ಆ.13ಕ್ಕೆ ಕರ್ನಾಟಕ ಬಂದ್ ಡೌಟ್ – ವಿವಿಧ ಸಂಘಟನೆಗಳಿಂದ ಬೆಂಬಲ ವಾಪಸ್!
Karnataka bandh on August 13 in doubt - various organizations withdraw support!

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳು ಆಗಸ್ಟ್ 13ರಂದು ಕರ್ನಾಟಕ ಬಂದ್ಗೆ ಕರೆ ನೀಡಿತ್ತು. ಇದೀಗ ಕರ್ನಾಟಕ ಬಂದ್ ಬಹುತೇಕ ಅನುಮಾನವಾಗಿದೆ. ಕಾವೇರಿ ಕೊಳ್ಳದ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರೋದರಿಂದ ವಿವಿಧ ಸಂಘಟನೆಗಳು ಬಂದ್ನಿಂದ ಹಿಂದೆ ಸರಿದಿದೆ.
ಆಗಸ್ಟ್ 13 ರಂದು ಬಂದ್ಗೆ ಅನೇಕ ಕನ್ನಡಪರ ಸಂಘಟನೆಗಳು ಬೆಂಬಲ ಹಿಂಪಡೆದಿದೆ. ಕಾವೇರಿ ಕೊಳ್ಳದ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಹಾಗೂ ಸಂಘಟನೆಗಳು ನಿರಾಳವಾಗಿದ್ದು, ಬಂದ್ ನಿರ್ಧಾರದಿಂದ ಹಿಂದೆ ಸರಿದಿವೆ. ಕರವೇ ಅಧ್ಯಕ್ಷರಾದ ಟಿ.ಎ. ನಾರಾಯಣಗೌಡ ಅವರು ಆರಂಭದಿಂದಲೂ ಈ ಬಂದ್ಗೆ ತಮ್ಮ ಬೆಂಬಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕನ್ನಡ ಪರ ಹೋರಾಟಗಾರ ಪ್ರವೀಣ್ ಶೆಟ್ಟಿ ಅವರ ಬಣ ಕೂಡ ಬಂದ್ನಿಂದ ಸಂಪೂರ್ಣವಾಗಿ ಹಿಂದೆ ಸರಿಯುವ ಸಾಧ್ಯತೆ ಇದೆ. ಓಲಾ-ಊಬರ್ ಡ್ರೈವರ್ಸ್ ಅಸೋಸಿಯೇಷನ್ ಕೂಡ ಈ ಬಂದ್ಗೆ ಬೆಂಬಲಿಸುವುದಿಲ್ಲ ಎಂದು ಘೋಷಿಸಿದೆ.
ಬಂದ್ಗೆ ಕರೆ ನೀಡಿರುವ ಹಿರಿಯ ನಾಯಕ ವಾಟಾಳ್ ನಾಗರಾಜ್ ಅವರ ಮನವೊಲಿಸಲು ಹಲವು ಸಂಘಟನೆಗಳ ಮುಖಂಡರು ಪ್ರಯತ್ನ ನಡೆಸುತ್ತಿದ್ದಾರೆ.




