Freedom TV
ಬಿಡಿಎ ಕೆಂಪೇಗೌಡ ಲೇಔಟ್ ನಿವೇಶನದಾರರಿಗೆ ಎಷ್ಟು ಸೇಫ್..?

ಬೆಂಗಳೂರು : ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣ ಆರಂಭಿಸಿ 13 ವರ್ಷ ಕಳೆದಿದೆ. 4040 ಎಕರೆ ಅಧಿಸೂಚಿತ ಭೂಮಿಯಲ್ಲಿ 1,656 ಎಕರೆ ಭೂಮಿಯನ್ನು ಇನ್ನೂ ಸ್ವಾಧೀನ ಪಡಿಸಿಕೊಳ್ಳಲಾಗದೆ ಬಡಾವಣೆ ಸ್ಥಿತಿ ಅಯೋಮಯವಾಗಿದೆ.ಬಿಡಿಎ ಕೆಂಪೇಗೌಡ ಲೇಔಟ್ ನಲ್ಲಿ ಸಮಸ್ಯೆ ಗಳು ಒಂದಾ..ಎರಡಾ..? ಮೂಲಸೌಕರ್ಯಗಳಿಲ್ಲ ಮನೆ ನಿರ್ಮಿಸುವುದೇಗೆ?

ರಸ್ತೆಗಳ ನಿರ್ಮಾಣ, ವಿದ್ಯುತ್ ಸಂಪರ್ಕ, ಯುಟಿಲಿಟಿ ಚೇಂಬರ್ ಹೀಗೆ ಯಾವುದೂ ಪೂರ್ಣಪ್ರಮಾಣದಲ್ಲಿ ಮುಗಿದಿಲ್ಲ. ಮೂಲ ಸೌಲಭ್ಯಗಳಿಲ್ಲದೆ ಬಡಾವಣೆಯಲ್ಲಿ ಮನೆ ನಿರ್ಮಿಸುವುದಾದರೂ ಹೇಗೆ ಎಂಬುದು ನಿವೇಶನದಾರರ ಅಳಲು.ಹೀಗಾಗಿ ಕಳ್ಳರ ಅಡ್ಡ ವಾಗಿದೆ ಬಿಡಿಎ ಕೆಂಪೇಗೌಡ ಬಡಾವಣೆ,ಲೇಔಟ್ ನಲ್ಲಿ ಇನ್ನೂ ಒಂದೇ ಒಂದು ಮನೆ ನಿರ್ಮಾಣವಾಗಿಲ್ಲ.




