Freedom TV

ಹನಿ ನೀರಿಗೂ ಪರಿತಪಿಸುತ್ತಿರುವ ರಾಯಚೂರು ಜನತೆ

ಬಿಸಿಲನಾಡಿನಲ್ಲಿ ಮೂಲಸೌಕರ್ಯಗಳೇ ಇಲ್ಲ!

ರಾಯಚೂರು: ಹೆಸರೇ ಸೂಚಿಸುವಂತೆ ರಾಯಚೂರು ಬಿಸಿಲ ನಾಡು. ಸೂಕ್ತ ಸೌಕರ್ಯಗಳಿಲ್ಲದೆ ಜನರು ಗುಳೇ ಹೋಗೋದು ಸಾಮಾನ್ಯ ಸಂಗತಿ. ಆದರೆ ಗ್ರಾಮಗಳಲ್ಲಿ ವಾಸಿಸುವ ವೃದ್ಧರು, ಕೃಷಿಕರು ಹಾಗೂ ಮಕ್ಕಳಿಗೆ ಕನಿಷ್ಟ ಮೂಲಸೌಕರ್ಯವೇ ಇಲ್ಲದಂತಾಗಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಸರ್ಜಾಪುರ ಗ್ರಾಮದ ಜನರ ಗೋಳು ಕೇಳೋರೇ ಗತಿ ಇಲ್ಲ. ರಾಯಚೂರು ಜಿಲ್ಲೆಯಲ್ಲಿ ಚುನಾಯಿತ ಪ್ರತಿನಿಧಿಗಳು ಇದ್ದಾರೋ ನಾಪತ್ತೆಯಾಗಿದ್ದಾರೋ ದೇವರೇ ಬಲ್ಲ. ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವವರು ಕಾಣೆಯಾಗಿದ್ದಾರೆ. ನೇಮಕಗೊಂಡ ಆಡಳಿತಾಧಿಕಾರಿಗಳು‌ ಗ್ರಾಮ ಪಂಚಾಯತ್ ಕಡೆ ಸುಳಿಯದಿರುವುದೇ ಸಮಸ್ಯೆಯಾಗಿದೆ. ಬಿರು ಬೇಸಿಗೆ ಸಮಯದಲ್ಲಿ ಜನತೆ ಕುಡಿಯುವ ನೀರು ಸಿಗದೆ ಪರಿತಪಿಸುತ್ತಿದ್ದಾರೆ.ಇನ್ನು ಜಾನುವಾರುಗಳ ಕತೆಯೇನು?

ಗ್ರಾಮಗಳಲ್ಲಿ ಬೀದಿ ದೀಪ ನಿರ್ವಹಣೆ ಮಾಡದೆ ಇರುವುದರಿಂದ ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ. ಮನೆಯ ದಾಖಲೆಗಳು ಸಿಗದೆ ಜನ ಪರದಾಡುತ್ತಿದ್ದಾರೆ.ಗ್ರಾಮ ಪಂಚಾಯತಿಗಳು ಸಾಮಾನ್ಯರ ಜೀವನಕ್ಕೆ ವರವಾಗದೆ ಶಾಪವಾಗಿ ಪರಿಣಮಿಸಿವೆ.ಹೇ ದೇವ ಕರುಣೆ ತೋರೋ ಎನ್ನುತ್ತಿದ್ದಾರೆ ಸ್ಥಳೀಯ ಜನ. ಲಿಂಗಸುಗೂರಿನ ಶಾಸಕ ಮಾನಪ್ಪ ವಜ್ಜಲ್ ಈ ಕೂಡಲೆ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ರಾಯಚೂರಿನ ಜನತೆಗೆ ನೆಮ್ಮದಿ ನೀಡಬೇಕಿದೆ.

Raichur #Lingsugur #Sarjapura #ManappaVajjal #KarnatakaNews #WaterCrisis #RuralDevelopment #SaveRaichur #ರಾಯಚೂರು #ಲಿಂಗಸುಗೂರು #ಕುಡಿಯುವನೀರು #ಜನರಗೋಳು

Comments (0)

Your email address will not be published. Required fields are marked *

Back to top button