
ಬೀದರ್: ಜಿಲ್ಲೆಯ 42 ಗ್ರಾಮಗಳ ಜನತೆ ಹನಿ ನೀರಿಗಾಗಿ ಪರದಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಮಹಿಳೆಯರು,ಮಕ್ಕಳು ಖಾಲಿ ಕೊಡ ಹಿಡಿದು ನೀರಿಗಾಗಿ ಕಿಲೋಮೀಟರ್ಗಟ್ಟಲೆ ಅಲೆಯುತ್ತಿದ್ದಾರೆ. ಆದರೆ, ಜಿಲ್ಲಾಡಳಿತ ಮಾತ್ರ ಜಿಲ್ಲೆಯ ಮೂರು ಪ್ರಮುಖ ತಾಲೂಕುಗಳಲ್ಲಿ “ಯಾವುದೇ ನೀರಿನ ಸಮಸ್ಯೆ ಇಲ್ಲ” ಎಂದು ವರದಿ ನೀಡಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಹನಿ ನೀರಿಗಾಗಿ ಪರದಾಡುತ್ತಿರುವ ಜನತೆ!

ಜಿಲ್ಲಾಡಳಿತದ ದಾಖಲೆಯಲ್ಲಿ ಮಾತ್ರ ಸಮೃದ್ಧಿ!
ಜಿಲ್ಲಾಡಳಿತ ಸಲ್ಲಿಸಿರುವ ಅಧಿಕೃತ ವರದಿಯಂತೆ ಬೀದರ್,ಚಿಟಗುಪ್ಪಾ ಮತ್ತು ಹುಮನಾಬಾದ್ ತಾಲೂಕಿನ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಇಲ್ಲ ಇಲ್ಲವಂತೆ! ಆದರೆ ವಾಸ್ತವ ಸ್ಥಿತಿಯೇ ಬೇರೆ. ಈ ಭಾಗದ ಬಹುತೇಕ ಗ್ರಾಮಗಳಲ್ಲಿ ಜನ ಹನಿ ನೀರಿಗಾಗಿ ಪರಿಪಾಟಲು ಪಡುತ್ತಿದ್ದು ಸರ್ಕಾರದ ದಾಖಲೆ ಮತ್ತು ಜನರ ಬವಣೆಯ ನಡುವೆ ಭಾರಿ ವ್ಯತ್ಯಾಸ ಕಂಡುಬರುತ್ತಿದೆ.
ಅಧಿಕಾರಿಗಳ ವಿರುದ್ಧ ‘ಕರವೇ’ ಆಕ್ರೋಶ
ಜಿಲ್ಲಾಡಳಿತದ ಈ ಬೇಜವಾಬ್ದಾರಿ ವರದಿಯ ವಿರುದ್ಧ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಶಿವಕುಮಾರ್ ತುಂಗಾ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.”ಜನರು ಕುಡಿಯುವನೀರಿಗಾಗಿ ಪರದಾಡುತ್ತಿದ್ದರೆ, ಅಧಿಕಾರಿಗಳು ಮಾತ್ರ ಕಚೇರಿಯಲ್ಲಿ ಕುಳಿತು ಸುಳ್ಳು ವರದಿ ನೀಡುತ್ತಿದ್ದಾರೆ” ಎಂದು ಅವರು ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದ್ದಾರೆ.
ಜಿಲ್ಲೆಯ ಕುಡಿಯುವ ನೀರಿಗೆ ಸಂಕಷ್ಟ: ಔರಾದ್,ಕಮಲನಗರ,ಭಾಲ್ಕಿ ಮತ್ತು ಬಸವಕಲ್ಯಾಣ ತಾಲೂಕುಗಳಲ್ಲಿ ಕುಡಿಯುವ ತೀವ್ರ ನೀರಿನ ಸಮಸ್ಯೆ ಉಲ್ಬಣಿಸಿದೆ.ಆದರೆ ಬೀದರ್,ಚಿಟಗುಪ್ಪಾ ಮತ್ತು ಹುಮನಾಬಾದ್ನಲ್ಲಿ ನೀರಿನ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.ಜಿಲ್ಲೆಯ ಒಟ್ಟು 23 ಗ್ರಾಮ ಪಂಚಾಯಿತಿಗಳ 42 ಗ್ರಾಮ ಮತ್ತು ತಾಂಡಾಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದ್ದು ಜಿಲ್ಲಾಡಳಿತ ಯಾವಾಗ ಕಣ್ಣು ತೆರೆಯುತ್ತದೆಯೋ ಕಾದು ನೋಡಬೇಕಿದೆ.
#BidarWaterCrisis #DrinkingWaterIssue #BidarAdministration #Chitguppa #Humnabad #KalyanaKarnataka #FreedomTV #PublicOutrage #WaterScarcity #KarnatakaNews