bengaluru

ಸಿದ್ದು ರಾಜೀನಾಮೆ – ಕಣ್ಣೀರಿಟ್ಟ ಸಚಿವ ಸಂತೋಷ್ ಲಾಡ್!

labour minister santhosh lad cries on com resign issue

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ನಿರ್ಧಾರ ಇಡೀ ರಾಜ್ಯ ಕಾಂಗ್ರೆಸ್ ಪಾಳಯವನ್ನು ಭಾವುಕತೆಯ ಕಡಲಿನಲ್ಲಿ ಮುಳುಗಿಸಿದೆ. ಇಂದು ಬೆಳಿಗ್ಗೆ ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ನಡೆದ ಸಚಿವರ ಕೊನೆಯ ಬ್ರೇಕ್‌ಫಾಸ್ಟ್‌ ಮೀಟಿಂಗ್ ಎಷ್ಟು ಭಾವುಕವಾಗಿತ್ತು ಎಂಬುದಕ್ಕೆ ಸಚಿವ ಸಂತೋಷ್ ಲಾಡ್ ಅವರ ಕಣ್ಣೀರೇ ಸಾಕ್ಷಿಯಾಗಿದೆ. ಸಭೆ ಮುಗಿಸಿ ಹೊರಬಂದ ಸಚಿವರು ಮಾಧ್ಯಮಗಳ ಎದುರೇ ದುಃಖ ತಡೆಯಲಾರದೆ ಕಾರಿನಲ್ಲಿ ಕುಳಿತಲ್ಲೇ ಕಣ್ಣೀರು ಹಾಕಿದ ಹೃದಯಸ್ಪರ್ಶಿ ಪ್ರಸಂಗ ನಡೆದಿದೆ.

ಕಾವೇರಿ ನಿವಾಸದಲ್ಲಿ ನಡೆದ ಹಿರಿಯ ಸಚಿವರು ಹಾಗೂ ಆಪ್ತರ ಮಹತ್ವದ ಉಪಹಾರ ಸಭೆ ಮುಗಿದ ಬಳಿಕ ಸಚಿವ ಸಂತೋಷ್ ಲಾಡ್ ಅವರು ತಮ್ಮ ಕಾರಿನಲ್ಲಿ ವಾಪಸ್ ತೆರಳುತ್ತಿದ್ದರು. ಈ ವೇಳೆ ಕಾರನ್ನು ಮುತ್ತಿಕೊಂಡ ಮಾಧ್ಯಮ ಪ್ರತಿನಿಧಿಗಳು, “ಸಿಎಂ ರಾಜೀನಾಮೆ ನೀಡುವುದು ಖಚಿತವೇ? ಸಭೆಯಲ್ಲಿ ಏನಾಯ್ತು?” ಎಂದು ಪ್ರಶ್ನೆಗಳ ಸುರಿಮಳೆಗರೆದರು.

ಈ ಪ್ರಶ್ನೆ ಎದುರಾಗುತ್ತಿದ್ದಂತೆ ಸಂತೋಷ್ ಲಾಡ್ ಅವರಿಗೆ ತಮ್ಮ ದುಃಖವನ್ನು ಹತ್ತಿಕ್ಕಲು ಸಾಧ್ಯವಾಗಲಿಲ್ಲ, ಕುಳಿತಲ್ಲೇ ಕಣ್ಣೀರು ಹಾಕಲು ಆರಂಭಿಸಿದರು. ಗದ್ಗದಿತ ಕಂಠದಿಂದ, “ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿಗಳು ಅಧಿಕೃತವಾಗಿ ರಾಜೀನಾಮೆ ಕೊಡುತ್ತಾರೆ…” ಎಂದಷ್ಟೇ ಹೇಳಿ, ಮುಖ ಮುಚ್ಚಿಕೊಂಡು ಕಣ್ಣೀರು ಹಾಕುತ್ತಾ ಅಲ್ಲಿಂದ ಹೊರಟುಹೋದರು.

#FreedomTV #SanthoshLad #SanthoshLadCrying #SiddaramaiahResigns #KaveriResidence #BreakfastMeeting #KarnatakaPolitics #Siddaramaiah #SaddemiseOfPower #BengaluruNews #BreakingNewsKarnataka #CongressEmotional #PoliticalUpdates #ಕನ್ನಡಸುದ್ದಿ #ಸಂತೋಷ್ಲಾಡ್ಕಣ್ಣೀರು

Comments (0)

Your email address will not be published. Required fields are marked *

Back to top button