#Exclusive NewsTop News
ಹಾಸನ: ಸಕಲೇಶಪುರದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಆನೆ ಸಾವು


ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬನವಾಸೆ ಗ್ರಾಮದ ಬಳಿ ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಮೃತಪಟ್ಟಿದೆ. ಅಂದಾಜು 25 ವರ್ಷದ ಒಂಟಿಸಲಗ ಸಾವಿಗೀಡಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಾಸನ, ಅಕ್ಟೋಬರ್ 17: ಸಕಲೇಶಪುರ (Sakleshpur) ತಾಲೂಕಿನ ಬನವಾಸೆ ಗ್ರಾಮದ ಬಳಿ ಕಾಡಾನೆಯೊಂದು (Elephant) ಮೃತಪಟ್ಟಿದೆ. ಗ್ರಾಮದ ಬಿಎಸ್ಎನ್ಎಲ್ ಟವರ್ ಬಳಿ ವಿದ್ಯುತ್ ತಂತಿ ಸ್ಪರ್ಶಿಸಿ ಅಂದಾಜು 25 ವರ್ಷದ ಒಂಟಿಸಲಗ ಸಾವಿಗೀಡಾಗಿದೆ. ಆನೆ ಆಹಾರ ಅರಸಿ ಗ್ರಾಮದ ಬಳಿ ಬಂದಿತ್ತು. ಈ ವೇಳೆ ವಿದ್ಯುತ್ ತಂತಿಗೆ ಆನೆಯ ಸೊಂಡಿಲು ತಾಗಿ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




