ದೇಶ/ವಿದೇಶಸುದ್ದಿ

ಹೆದ್ದಾರಿಯಲ್ಲಿ ಸಾವಿನ ಸವಾರಿ; ಕಾರನ್ನು 1.5 ಕಿ.ಮೀ ಎಳೆದೊಯ್ದ ರಾಕ್ಷಸ ಟ್ರಕ್

ಮಧ್ಯಪ್ರದೇಶ: ಡಬ್ರಾ-ಗ್ವಾಲಿಯರ್ ಹೆದ್ದಾರಿಯಲ್ಲಿ ಮೈಜುಂ ಎನ್ನುವಂತಹ ಭೀಕರ ಅಪಘಾತ ಸಂಭವಿಸಿದ್ದು, ಕಾರೊಂದನ್ನು ಟ್ರಕ್ ಬರೋಬ್ಬರಿ 1.5 ಕಿಲೋಮೀಟರ್‌ವರೆಗೆ ಎಳೆದೊಯ್ದಿದೆ. ತೇಕನ್ಪುರ ವ್ಯಾಪ್ತಿಯ ಬಜೇರಾ ಗ್ರಾಮದ ಬಳಿ ನಡೆದ ಈ ಭಯಾನಕ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ನಡುಕ ಹುಟ್ಟಿಸುತ್ತಿದೆ. ಟ್ರಕ್‌ಗೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಅದು ಟ್ರಕ್‌ನ ಮುಂಭಾಗದಲ್ಲೇ ಸಿಲುಕಿಕೊಂಡಿದ್ದರೂ, ಚಾಲಕ ವಾಹನ ನಿಲ್ಲಿಸದೆ ಇನ್ನೂ ವೇಗವಾಗಿ ಚಲಾಯಿಸಿರುವುದು ಘಟನೆಯ ಭೀಕರತೆಯನ್ನು ಹೆಚ್ಚಿಸಿದೆ.

ಅಪಘಾತಕ್ಕೀಡಾದ ಕಾರಿನಲ್ಲಿ ವಿಶೇಷ ಸಶಸ್ತ್ರ ಪಡೆ ಅಧಿಕಾರಿಯೂ ಸೇರಿದಂತೆ ಮೂವರು ಪ್ರಯಾಣಿಕರಿದ್ದರು. ಕಾರು ಟ್ರಕ್‌ನ ಅಡಿಯಲ್ಲಿ ಸಿಲುಕಿ ನಜ್ಜುಗುಜ್ಜಾಗುತ್ತಿದ್ದರೂ ಕಿರಾತಕ ಟ್ರಕ್ ಚಾಲಕ ಮಾತ್ರ ಕಿಂಚಿತ್ತೂ ಕರುಣೆ ತೋರದೆ ರಸ್ತೆಯಲ್ಲಿ ಸಾವಿನ ಸವಾರಿ ನಡೆಸಿದ್ದಾನೆ. ಸಾವು ಅತೀ ಸಮೀಪ ಬಂದಿದ್ದರೂ, ಕಾರಿನಲ್ಲಿದ್ದ ಮೂವರು ಅದೃಷ್ಟವಶಾತ್ ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಭೀಕರ ದೃಶ್ಯವನ್ನು ಕಂಡ ಹಾದಿಹೋಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಟ್ರಕ್ ಚಾಲಕನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button