#Exclusive Newsಸುದ್ದಿ

ಕೆಫೆ ಬ್ಲ್ಯಾಸ್ಟ್: ಮೂವರಿಗೆ ಕಿವಿ ಕೇಳುತ್ತಿಲ್ಲ ಎಂದ ವೈದ್ಯರು!

ಬೆಂಗಳೂರಿನ ಕುಂದಲಹಳ್ಳಿ ಸಮೀಪವಿರುವ ಪ್ರತಿಷ್ಟಿತ ರಾಮೇಶ್ವರಂ ಕೆಫೆ ಬ್ಲ್ಯಾಸ್ಟ್ ನಲ್ಲಿ 9 ಮಂದಿ ಗಾಯಗೊಂಡಿದ್ದಾರೆ. ಅವರ ಪೈಕಿ ಮೂವರು ಬ್ರೂಕ್ ಫೀಲ್ಡ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಪೋಟದ ತೀವ್ರತೆಗೆ ಮಹಿಳೆಯೊಬ್ಬರಿಗೆ ಶೇಖಡ 40 ಪರ್ಸೆಂಟ್ ಸುಟ್ಟ ಗಾಯವಾಗಿದೆ. ಇನ್ನುಳಿದ ಇಬ್ಬರಿಗೆ ಕಿವಿ ಪರದೆಗೆ ಸ್ವಲ್ಪ ಹಾನಿಯಾಗಿದೆ ಎಂದು ಆಸ್ಪತ್ರೆಯ ವೈದ್ಯ ಡಾ.ಪ್ರದೀಪ್ ಕುಮಾರ್ ತಿಳಿಸಿದ್ದಾರೆ.

ಇನ್ನು ಸ್ಫೋಟದಲ್ಲಿ ಗಾಯಗೊಂಡಿರುವ ಮಹಿಳೆ ಮುಖ ಸುಟ್ಟು ಹೋಗಿದ್ದು, ಪ್ಲಾಸ್ಟಿಕ್ ಸರ್ಜರಿ ಮಾಡಬೇಕಿದೆ. ಗಾಯಾಳುಗಳೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಡಿಮೆ ಪ್ರಮಾಣದಲ್ಲಿ ಬ್ಲ್ಯಾಸ್ಟ್ ಆಗಿರೋದ್ರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನು ಅವರು ಧರಿಸಿದ್ದ ಬಟ್ಟೆಗಳೇ ರಕ್ಷಿಸಿವೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೇ ಗಾಯಾಳುಗಳು ಧರಿಸಿದ್ದ ಬಟ್ಟೆಯನ್ನ ಎಫ್ ಎಸ್ ಎಲ್ಗೆ ಕಳಿಸಿಕೊಡಲಾಗಿದೆ. ಇನ್ನು ಮೂರು ಜನರಿಗೂ ಸ್ಫೋಟದ ಶಬ್ಧದಿಂದ ಕಿವಿಯ ಭಾಗಕ್ಕೆ ಹಾನಿಯಾಗಿದೆ. ಸಿಟಿ ಸ್ಕ್ಯಾನ್ ಮಾಡಿದ್ದು, ಚಿಕಿತ್ಸೆ ಮುಂದುವರೆಯುತ್ತಿದೆ ಎಂದು ತಿಳಿಸಿದ್ರು.

Comments (0)

Your email address will not be published. Required fields are marked *

Back to top button