BallaryFreedom TVರಾಜಕೀಯ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭೀಕರ ಹತ್ಯೆ

Congress General Secretary Murder

ಧಾರವಾಡ: ಏಪ್ರಿಲ್ 10ರಂದು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ರವರ ಭೀಕರ ಹತ್ಯೆಯಾಗಿತ್ತು. ಕೊಲೆ ನಡೆದ ದಿನದಿಂದಲೇ ಕಾಂಗ್ರೆಸ್ ಮುಖಂಡ ಹಾಗೂ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ನಾಪತ್ತೆಯಾಗಿದ್ದಾರೆ. ಸುಮಾರು 32 ದಿನಗಳು ಕಳೆದರೂ ಆರೋಪಿ ಇನ್ನೂ ಪತ್ತೆಯಾಗಿಲ್ಲ.ಪ್ರಕರಣ ಭೇದಿಸಲು ಪೊಲೀಸರು ವಿಶೇಷ ತಂಡ ರಚಿಸಿದ್ದರೂ ಆರೋಪಿ ಸಿಗದಿರುವುದು ಪ್ರಕರಣ ರೋಚಕ ತಿರುವು ಪಡೆಯುತ್ತಿದೆ.

ಹತ್ಯೆಯಲ್ಲಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ಕೈವಾಡ !

ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಎಸ್ಕೇಪ್:
ಕೊಲೆಯಲ್ಲಿ ಇಸ್ಮಾಯಿಲ್ ಕೈವಾಡವಿರುವ ಶಂಕೆ ವ್ಯಕ್ತವಾಗುತ್ತಿದ್ದಂತೆ ವ್ಯಕ್ತಿ ದಿಢೀರನೆ ನಾಪತ್ತೆಯಾಗಿದ್ದಾನೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಆರೋಪಿಯ ಬಂಧನಕ್ಕಾಗಿ ನಾಲ್ವರು ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಿದ್ದರೂ, ಆತನ ಸುಳಿವು ಲಭ್ಯವಾಗಿಲ್ಲ. ಇದು ಹು-ಧಾ ಪೊಲೀಸರಿಗೆ ದೊಡ್ಡ ಸವಾಲಾಗಿರುವುದು ವಿಪರ್ಯಾಸವೇ ಸರಿ.

ಹತ್ಯೆಯ ಬೆನ್ನಲ್ಲೇ ಧಾರವಾಡ ಉಪನಗರ ಠಾಣೆಯ ಪೊಲೀಸರು ಎರಡು ಹಂತಗಳಲ್ಲಿ 12 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.ಎಸಿಪಿ ನೇತೃತ್ವದ ತಂಡ ಈಗಾಗಲೇ ಧಾರವಾಡದ ಜಯನಗರದಲ್ಲಿರುವ ಇಸ್ಮಾಯಿಲ್ ನಿವಾಸ ಹಾಗೂ ಅಂಜುಮನ್ ಸಂಸ್ಥೆಯ ಮೇಲೆ ಎರಡು ಬಾರಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.ಬಂಧನ ಭೀತಿಯಲ್ಲಿರುವ ಇಸ್ಮಾಯಿಲ್ ತಮಾಟಗಾರ,ಕಾನೂನಿನ ಅಡಿಯಲ್ಲಿ ನಿರೀಕ್ಷಾಣಾ ಜಾಮೀನು ಪಡೆಯಲು ಮುಂದಾಗಿದ್ದಾನೆ.

ಈ ಪ್ರಕರಣಕ್ಕೆ ಹೊಸ ಆಯಾಮ ಸಿಕ್ಕಿದ್ದು,ಮೃತ ಫೈರೋಜ್ ಕುಟುಂಬಕ್ಕೆ ಇಸ್ಮಾಯಿಲ್ ಹೆಸರು ಹೇಳದಂತೆ ಹಣದ ಆಮಿಷ ಒಡ್ಡಲಾಗುತ್ತಿದೆ ಎಂದು ಫೈರೋಜ್ ಸಹೋದರ ಫರ್ವೇಜ್ ಗಂಭೀರ ಆರೋಪ ಮಾಡಿದ್ದಾರೆ. “ಸಹೋದರನನ್ನು ಕೊಂದ ವ್ಯಕ್ತಿಗಳಿಗೆ ಶಿಕ್ಷೆಯಾಗಬೇಕು.ಯಾವುದೇ ಹಣದ ಆಮಿಷಕ್ಕೆ ನಾವು ಬಗ್ಗುವುದಿಲ್ಲ” ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.ಕೊಲೆ ಆರೋಪಿ ರಾಜಕೀಯ ಪ್ರಭಾವ ಹಾಗೂ ಹಣದ ಬಲ ಬಳಸಿ ಬಂಧನದಿಂದ ತಪ್ಪಿಸಿಕೊಳ್ಳುವ ಮಾಹಿತಿ ಸಾರ್ವಜನಿಕ ವಲಯದಲ್ಲಿ ಹರಿದುಬರುತ್ತಿದೆ. ಹತ್ಯೆಯ ಹಿಂದೆ ಯಾರಿದ್ದಾರೆ, ಹತ್ಯೆಗೆ ಕಾರಣವೇನು ಎಂಬುದು ಇಸ್ಮಾಯಿಲ್ ಬಂಧನದ ಬಳಿಕವಷ್ಟೇ ಬೆಳಕಿಗೆ ಬರಲಿದೆ. #DharwadMurderCase #YouthCongress #IsmailTamatagar #HubliDharwadPolice #CrimeNews #KarnatakaPolitics #JusticeForFeroz #FreedomTV #BreakingNews

Comments (0)

Your email address will not be published. Required fields are marked *

Back to top button