Freedom TV

ಸಿನಿಮಾ ಸ್ಟೈಲ್‍ನಲ್ಲಿ ಯುವಕನ ಮೇಲೆ ಫೈರಿಂಗ್ ನಿವೃತ್ತ ಮಿಲಿಟರಿ ಅಧಿಕಾರಿ ಅರೆಸ್ಟ್..!

ಬೆಂಗಳೂರು: ಏಕಾ ಏಕಿ ಮನೆಗೆ ನುಗ್ಗಿ ಯುವಕನ ಮೇಲೆ ಫೈರಿಂಗ್ ಮಾಡಿರುವ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಡೆದಿದೆ..

ಮಧ್ಯರಾತ್ರಿ 12ಗಂಟೆ ಸುಮಾರಿಗೆ ಬೆಂಗಳೂರಿನ ಗಂಗಮ್ಮನ ಗುಡಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ..ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪರಶುರಾಮ್ ಬಳಿ ಲೈಸೆನ್ಸ್ ಇದ್ದ ಗನ್ ಇತ್ತು. ಪರಶುರಾಮ್ ತನ್ನ ಜೊತೆ ಗನ್ ತಂದಿದ್ದರು. ಮಧ್ಯರಾತ್ರಿ ಸೂರಜ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.ಈ ವೇಳೆ ಸೂರಜ್ ಮನೆ ಒಳಗೆ ಬರದಂತೆ ತಡೆದಿದ್ದಾನೆ. ಈ ವೇಳೆ ಪರಶುರಾಮ್ ಹಾಗೂ ಸೂರಜ್ ನಡುವೆ ವಾಗ್ವಾದ ನಡೆದಿದೆ. ಆಗ ಕೂಡಲೇ ಪರಶುರಾಮ್ ತನ್ನ ಬಳಿ ಇದ್ದ ಗನ್ ತೆಗೆದು ಸೂರಜ್ ಮೇಲೆ ಗುಂಡು ಹಾರಿಸಿದ್ದಾರೆ.

ಇನ್ನು ಫೈರಿಂಗ್ ವೇಳೆ ಸೂರಜ್ ತಪ್ಪಿಸಿಕೊಂಡಿದ್ದು ಗೋಡೆಗೆ ಹೋಗಿ ಬುಲೆಟ್ ತಗುಲಿದೆ..ಅದೃಷ್ಟವಶಾತ್ ಸೂರಜ್ ತಪ್ಪಿಸಿಕೊಂಡಿದ್ದಾನೆ. ಗುಂಡಿನ ಸದ್ದು ಕೇಳಿ ಅಕ್ಕಪಕ್ಕದ ಮನೆಯವರೆಲ್ಲ ಓಡಿ ಬಂದು ಜಗಳ ಬಿಡಿಸಿದ್ದಾರೆ. ಗಂಗಮ್ಮನ ಗುಡಿ ಪೊಲೀಸರಿಗೆ ಸೂರಜ್​​​ ದೂರು ನೀಡಿದ್ದು, ಪೊಲೀಸರು ಪರಶುರಾಮ್ ಅವರನ್ನು​ ಬಂಧಿಸಿ ಕೇಸ್​ ದಾಖಲಿಸಿಕೊಂಡಿದ್ದಾರೆ.

Comments (0)

Your email address will not be published. Required fields are marked *

Back to top button