ಕ್ರಿಕೆಟ್ಸುದ್ದಿ

ಗುಜರಾತ್ ವಿರುದ್ಧ ವಿಲ್ ಜಾಕ್ಸ್ ಶತಕ , RCBಗೆ 9 ವಿಕೆಟ್‌ಗಳ ಜಯ

ನವದೆಹಲಿ: ಬೆಂಗಳೂರು ತಂಡವು 16 ಓವರ್​ನಲ್ಲಿ 1 ವಿಕೆಟ್ ನಷ್ಟಕ್ಕೆ 206 ರನ್​ ಗಳಿಸುವ ಮೂಲಕ 9 ವಿಕೆಟ್​​ ಗಳ ಭರ್ಜರಿ ಗೆಲುವು ದಾಖಲಿಸಿದೆ.

ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಗುಜರಾತ್ ಟೈಟನ್ಸ್ ನ ಬೌಲರ್ ಗಳನ್ನು ಚೆಂಡಾಡಿದ ಆರ್​ಸಿಬಿ ತಂಡದ ಯುವ ಆಲ್ ರೌಂಡರ್ ವಿಲ್ ಜ್ಯಾಕ್ಸ್ 41 ಎಸೆತಗಳಲ್ಲೇ ಚೊಚ್ಚಲ ಐಪಿಎಲ್ ಶತಕ ಸಿಡಿಸುವ‌ ಮೂಲಕ 16 ಓವರ್ ಗಳಲ್ಲೇ‌ 205 ರನ್ ಗಳ ಗಡಿ ತಲುಪಿದ ಆರ್​ಸಿಬಿಗೆ ಗೆಲುವಿನ ಮಾಲೆ ತೊಡಿಸಿದ್ದಾರೆ.

ಮತ್ತೊಂದು ತುದಿಯಲ್ಲಿ ಮೂಕವಿಸ್ಮಿತರಾಗಿ ವಿಲ್ ಜ್ಯಾಕ್ಸ್ ಆವರ‌ ಆಟವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ವಿರಾಟ್ ಕೊಹ್ಲಿ ಕೂಡ‌ ಅಜೇಯ 70 ರನ್ ಸಿಡಿಸಿ ತಮ್ಮ ಸ್ಟ್ರೆಕ್ ರೇಟ್ ಟೀಕಿಸುವವರಿಗೆ ತಕ್ಕ ಉತ್ತರ ನೀಡಿದ್ದಾರೆ.

https://twitter.com/RCBTweets/status/1784573996295733608?ref_src=twsrc%5Etfw%7Ctwcamp%5Etweetembed%7Ctwterm%5E1784573996295733608%7Ctwgr%5Ef4b34ef25f1207769f25b90cbef32ebf1d9223a4%7Ctwcon%5Es1_&ref_url=https%3A%2F%2Fkannadanewsnow.com%2Fkannada%2Fwill-jacks-century-against-gujarat-rcb-won-by-9-wickets%2F

Comments (0)

Your email address will not be published. Required fields are marked *

Back to top button