bengaluruFreedom TV

ಜಿಬಿಎ ಮಾರ್ಷಲ್‌ಗಳ ತುಘಲಕ್ ದರ್ಬಾರ್‌

ಬೀದಿ ವ್ಯಾಪಾರಿಗಳು ಮತ್ತು ಹೋಟೆಲ್ ಗೆ ದಂಡ!

ಬೆಂಗಳೂರು: ನಗರದ ಸ್ವಚ್ಛತೆ ಮತ್ತು ಶಿಸ್ತು ಕಾಪಾಡಬೇಕಾದ ಜಿಬಿಎ ಮಾರ್ಷಲ್‌ಗಳು ಈಗ ಅಸಹಾಯಕ ಬೀದಿಬದಿ ವ್ಯಾಪಾರಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದಾರೆ. ಲಕ್ಷ ಲಕ್ಷ ಸಂಪಾದಿಸುವ ದೊಡ್ಡ ದೊಡ್ಡ ಹೋಟೆಲ್‌ಗಳ ಮುಂದೆ ಮೌನಕ್ಕೆ ಶರಣಾಗುವ ಈ ಮಾರ್ಷಲ್​ ಗಳು ಹೊಟ್ಟೆಪಾಡಿಗಾಗಿ ಫುಟ್‌ಪಾತ್ ಮೇಲಿನ ವ್ಯಾಪಾರಿಗಳ ಮೇಲೆ ಅಟ್ಟಹಾಸ ಮೆರೆಯುತ್ತಿದ್ದಾರೆ.
ಫುಟ್‌ಪಾತ್ ವ್ಯಾಪಾರಿಗಳ ಕಣ್ಣೀರು, ಮಾರ್ಷಲ್‌ಗಳ ಅಬ್ಬರ!

ಸಣ್ಣಪುಟ್ಟ ತಪ್ಪುಗಳಿಗೂ ಬೀದಿಬದಿ ವ್ಯಾಪಾರಿಗಳಿಗೆ ಬರೋಬ್ಬರಿ ₹1,000 ವರೆಗೆ ದಂಡ ವಿಧಿಸುತ್ತಿದ್ದು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ನೂರಾರು ನೆಪಗಳನ್ನು ಒಡ್ಡಿ ಬಡ ವ್ಯಾಪಾರಿಗಳ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. “ನಾವು ದಿನವಿಡೀ ಕಷ್ಟಪಟ್ಟು ದುಡಿಯುವುದೇ ಸಾವಿರ ರೂಪಾಯಿ, 1000 ರೂ ಗಳನ್ನು ದಂಡದ ರೂಪದಲ್ಲಿ ನೀಡಿದರೆ ನಾವು ಬದುಕುವುದಾದರೂ ಹೇಗೆ?” ಎಂದು ವ್ಯಾಪಾರಿಗಳು ಕಣ್ಣೀರಿಡುತ್ತಿದ್ದಾರೆ.ಹೋಟೆಲ್ ನಲ್ಲಿ ನಿಷೇಧಿತ ಪ್ಲಾಸ್ಟಿಕ್ ಕವರ್ ಬಳಸುತ್ತಿದ್ದಾರೆಂಬ ನೆಪವೊಡ್ಡಿ ರೂ.2000 ದಂಡ ವಿಧಿಸಿರುವ ಈ ಮಾರ್ಷಲ್ ಗಳ ಆಟಾಟೋಪ ಎಲ್ಲೆ ಮೀರಿದೆ.

ಶ್ರೀಮಂತ ಹೋಟೆಲ್‌ಗಳಿಗೆ ‘ವಿಶೇಷ’ ರಿಯಾಯಿತಿ!
ಬಡವರ ಮೇಲೆ ಗದಾಪ್ರಹಾರ ಮಾಡುವ ಇವರು, ಕಮರ್ಷಿಯಲ್ ಹೋಟೆಲ್‌ಗಳ ಮುಂದೆ ಹೋದಾಗ ಮಾತ್ರ ಮೃದು ಧೋರಣೆ ತಳೆಯುತ್ತಿದ್ದಾರೆ. ನಿಯಮದ ಪ್ರಕಾರ ₹20,000 ದಂಡ ಹಾಕಬೇಕಾದ ಕಡೆಗಳಲ್ಲಿ ಕೇವಲ ₹2,000 ದಂಡ ಹಾಕಿ ಸೆಟಲ್ಮೆಂಟ್ ದಂಧೆ ಮೂಲಕ ಕೇಸ್ ಕ್ಲೋಸ್ ಮಾಡಲಾಗುತ್ತಿದೆ.

ಪ್ಲಾಸ್ಟಿಕ್ ಹಾವಳಿ: ದೊಡ್ಡ ಹೋಟೆಲ್‌ಗಳಲ್ಲಿ ರಾಜಾರೋಷವಾಗಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದರೂ, ಕಸ ವಿಂಗಡಣೆ ಮಾಡದಿದ್ದರೂ ಮಾರ್ಷಲ್‌ಗಳು ಕಣ್ಮುಚ್ಚಿ ಕುಳಿತಿದ್ದಾರೆ. ಅಧಿಕೃತವಾಗಿ ಫೈನ್ ಕಟ್ಟಿಸಿಕೊಳ್ಳುವ ಬದಲು, ಮಾರ್ಷಲ್‌ಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಹೋಟೆಲ್ ಮಾಲೀಕರೊಂದಿಗೆ ಕೈಜೋಡಿಸಿ ಹಣ ಗಳಿಸುತ್ತಿದ್ದಾರೆ. ಬಣ್ಣ ಬಯಲಾದ ಮೇಲಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆಯೇ?” ಕಾದು ನೋಡಬೇಕಿದೆ. ಬಡವರ ಮೇಲೆ ದರ್ಪ ತೋರಿ, ಭ್ರಷ್ಟಾಚಾರದಲ್ಲಿ ತೊಡಗಿರುವ ಇಂತಹ ಮಾರ್ಷಲ್‌ಗಳ ವಿರುದ್ಧ ಜಿಬಿಎ ತಕ್ಷಣ ಕ್ರಮ ಕೈಗೊಳ್ಳಬೇಕು.ಇಂತಹ ಭ್ರಷ್ಟ ಮಾರ್ಷಲ್​ ಗಳನ್ನು ಕೂಡಲೇ ಕೆಲಸದಿಂದ ಅಮಾನತುಗೊಳಿಸಬೇಕು.ಕಾನೂನು ಎಲ್ಲರಿಗೂ ಒಂದೇ ಆಗಿರಲಿ. ಬೀದಿಬದಿ ವ್ಯಾಪಾರಿಗಳಿಗೆ ರಕ್ಷಣೆ ನೀಡಿ, ನಿಯಮ ಉಲ್ಲಂಘಿಸುವ ದೊಡ್ಡ ಉದ್ಯಮಿಗಳಿಗೆ ಭಾರೀ ದಂಡ ವಿಧಿಸಿ ಸಮಾಜಸ ಸ್ವಾಸ್ಥ್ಯ ಕಾಪಾಡಬೇಕಿರುವುದು ಜಿಬಿಎ ಜವಾಬ್ದಾರಿಯಾಗಿದೆ.

#GBA_Marshals #CorruptionExposed #BBMPMarshals #StreetVendorsRights #BangaloreNews #JusticeForPoor #ScamAlert #NammaBengaluru #CorruptionFreeIndia

Comments (0)

Your email address will not be published. Required fields are marked *

Back to top button