3 ಲಕ್ಷ ವಸೂಲಿ ಮಾಡಿದ SP ಗನ್ ಮ್ಯಾನ್

ಅಕ್ರಮ ವಸೂಲಿಗೆ ಗನ್ ಮ್ಯಾನ್ ಅರೆಸ್ಟ್

ಬಳ್ಳಾರಿ : 3 ಲಕ್ಷ ಹಣ ವಸೂಲಿ ಮಾಡಿದ ಆರೋಪದಡಿ SP ಗನ್ ಮ್ಯಾನ್ ದೇವರಾಜ್ ನನ್ನು ಮೋಕಾ ಪೊಲೀಸರು ಬಂಧಿಸಿದ್ದಾರೆ. ಇದು “ಬೇಲಿಯೇ ಎದ್ದು ಹೊಲ ಮೇಯ್ದಂತಿದೆ.” ಅಕ್ರಮ ಪಡಿತರ ಅಕ್ಕಿ ಸಾಗಣೆಯನ್ನೇ ಬಂಡವಾಳ ಮಾಡಿಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಗನ್ಮ್ಯಾನ್ ದೇವರಾಜ್ ಅಕ್ರಮ ವಸೂಲಿ ಮಾಡಿದ್ದಾರೆ.ಇದು ತಿಳಿದ ಕೂಡಲೆ ಮೋಕಾ ಪೊಲೀಸರು ಬಂಧಿಸಿದ್ದಾರೆ. ಈತ SP ತನಿಖಾದಳದ ಹೆಸರಿನಲ್ಲಿ ಲಾರಿಗಳನ್ನು ಅಡ್ಡಗಟ್ಟಿ ₹3 ಲಕ್ಷ ವಸೂಲಿ ಮಾಡಿದ್ದ ಎನ್ನಲಾಗಿದೆ.
ಪಡಿತರ ಅಕ್ಕಿ ತುಂಬಿಕೊಂಡು ತೆರಳುತ್ತಿದ್ದ ಎರಡು ಲಾರಿಗಳು ಮಡಿಕೇರಿಯಿಂದ ಆಂಧ್ರಪ್ರದೇಶದ ಕಡೆಗೆ ಬರುತ್ತಿದ್ದವು. ಈ ವಾಹನಗಳನ್ನು ಅಡ್ಡಗಟ್ಟಿದ್ದ ಆರೋಪಿ ಹಾಗೂ ಸಹಚರರು ಎಸ್ಪಿ ಸ್ಕ್ವಾಡ್ ಎಂದು ಹೇಳಿ ಐದು ಲಕ್ಷ ಕೇಳಿದ್ದರು.ನಂತರ ಮೂರು ಲಕ್ಷ ರೂ. ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ.
ಇದಕ್ಕೂ ಮೊದಲು ಹಣ ನೀಡದಿದ್ದರೆ ಲಾರಿಗಳನ್ನು ಸೀಜ್ ಮಾಡಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಶರಭಯ್ಯ ಎಂಬುವವರು ಮೋಕಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಾಥಮಿಕ ತನಿಖೆಯಲ್ಲಿ ಹಣ ವಸೂಲಿ ನಡೆಸಿರುವುದು ಸಾಬೀತಾಗಿದ್ದು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ಅವರು ಕ್ರಮ ಕೈಗೊಂಡು ಬಂಧನಕ್ಕೆ ಸೂಚನೆ ನೀಡಿದ್ದಾರೆ.
ಬಳ್ಳಾರಿ ಎಸ್ಪಿ ಸುಮನ್ ಪನ್ನೇಕರ್ ಅವರು ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾತನಾಡಿ, ‘ಏಪ್ರಿಲ್ 27ರ ರಾತ್ರಿ ಮೋಕಾ ಅರಣ್ಯದ ಬಳಿ ಅಕ್ಕಿ ಸಾಗಾಟ ಮಾಡಲಾಗುತ್ತಿತ್ತು. ಎಸ್ಪಿ ಸ್ಕ್ಯಾಡ್ ಎಂದು ಹೇಳಿಕೊಂಡು ಎಸ್ಪಿ ಗನ್ ಮ್ಯಾನ್ ದೇವರಾಜ್ ದಾಳಿ ಮಾಡಿದ್ದಾನೆ. ಅಕ್ರಮ ಅಕ್ಕಿ ಸಾಗಾಟ ಪ್ರಕರಣ ದಾಖಲು ಮಾಡುವುದಾಗಿ ಬೆದರಿಸಿದ್ದಾನೆ. ಐದು ಲಕ್ಷ ಡಿಮ್ಯಾಂಡ್ ಮಾಡಿ ಮೂರು ಲಕ್ಷ ವಸೂಲಿ ಮಾಡಿದ್ದಾನೆ. ಅಕ್ರಮ ಅಕ್ಕಿ ಸಾಗಾಣೆ ಮಾಡ್ತಿದ್ದ ಶರಭಯ್ಯ ಎನ್ನುವವರು ದೂರು ನೀಡಿದ್ದಾರೆ’ ಎಂದರು.
#Ballari #PoliceCorruption #SPGunman #Arrested #ExtortionCase #BallariNews #KarnatakaPolice #SumanPannékar #CorruptionFreeIndia #MokaPolice #RiceSmuggling




