

ಬೆಳಗಾವಿ: ಐಪಿಎಲ್ ಕ್ರಿಕೆಟ್ ಹವಾ ನಡೆಯುತ್ತಿರುವ ವಾತಾವರಣದಲ್ಲಿ ಎಲ್ಲೆಡೆ ಅಕ್ರಮ ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತಿದೆ. ಬೆಳಗಾವಿಯಲ್ಲಿ ಅಕ್ರಮ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಬೆಟ್ಟಿಂಗ್ ಜಾಲದ ಮೇಲೆ ಬೆಳಗಾವಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.ಈ ದಂಧೆಯ ಮುಖ್ಯ ಕಿಂಗ್ ಪಿನ್ ಗೋಪಿನಾಥ್ ತೋಪಿನಕಟ್ಟಿ ಸೇರಿ ಉಳಿದ ಇಬ್ಬರನ್ನು ಸೆರೆಮನೆಗೆ ತಳ್ಳಲಾಗಿದೆ.
IPL ಕ್ರಿಕೆಟ್ ಬೆಟ್ಟಿಂಗ್- ಕಿಂಗ್ ಪಿನ್ ಬಂಧನ


ನಗರದ ಎಪಿಎಂಸಿ ಮತ್ತು ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ದಿಢೀರ್ ದಾಳಿ ನಡೆಸಿದರು.ಬೆಳಗಾವಿಯ ಮುರಳೀಧರ ಕಾಲೋನಿಯ ಮನೆಯೊಂದರಲ್ಲಿ ಕಿಂಗ್ ಪಿನ್ ಗೋಪಿನಾಥ್ ತೋಪಿನಕಟ್ಟಿ ಆನ್‌ಲೈನ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಎನ್ನಲಾಗಿದೆ.ಇನ್ನೊಂದು ಪ್ರಕರಣದಲ್ಲಿ, ಮೊಬೈಲ್ ಮೂಲಕ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಜಹೀರ್ ಮುಜಾವರ್ ಹಾಗೂ ಸೂಪಿಯಾನ್ ಶೇಖ್ ಎಂಬ ಇಬ್ಬರು ಆರೋಪಿಗಳನ್ನು ಮಾರ್ಕೆಟ್ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳಿಂದ ಸುಮಾರು 70 ಸಾವಿರ ರೂಪಾಯಿ ಮೌಲ್ಯದ ನಗದು ಮತ್ತು ಮೊಬೈಲ್ ಸೇರಿದಂತೆ ವಿವಿಧ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಎಪಿಎಂಸಿ ಮತ್ತು ಮಾರ್ಕೆಟ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ ಎಫ್‌ಐಆರ್ ದಾಖಲಿಸಲಾಗಿದೆ.
ದಂಧೆಯ ವ್ಯಾಪ್ತಿ ಬೆಳಗಾವಿ ಟು ಗೋವಾ
ಈ ಇಡೀ ಬೆಟ್ಟಿಂಗ್ ಜಾಲದ ಗಾಡ್ ಫಾದರ್ ಗೋವಾದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಸ್ಫೋಟಕ ಮಾಹಿತಿ ಹೊರಬಂದಿದೆ.ಆತನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರ ಈ ಯಶಸ್ವಿ ಕಾರ್ಯಾಚರಣೆ ಬೆಳಗಾವಿ ಜನರಿಗೆ ತೃಪ್ತಿ ತಂದಿದೆ.
#BelagaviCrime #IPLBetting #CricketBetting #BelagaviPolice #BreakingNews #Arrested #OnlineBetting #KarnatakaNews #FreedomTV #IPL2026




