸಾವಿರ ಜನರು ದೇವಿ ದರ್ಶನ ಮಾಡಿದರು.

ಹಾಸನ, ಅಕ್ಟೋಬರ್ 26: ಹಾಸನಾಂಬೆ ಸಾರ್ವಜನಿಕ ದರ್ಶನದ ಮೊದಲ ದಿನವೇ ಜನ ಜಾತ್ರೆಯೇ ಹರಿದುಬಂದಿದೆ. ಸರ್ವಾಲಂಕಾರ ಭೂಷಿತೆಯಾಗಿರುವ ದೇವಿಯನ್ನು ಕಣ್ತುಂಬಿಕೊಂಡ ಭಕ್ತರು, ಗರ್ಭಗುಡಿಯಲ್ಲಿ ಎಂದೂ ಆರದ ದೀಪವನ್ನು ನೋಡಿ ವಿಸ್ಮಿತರಾದರು. ಗಣ್ಯಾತಿ ಗಣ್ಯರೂ ಶಕ್ತಿದೇವತೆಯ ದರ್ಶನ ಪಡೆದರು.

ದೇಗುಲದ ಬಾಗಿಲು ತೆರೆದು ದೇಗುಲದ ಸ್ವಚ್ಛತೆ, ದೇವಿಗೆ ಅಲಂಕಾರ ಮತ್ತು ನೈವೇದ್ಯ, ಪೂಜೆಗಳ ಬಳಿಕ ಶುಕ್ರವಾರ ಮುಂಜಾನೆ 4 ಗಂಟೆಗೆ ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡಲಾಯಿತು. ಮದ್ಯರಾತ್ರಿಯಿಂದಲೇ ಸರತಿ ಸಾಲಿನಲ್ಲಿ ಬಂದ ಸಹಸ್ರಾರು ಭಕ್ತರು ದೇವಿಯನ್ನು ಕಣ್ತುಂಬಿಕೊಂಡು ಪುನೀತರಾದರು.

Comments (0)

Your email address will not be published. Required fields are marked *

Back to top button