Jobs

ರಾಯಚೂರು ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಹುದ್ದೆಗಳಿಗೆ ನೌಕರರು ಬೇಕಾಗಿದ್ದಾರೆ

ಒಟ್ಟು ಹುದ್ದೆಗಳು: 11

ರಾಯಚೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಅಡಿಯಲ್ಲಿ 2025-26ನೇ ಸಾಲಿಗೆ ಮಂಜೂರಾಗಿರುವ ವಿವಿಧ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಗುತ್ತಿಗೆ ಆಧಾರದಡಿ ಮೆರಿಟ್ ಕಮ್ ರೋಸ್ಟರ್ ಪದ್ಧತಿಯಂತೆ ನೇಮಕಾತಿ ನಡೆಯಲಿದೆ.

ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು- 01
ಆಯುಷ್ ವಿಭಾಗದ ಪಂಚಕರ್ಮ ಥೆರಪಿಸ್ಟ್- 01
ಎಪಿಡೆಮಿಯಾಲಜಿಸ್ಟ್- 01
ಡಿ.ಎಂ.ಎಚ್.ಪಿ. ವಿಭಾಗದ ಕಮ್ಯೂನಿಟಿ ನರ್ಸ್- 01
ಡಿ.ಎಂ.ಎಚ್.ಪಿ. ವಿಭಾಗದ ಆಪ್ತ ಸಮಾಲೋಚಕರು- 01
ಎನ್‌ಸಿಡಿ ವಿಭಾಗದ ಆಪ್ತ ಸಮಾಲೋಚಕರು- 01
ಎನ್‌ಟಿಇಪಿ ಕಾರ್ಯಕ್ರಮದ ಲ್ಯಾಬ್ ಟೆಕ್ನೀಷಿಯನ್- 01
ಆಡಿಯೋಲಾಜಿಸ್ಟ್- 01
ಆಡಿಯೋಮೆಟ್ರಿಕ್ ಅಸಿಸ್ಟೆಂಟ್- 01
ಶ್ರವಣ ವೈಕಲ್ಯ ಮಕ್ಕಳ ಬೋಧಕರು- 01
ಜಿಲ್ಲಾ ಡಿಇಐಸಿ ವ್ಯವಸ್ಥಾಪಕರು- 01
ಆಸಕ್ತ ಅಭ್ಯರ್ಥಿಗಳು ಮೇ 11ರಿಂದ ಮೇ 18, 2026ರವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಅರ್ಜಿ ಸಲ್ಲಿಸಬಹುದು. ನಿಗದಿತ ಕ್ಷೇತ್ರದಲ್ಲಿ ಪದವಿ ಹೊಂದಿರಬೇಕು. ನೇರ ಸಂದರ್ಶನದ ದಿನಾಂಕವನ್ನು ಮುಂದಿನ ದಿನಗಳಲ್ಲಿ ಇಲಾಖೆ ಪ್ರಕಟಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Raichur #JobAlert #NHMKarnataka #Recruitment2026 #HealthDepartmentJobs #RaichurNews #KarnatakaGovernmentJobs

Comments (0)

Your email address will not be published. Required fields are marked *

Back to top button