ಉಕ್ರೇನ್ ಮೇಲೆ ರಷ್ಯಾದಿಂದ ಡ್ರೋನ್ ದಾಳಿ – 27 ಮಂದಿ ಸಾವು, 42 ಮಂದಿಗೆ ಗಾಯ!
Russian drone attack on Ukraine – 27 dead, 42 injured!

ಕೀವ್ : ಉಕ್ರೇನ್‌ನ ರಾಜಧಾನಿ ಕೀವ್ ಮೇಲೆ ರಷ್ಯಾ ರಾತ್ರಿ ಪೂರ್ತಿ ನಡೆಸಿದ ಭೀಕರ ಡ್ರೋನ್ ದಾಳಿಯಲ್ಲಿ 27 ಮಂದಿ ಸಾವನ್ನಪ್ಪಿದ್ದು, 42 ಜನ ಗಾಯಗೊಂಡಿದ್ದಾರೆ.
ದಾಳಿಯ ತೀವ್ರತೆಗೆ 50ಕ್ಕೂ ಹೆಚ್ಚು ವಸತಿ ಕಟ್ಟಡಗಳು ಹಾನಿಗೊಳಗಾಗಿದ್ದು, ಹಲವಾರು ಮನೆಗಳು ಮತ್ತು ರೆಸ್ಟೋರೆಂಟ್‌ಗಳು ಹೊತ್ತಿ ಉರಿದಿವೆ. ದಾಳಿಗೊಳಗಾದ ಬುಚಾ ಜಿಲ್ಲೆಯ ಪ್ರದೇಶದಿಂದ 380ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಗವರ್ನರ್ ಟೈಮೂರ್ ಟ್ಕಾಚೆಂಕೊ ಅವರು ಟೆಲಿಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕಳೆದ ಮೂರು ದಿನಗಳಿಂದ ಕೀವ್ ನಿರಂತರ ವೈಮಾನಿಕ ದಾಳಿಗಳನ್ನು ಎದುರಿಸುತ್ತಿದ್ದು, ರಷ್ಯಾದ ಸರಣಿ ವಾಯುದಾಳಿಗಳು ಉಕ್ರೇನಿಯನ್ ರಾಜಧಾನಿಯ ಆರ್ಥಿಕತೆಯನ್ನು ಅಸ್ತವ್ಯಸ್ತಗೊಳಿಸಿವೆ. ಈ ಸಲ್ಮಾನ್ ದಾಳಿಗಳಿಂದಾಗಿ ನಾಗರಿಕ ಜೀವನ ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿದೆ.
ಆ.17 ರಂದು ಉಕ್ರೇನ್‌ನ ಅತಿದೊಡ್ಡ ಸಂಯೋಜಿತ ಉಕ್ಕಿನ ಘಟಕವಾಗಿರುವ, ಕ್ರಿವಿ ರಿಹ್‌ನಲ್ಲಿರುವ ಭಾರತೀಯ ಮೂಲದ ಬಿಲಿಯನೇರ್ ಲಕ್ಷ್ಮಿ ಮಿತ್ತಲ್ ಅವರ ‘ಆರ್ಸೆಲರ್ ಮಿತ್ತಲ್’ ಗಣಿಗಾರಿಕೆ ಮತ್ತು ಲೋಹಶಾಸ್ತ್ರ ಸಂಕೀರ್ಣವು ರಷ್ಯಾದ ಕ್ಷಿಪಣಿ ದಾಳಿಗೆ ಗುರಿಯಾಗಿತ್ತು. ಉಕ್ರೇನಿಯನ್ ಡ್ರೋನ್ ದಾಳಿಗೆ ಪ್ರತೀಕಾರವಾಗಿ ನಡೆದ ಈ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 14 ಕಾರ್ಮಿಕರು ಗಾಯಗೊಂಡಿದ್ದರು. ಕೋರ್ ಎನರ್ಜಿ ಮತ್ತು ಬ್ಲಾಸ್ಟ್-ಫರ್ನೇಸ್‌ಗಳಿಗೆ ತೀವ್ರ ಹಾನಿ ಉಂಟಾದ ಹಿನ್ನೆಲೆಯಲ್ಲಿ ಅಲ್ಲಿನ ಉತ್ಪಾದನೆಯನ್ನು ಭಾಗಶಃ ಸ್ಥಗಿತಗೊಳಿಸಲಾಗಿದೆ.




