ದೇಶ/ವಿದೇಶ

ರನ್‌ವೇಯಿಂದ ಜಾರಿ ವಾಹನಗಳಿಗೆ ಡಿಕ್ಕಿಹೊಡೆದ ಕಾರ್ಗೋ ಜೆಟ್ – ಐವರು ಸಾವು!

Cargo jet skids off runway and crashes into vehicles – five dead!

ವಾಷಿಂಗ್ಟನ್‌: ಅಮೆರಿಕದ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಅಮೆಜಾನ್ ಪ್ರೈಮ್ ಏರ್ ಕಾರ್ಗೋ ಜೆಟ್ ರನ್‌ವೇಯಿಂದ ಜಾರಿ ಪಾರ್ಕ್ ಮಾಡಿದ್ದ ವಾಹನಗಳಿಗೆ ಡಿಕ್ಕಿ ಹೊಡೆದ ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ.

ಬೋಯಿಂಗ್ 767-300 ಮಾದರಿಯ ಈ ವಿಮಾನವು ಭಾನುವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ (ET / 1800 GMT) ರಸ್ತೆಗಿಳಿದಿತ್ತು. ಪೋರ್ಟೊ ರಿಕೊದ ಸ್ಯಾನ್ ಜುವಾನ್‌ನಿಂದ ಮಿಯಾಮಿಗೆ ಆಗಮಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಲ್ಯಾಂಡಿಂಗ್ ಆಗುತ್ತಿದ್ದಂತೆ ನಿಯಂತ್ರಣ ತಪ್ಪಿ ರನ್‌ವೇಯಿಂದ ಜಾರಿದ ವಿಮಾನವು ಅಲ್ಲಿದ್ದ ಹಲವು ವಾಹನಗಳಿಗೆ ಅಪ್ಪಳಿಸಿ ಬಳಿಕ ಹೊತ್ತಿ ಉರಿದಿದೆ.

ಅಪಘಾತದ ತೀವ್ರತೆಗೆ ವಿಮಾನ ಮತ್ತು ವಾಹನಗಳು ಸುಟ್ಟುಕರಕಲಾಗಿವೆ. ಅವಘಡದ ಬೆನ್ನಲ್ಲೇ ಎಚ್ಚೆತ್ತ ವಿಮಾನ ನಿಲ್ದಾಣದ ಆಡಳಿತ ಮಂಡಳಿಯು ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ರನ್‌ವೇಗಳು ಮತ್ತು ಟ್ಯಾಕ್ಸಿವೇಗಳನ್ನು ಕೆಲಕಾಲ ತಾತ್ಕಾಲಿಕವಾಗಿ ಮುಚ್ಚಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳು ತೀವ್ರ ಕಾರ್ಯಾಚರಣೆ ನಡೆಸಿ ವಿಮಾನಕ್ಕೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದವು.

ಅಪಘಾತದ ನೈಜ ಕಾರಣವನ್ನು ಪತ್ತೆಹಚ್ಚಲು ಫೆಡರಲ್ ಏವಿಯೇಷನ್ ಅಡ್ಮಿನೇಷನ್ (FAA) ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಇದರೊಂದಿಗೆ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು (NTSB) ಸಹ ಸ್ಥಳದಿಂದ ಅಗತ್ಯ ಮಾಹಿತಿಗಳನ್ನು ಕಲೆಹಾಕುತ್ತಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

Comments (0)

Your email address will not be published. Required fields are marked *

Back to top button