ಈರುಳ್ಳಿ ಬೆಳೆಗಾರರಿಗೆ ಪರಿಹಾರ ನೀಡಲು ಭಾರತೀಯ ಕಿಸಾನ್ ಸಂಘ ಒತ್ತಾಯ.

ಬಾಗಲಕೋಟೆ:ಉತ್ತರ ಕರ್ನಾಟಕದಲ್ಲಿ ವಾಣಿಜ್ಯ ಬೆಳೆಯಾದ ಈರುಳ್ಳಿ ಬೆಳೆ ಫಸಲು ಚನ್ನಾಗಿ ಬಂದಿದ್ದು, ಈ ಬೆಳೆಯನ್ನು ಬೆಳೆಯಲು ಪ್ರತಿ ಎಕರೆಗೆ ಕನಿಷ್ಟ 50 ರಿಂದ 60 ಸಾವಿರದವರಗೆ ಸಾಲಸೂಲ ಮಾಡಿ ಖರ್ಚು ಮಾಡಿದ್ದು ಅದರೆ ಮಾರ್ಕೆಟನಲ್ಲಿ ಅದರ ದರ ಕುಸಿತದಿಂದಾಗಿ ರೈತರು ಪರಸ್ಥಿತಿ ಚಿಂತಾಜನಕವಾಗಿದ್ದು ಸರಕಾರ ರೈತರ ನೆರವಿಗೆ ದಾವಿಸಿ ಪರಿಹಾರ ನೀಡಬೇಕು ಎಂದು ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಬಾಗಲಕೋಟೆ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಪ.ಹಿರೇಮಠ ಒತ್ತಾಯಿಸಿದ್ದಾರೆ ಅತಿವೃಷ್ಟಿಯಿಂದ ರೈತರ ಈರುಳ್ಳಿ ಸೇರಿದಂತೆ ಅನೇಕ ಬೆಳೆಗಳು ನೀರು ಪಾಲಾಗಿ ಆಪಾರ ಪ್ರಮಾಣದಲ್ಲಿ ಹಾನಿಯಾದರೂ ಕೃಷಿ ,ತೋಟಗಾರಿಗಾರಿಕೆ, ಕಂದಾಯ ಇಲಾಖೆ ಕೆಲವು ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದಾಗಿ ಸರಿಯಾಗಿ ಪರಿಹಾರ ವಿತರಣೆಯಾಗಲಿಲ್ಲ, ಫಸಲ್ ಭೀಮಾ ಯೋಜನೆಡಿಯಲ್ಲಿ ಬೆಳೆ ವಿಮಾ ಪ್ರೀಮಿಯಂ ಪಾವತಿಸಿದರೂ ಅದರಿಂದ ರೈತರಿಗೆ ಸರಿಯಾಗಿ ಕ್ಲೇ ಮ್ ದೊರಕಲಿಲ್ಲ, ವಿಮಾ ಅಧಿಕಾರಿಗಳು ನಿಜವಾದ ಫಲಾನುಭವಿಗಳಿಗೆ ಹಂಚದೇ ಫಲಾನುಭವಿಗಳಲ್ಲದವರಿಗೆ ನೀಡಿ ಭ್ರಷ್ಟಾಚಾರವೆಸಗಿ ರೈತರಿಗೆ ಅನ್ಯಾಯ ಮಾಡಿದ್ದಾರೆ. ಸರಕಾರ ತಕ್ಷಣ ಇಂತಹ ಪ್ರಕರಣಗಳಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಪ್ರಸಕ್ತ ಸಾಲಿನಲ್ಲಿ ಈರುಳ್ಳಿ ಬೆಳೆಗಾರರು ಬೆಲೆ ಕುಸಿತದಿಂದಾಗಿ ರೈತರು ಕಂಗಾಲಾಗಿದ್ದು ಬಿತ್ತನೆಗೆ ರಸಗೊಬ್ಬರ,ಔಷದಿ ಕೂಲಿ ಕಾರ್ಮಿಕರ ವೇತನಕ್ಕೆ ಸಾಲ ಸೂಲ ಮಾಡಿದ್ದು ಅದನ್ನು ತಿರಿಸಲಾಗದೇ ರೈತರು ಸಂಕಷ್ಟ ಪರಸ್ಥಿತಿ ಎದುರಿಸಿ ಆತ್ಮಹತ್ಯೆಯಂತ ಘಟನೆಗಳು ಜರುಗಬಹುದಾಗಿದ್ದು ಅವುಗಳನ್ನು ತಪ್ಪಿಸಲು ಈರುಳ್ಳಿ ಬೆಳೆಗಾರರಿಗೆ ಸರಕಾರ ಕೂಡಲೇ ಹಾನಿಯಾದ ರೈತರಿಗೆ ಪರಿಹಾರ ನೀಡಿ ನ್ಯಾಯ ಒದಗಿಸಬೇಕು ಇಲ್ಲದಿದ್ದರೆ ರೈತರ ಜೊತೆಗೂಡಿ ಭಾರತೀಯ ಕಿಸಾನ ಸಂಘ ಹೋರಾಟ ಮಾಡಬೇಕಾಗುತ್ತದೆ ಎಂದು ಹಿರೇಮಠ ಸರಕಾರಕ್ಕೆ ಎಚ್ಚರಿಸಿದ್ದಾರೆ.




