Freedom TV

ಜನರ ಬೆಂಬಲ ನೋಡಿ ಗೆಲುವು ಖಚಿತ ನನ್ನದೇ – ಮನ್ಸೂರ್ ಅಲಿ ಖಾನ್

ಬೆಂಗಳೂರು: ಜನರನ್ನು ನೋಡಿ ತುಂಬಾ ಖುಷಿಯಾಗ್ತಿದೆ. ಜನರ ಬೆಂಬಲ ನೋಡಿ ಗೆಲುವು ಖಚಿತ ನನ್ನದೇ ಎಂದು ಕಾಂಗ್ರೆಸ್ ಸೆಂಟ್ರಲ್ ಕೈ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಗ್ಯಾರಂಟಿಗಳು ಜನರಿಗೆ ತುಂಬಾ ಉಪಯೋಗವಾಗಿವೆ. ಜನರು ನಮ್ಮ ಮೇಲೆ ಮತ್ತು ನಮ್ಮ ಪಕ್ಷದ ಮೇಲೆ ತುಂಬಾ ವಿಶ್ವಾಸ ಇಟ್ಟಿದ್ದಾರೆ. ಜನ ಬೇಜಾರಾಗಿದ್ದಾರೆ, ಬಿಜೆಪಿಯಿಂದ ತೊಂದರೆ ಅನುಭವಿಸಿದ್ದಾರೆ ಹೀಗಾಗಿ ಈ ಸಲ ಗೆಲುವು ನಮ್ಮದೇ ಎಂದು ಆತ್ಮವಿಶ್ವಾಸ  ವ್ಯಕ್ತಪಡಿಸಿದರು.

ಬೆಂಗಳೂರು ಸೆಂಟ್ರಲ್ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಪ್ರಚಾರದ ಸಮಯದಲ್ಲಿ ಶಾಸಕ ಹ್ಯಾರಿಸ್, ನಲಪಾಡ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಪ್ರಚಾರದಲ್ಲಿ ಸಾಥ್ ನೀಡಿದರು. ನೂರಕ್ಕೂ ಹೆಚ್ಚು ಬೈಕ್ ಸಮೇತ ರ್ಯಾಲಿಯಲ್ಲಿ ಜನರು  ಭಾಗಿಯಾಗಿದ್ದರು.

ದೊಮ್ಮಲೂರು, ಸಿದ್ದಾರ್ಥ್ ಕಾಲೋನಿ, ಶಂಕರ್ ನಾಗ್ ರಸ್ತೆ, ಮೋಟಪ್ಪನಪಾಳ್ಯ, ಜೋಗುಪಾಳ್ಯ ಸೇರಿದಂತೆ ಕ್ಷೇತ್ರದ ಹಲವು ಸ್ಥಳಗಳಲ್ಲಿ ಪ್ರಚಾರ ನಡಸಿದರು.

Comments (0)

Your email address will not be published. Required fields are marked *

Back to top button