ರಾಜ್ಯ

ಬೆಂಗಳೂರಿನಲ್ಲಿ SIR ಗೊಂದಲಕ್ಕೆ ಬ್ರೇಕ್ – ಕೇಂದ್ರ ಚುನಾವಣಾ ಆಯೋಗದಿಂದ ಹೊಸ ಮಾರ್ಗಸೂಚಿ ಪ್ರಕಟ!

Break in SIR confusion in Bengaluru - Central Election Commission issues new guidelines!

ಬೆಂಗಳೂರು : ಬೆಂಗಳೂರಿನಲ್ಲಿ ಗೊಂದಲಕ್ಕೆ ಕಾರಣವಾಗಿರುವ SIR ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು (ECI) ಹೊಸ ಗೈಡ್ ಲೈನ್ಸ್​ನ್ನು ಪ್ರಕಟಿಸಿದೆ. ಕೇಂದ್ರ ಚುನಾವಣಾ ಆಯೋಗ ರಾಜ್ಯಕ್ಕೆ ಭೇಟಿ ನೀಡಿದ ಬಳಿಕ ಹೊಸ ಮಾರ್ಗಸೂಚಿಯನ್ನು ಜಾರಿಗೆ ತಂದಿದೆ.

SIR ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಗೆ ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮತದಾರರ ಹೆಸರು ಕೈಬಿಡುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ಅನಗತ್ಯ ಗೊಂದಲಗಳನ್ನು ನಿವಾರಿಸಲು ಈ ಕ್ರಮ ಕೈಗೊಳ್ಳಲಾಗಿದ್ದು, ಹೊಸ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ BLOಗಳಿಗೆ ಖಡಕ್ ಸೂಚನೆ ನೀಡಲಾಗಿದೆ.

ರಾಜಕೀಯ ಪಕ್ಷಗಳ ಗಮನಕ್ಕೆ ತರುವುದು ಕಡ್ಡಾಯ :

ಹೊಸ ಮಾರ್ಗಸೂಚಿಯ ಪ್ರಕಾರ, ಮತದಾರರ ಪಟ್ಟಿಯಿಂದ ಯಾವುದೇ ಹೆಸರನ್ನು ಡಿಲೀಟ್ (ರದ್ದು) ಮಾಡುವ ಮುನ್ನ ರಾಜಕೀಯ ಪಕ್ಷಗಳ ಗಮನಕ್ಕೆ ತರುವುದು ಇನ್ಮುಂದೆ ಕಡ್ಡಾಯವಾಗಿರುತ್ತದೆ. ಯಾವುದೇ ಗೊಂದಲಗಳಿದ್ದರೆ ಮೊದಲು ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸಿ, ಅದನ್ನು ಸರಿಪಡಿಸಿಕೊಂಡ ನಂತರವಷ್ಟೇ ಮುಂದಿನ ಪ್ರಕ್ರಿಯೆ ನಡೆಸಬೇಕು ಎಂದು ಆಯೋಗ ಸ್ಪಷ್ಟಪಡಿಸಿದೆ.

ರಾಜಕೀಯ ಪಕ್ಷಗಳ ಗಮನಕ್ಕೆ ತರಬೇಕಾದ ಅಂಶಗಳು ಯಾವುದು?

  • ಸಾವನ್ನಪ್ಪಿರುವ ಮತದಾರರು: ಮೃತಪಟ್ಟಿರುವ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವ ಮುನ್ನ ಮಾಹಿತಿ ನೀಡಬೇಕು.
  • ಸ್ಥಳಾಂತರ ಆಗಿರುವ ಮತದಾರರು: ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಅಥವಾ ಬೇರೆ ಕಡೆಗೆ ವಲಸೆ ಹೋಗಿರುವ ಮತದಾರರ ವಿವರಗಳು.
  • ಅನುಪಸ್ಥಿತಿ ಮತದಾರರು : ಮತಗಟ್ಟೆ ವ್ಯಾಪ್ತಿಯಲ್ಲಿ ದೀರ್ಘಕಾಲದಿಂದ ಲಭ್ಯವಿಲ್ಲದ ಮತದಾರರ ಪಟ್ಟಿ.
  • ಪಟ್ಟಿಯಲ್ಲಿ ಹೆಸರು ರದ್ದು ಪಡಿಸಿದ ಮತದಾರರು: ಯಾವುದೇ ತಾಂತ್ರಿಕ ಅಥವಾ ಇತರೆ ಕಾರಣಗಳಿಗಾಗಿ ಹೆಸರು ರದ್ದಾಗಿರುವ ಮತದಾರರ ಸಂಪೂರ್ಣ ಮಾಹಿತಿ.

ಈ ಅಂಶಗಳನ್ನ ರಾಜಕೀಯ ಪಕ್ಷಗಳ ಗಮನಕ್ಕೆ ತರೋದು ಕಡ್ಡಾಯ ಎಂದು ಕೇಂದ್ರ ಚುನಾವಣಾ ಆಯೋಗ ಆದೇಶಿಸಿದೆ.

Comments (0)

Your email address will not be published. Required fields are marked *

Back to top button