ಬಿಜೆಪಿ ವಿರುದ್ಧ ದೀದಿ ಧರಣಿ – ಕೇವಲ 6 ಶಾಸಕರು, 3 ಸಂಸದರು ಭಾಗಿ!
Didi Street protest against BJP in Bengal its a failure one

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಮತ್ತೆ ಹೈಡ್ರಾಮಾ ಶುರುವಾಗಿದೆ. ಇತ್ತೀಚಿನ ಬೆಂಗಾಲ್ ಚುನಾವಣೆ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಮತ್ತೊಮ್ಮೆ ತಮ್ಮ ಹಳೆಯ ‘ಸ್ಟ್ರೀಟ್ ಫೈಟರ್’ ಅವತಾರಕ್ಕೆ ಮರಳಿದ್ದಾರೆ. ಕೇಂದ್ರ ಕೋಲ್ಕತ್ತಾದಲ್ಲಿ ಇಂದು ಭೀಕರ ಧರಣಿ ಸತ್ಯಾಗ್ರಹ ಆರಂಭಿಸಿರುವ ದೀದಿ, ಬಿಜೆಪಿ ವಿರುದ್ಧ “ಯುದ್ಧ ಇಲ್ಲವೇ ಮರಣ” ಎಂದು ಪ್ರತಿಜ್ಞೆ ಮಾಡಿದ್ದಾರೆ. ಆದರೆ, ಈ ಬೃಹತ್ ಪ್ರತಿಭಟನೆಯಲ್ಲಿ ಪಕ್ಷದ ನಾಯಕರ ಗೈರುಹಾಜರಿ ಈಗ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ!

ಬಿಜೆಪಿ ಟಿಎಂಸಿ ಒಡೆಯುತ್ತಿದೆ!
ಧರಣಿ ನಿರತ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, “ಚುನಾವಣೆಯಲ್ಲಿ ಮತಗಳನ್ನು ಲೂಟಿ ಮಾಡಿ ಗೆದ್ದಿರುವ ಬಿಜೆಪಿ, ಈಗ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಬೆದರಿಸಿ ಒಡೆಯಲು ಯತ್ನಿಸುತ್ತಿದೆ” ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಟಿಎಂಸಿಯ ಪ್ರಮುಖ ನಾಯಕರ ಮೇಲೆ ಬಿಜೆಪಿ ಉದ್ದೇಶಪೂರ್ವಕವಾಗಿ ದಾಳಿ ನಡೆಸುತ್ತಿದೆ ಮತ್ತು ಪಕ್ಷವನ್ನು ಹೆದರಿಸುವ ತಂತ್ರ ರೂಪಿಸುತ್ತಿದೆ ಎಂದು ದೀದಿ ಆಕ್ರೋಶ ಹೊರಹಾಕಿದ್ದಾರೆ.
ಬೃಹತ್ ಧರಣಿ ಠುಸ್ಸು!
ಮಮತಾ ಬ್ಯಾನರ್ಜಿ ಅವರು ಸಾರಿದ ಈ ‘ಯುದ್ಧ’ಕ್ಕೆ ಸ್ವತಃ ಅವರ ಪಕ್ಷದ ನಾಯಕರೇ ಬೆಂಬಲ ನೀಡುತ್ತಿಲ್ಲವೇ ಎಂಬ ಅನುಮಾನ ಮೂಡಿದೆ. ಇಡೀ ರಾಜ್ಯಾದ್ಯಂತ ಸಂಚಲನ ಮೂಡಿಸಬೇಕಿದ್ದ ಈ ಬೃಹತ್ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದು ಕೇವಲ ಆರು ಶಾಸಕರು ಮತ್ತು ಮೂರು ಸಂಸದರು ಮಾತ್ರ.ಹಾಗಾಗಿ ಪ್ರತಿಭಟನೆ ವಿಫಲವಾಗಿದೆ. ಟಿಎಂಸಿಯಲ್ಲಿರುವ ಒಟ್ಟು ಶಾಸಕರು (MLAs): 84 (ಬಂಗಾಳದಲ್ಲಿ 80, ಮೇಘಾಲಯದಲ್ಲಿ 5, ಅಸ್ಸಾಂನಲ್ಲಿ 1) ಹಾಗೂ ಒಟ್ಟು ಸಂಸದರು (MPs): 41 (ಲೋಕಸಭೆ: 28, ರಾಜ್ಯಸಭೆ: 13)
ಬಂಗಾಳ ವಿಧಾನಸಭೆಯಲ್ಲೇ ಪ್ರಸ್ತುತ 80 ಶಾಸಕರ ಬಲ ಹೊಂದಿರುವ ಟಿಎಂಸಿಯಿಂದ ಮಮತಾ ಅವರ ಹೋರಾಟಕ್ಕೆ ಕೇವಲ 6 ಶಾಸಕರು ಸಾಥ್ ನೀಡಿರುವುದು ರಾಜಕೀಯ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸೋಲಿನ ಬೆನ್ನಲ್ಲೇ ಟಿಎಂಸಿ ಒಳಗೊಳಗೇ ಬಿರುಕು ಬಿಡುತ್ತಿದೆಯೇ? ಅಥವಾ ನಾಯಕರು ದೀದಿ ಕರೆಗೆ ಓಗೊಡುತ್ತಿಲ್ಲವೇ? ಎಂಬ ಚರ್ಚೆಗಳು ಈಗ ಜೋರಾಗಿವೆ.
ಚುನಾವಣೆ ಮುಗಿದರೂ ಬಂಗಾಳದ ರಾಜಕೀಯ ಸಮರ ಮಾತ್ರ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ‘ಸ್ಟ್ರೀಟ್ ಫೈಟ್’ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
#MamataBanerjee #TMC #WestBengalPolitics #KolkataDharna #BJPvsTMC #StreetFighterDidi #BengalPoliticalWar #TMCMLAsSkip #AbhishekBanerjee #FreedomTVNews #BreakingNews #PoliticalDrama




