
ವಿಜಯನಗರ: ಐತಿಹಾಸಿಕ ಪ್ರವಾಸಿ ತಾಣ ಹಂಪಿಯಲ್ಲಿ ಎಗ್ಗಿಲ್ಲದೆ ನಾಯಿಕೊಡೆಗಳಂತೆ ಹೊಂಸ್ಟೇ,ರೆಸ್ಟೋರೆಂಟ್ ಗಳು ತಲೆಎತ್ತಿವೆ. ಅನಧಿಕೃತ ಹೋಂಸ್ಟೇ ಮತ್ತು ಕಾಟೇಜ್ ಗಳಿಗೆ ಕಡಿವಾಣ ಹಾಕಲು ನಾನಾ ಇಲಾಖೆಗಳು ದಿಢೀರನೆ ದಾಳಿ ನಡೆಸಿದವು. ಕಂದಾಯ, ಪೊಲೀಸ್, ಪ್ರವಾಸೋದ್ಯಮ,ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಜಂಟಿಯಾಗಿ ಹೊಂ ಸ್ಟೇ ಗಳು, ರೆಸ್ಟೋರೆಂಟ್ ಗಳ ನೋಂದಣಿ ಪರವಾನಗಿ ದಾಖಲಾತಿಗಳು ಅಧಿಕೃತವಾಗಿದೆಯೇ ಎಂಬುದನ್ನು ಪರಿಶೀಲಿಸಿ ಅಕ್ರಮ ವಸತಿಗೃಹಗಳ ಮಾಲಿಕರ ವಿರುದ್ಧ ಕ್ರಮ ಜರುಗಿಸಿದರು.

ಅಕ್ರಮ ವಸತಿಗೃಹಗಳಿಗೆ ಬೀಗ!
ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ದಾಳಿ
ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಜಾಹ್ನವಿ ಎಸ್., ತಹಶೀಲ್ದಾರ್ ಶೃತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಈ ಬೃಹತ್ ದಾಳಿಯಲ್ಲಿ ಪಾಲ್ಗೊಂಡಿದ್ದರು.ಹಂಪಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಯಾವುದೇ ಅಧಿಕೃತ ಪರವಾನಗಿ ಪಡೆಯದೆ ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದ ಕೇಂದ್ರಗಳನ್ನು ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿದರು.
ಮುಚ್ಚುವ ಭೀತಿಯಲ್ಲಿ ಸಾವಿರಕ್ಕೂ ಹೆಚ್ಚು ವಸತಿಗೃಹಗಳು
ಸುದ್ದಿಮಾಹಿತಿಯ ಪ್ರಕಾರ ಹಂಪಿಯ ಸುತ್ತಮುತ್ತ ಸುಮಾರು ಸಾವಿರಕ್ಕೂ ಹೆಚ್ಚು ಹೋಂ ಸ್ಟೇ ಮತ್ತು ರೆಸ್ಟೋರೆಂಟ್‌ಗಳು ಕಾನೂನುಬದ್ಧ ದಾಖಲೆಗಳಿಲ್ಲದೆ ಕಾರ್ಯನಿರ್ವಹಿಸುತ್ತಿವೆ.
ದಾಳಿಯ ವೇಳೆ ಹಲವಾರು ಅಕ್ರಮ ಹೋಂ ಸ್ಟೇಗಳ ನಾಮಫಲಕಗಳನ್ನು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ತೆರವುಗೊಳಿಸಿದರು. ಕಾನೂನುಬಾಹಿರವಾಗಿ ನಡೆಸುತ್ತಿರುವ ಕೇಂದ್ರಗಳಿಗೆ ಬೀಗ ಹಾಕಲು ಅಧಿಕಾರಿಗಳು ಮುಂದಾದರು.
ಅಧಿಕಾರಿಗಳ ಸಲಹೆ- ದಾಳಿಯ ವೇಳೆ ಮಾಲೀಕರಿಗೆ ಎಚ್ಚರಿಕೆ ನೀಡಿದ ಅಧಿಕಾರಿಗಳು, “ಕಾನೂನು ಬಾಹಿರವಾಗಿ ಉದ್ಯಮ ನಡೆಸುವುದು ಶಿಕ್ಷಾರ್ಹ ಅಪರಾಧ. ಸಂಬಂಧಿಸಿದ ಇಲಾಖೆಗಳ ವೆಬ್‌ಸೈಟ್‌ಗಳಲ್ಲಿ ನೋಂದಣಿ ಪ್ರಕ್ರಿಯೆ ಸುಲಭವಾಗಿದ್ದು ಕೂಡಲೆ ನೋಂದಣಿ ಮಾಡಿಕೊಳ್ಳಬೇಕೆಂದು ಹೇಳಿದರು. ಬೇಗನೆ ಕಾನೂನು ರೀತಿಯಲ್ಲಿ ಎಲ್ಲವನ್ನೂ ಸರಿಪಡಿಸಿಕೊಂಡು ಉದ್ಯಮ ಮುಂದುವರಿಸಬೇಕೆಂದು ತಿಳಿಹೇಳಿದರು.
ಹಂಪಿ ವಿಶ್ವದಲ್ಲೇ ಪ್ರಖ್ಯಾತಿಯಾದ ಪ್ರವಾಸಿ ತಾಣ. ಇಲ್ಲಿ ಪ್ರವಾಸಿಗರ ಸುರಕ್ಷತೆ ಮತ್ತು ವ್ಯವಸ್ಥಿತ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವುದೇ ನಮ್ಮ ಅದಮ್ಯ ಗುರಿಯಾಗಿದೆ ಎಂದು ಅಧಿಕಾರಿಗಳು ಹೇಳಿದರು.ಸುರಕ್ಷತಾ ದೃಷ್ಟಿಯಿಂದ ಈ ಕಾರ್ಯಾಚರಣೆ ಅತ್ಯಂತ ಮಹತ್ವದ್ದಾಗಿದ್ದು, ಅಕ್ರಮ ತಡೆಗೆ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿರುವುದು ಪ್ರವಾಸಿಗರಲ್ಲಿ ಮತ್ತು ಸಾರ್ವಜನಿಕರಲ್ಲಿ ಹರ್ಷ ಮೂಡಿಸಿದೆ.
#Hampi #Vijayanagara #HomeStayRaid #SPJahnavi #TourismDepartment #IllegalResorts #HampiTourism #Kamalapura #FreedomTV #KarnatakaNews #BreakingNews