ಸುದ್ದಿ

ಡಿಜೆ ಸೆಟ್ ತೆಗೆದುಕೊಂಡ ಹೋಗುತ್ತಿದ್ದ ಟ್ರ್ಯಾಕ್ಟರ್ ಬ್ರೇಕ್ ಫೇಲ್‌ ಆಟೋಗೆ ಡಿಕ್ಕಿ: ಚಾಲಕನಿಗೆ ಗಂಭೀರ ಗಾಯ.

ಹುಬ್ಬಳ್ಳಿ: ಡಿಜೆ ಸೆಟ್ ತೆಗೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಬ್ರೇಕ್ ಫೇಲಾಗಿ ಅಟೋಗೆ ಡಿಕ್ಕಿಯಾದ ಪರಿಣಾಮ‌ ಚಾಕನಿಗೆ ಗಂಭೀರವಾದ ಗಾಯವಾಗಿರುವ ಘಟನೆ ರಾತ್ರಿ ಹುಬ್ಬಳ್ಳಿಯ ಆನಂದ ನಗರದಲ್ಲಿ ನಡೆದಿದೆ.

ಆನಂದ ನಗರದ ಮುಖ್ಯ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದ್ದು, ದೊಡ್ಡ ದುರಂತವೊಂದು ತಪ್ಪಿದಂತಾಗಿದೆ‌. ಘಟನೆಯಲ್ಲಿ ಅಟೋ ಮುಂಭಾಗ ಜಖಂ ಆಗಿದೆ. ಇನ್ನೂ ಗಾಯಾಳು ಅಟೋ ಚಾಲಕನ ಹೆಸರು ತಿಳಿದು ಬರಬೇಕಾಗಿದೆ.‌

ಇನ್ನೂ ಆನಂದ ನಗರದ ನಿವಾಸಿಗಳು ಹನುಮ ಹಾಗೂ ರಾಮ ಜಯಂತಿ ಒಂದೇ ದಿನ‌ಆಚರಣೆ ಮಾಡುವ ಉದ್ದೇಶದಿಂದ, ಆನಂದ ನಗರದಿಂದ ಶ್ರೀ ಸುದ್ದಾರೂಢ ಮಠದವರೆಗೆ ಮೆರವಣಿಗೆ ಹಮ್ಮಿಕೊಂಡಿದರು.‌ ಈ ಹಿನ್ನೆಲೆಯಲ್ಲಿ ಡಿಜೆ ತರಿಸಿಕೊಳ್ಳಲಾಗಿತ್ತು. ಮಡೆಜೆ ಸೆಟ್ ಹೊತ್ತು ಆನಂದ ನಗರಕ್ಕೆ ಬರುತ್ತಿದ್ದ ವೇಳೆ ಟ್ರ್ಯಾಕ್ಟರ್ ಬ್ರೇಕ್ ಫೇಲ್ ಆಗಿ ದುರ್ಘಟನೆ ಸಂಭವಿಸಿದೆ.‌

ಸ್ಥಳೀಯರ ಮಾಹಿತಿ ಮೇರೆಗೆ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ಕೈಗೊಂಡಿದ್ದಾರೆ. ‌

Comments (0)

Your email address will not be published. Required fields are marked *

Back to top button