ಮೋದಿಯಿಂದ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ- ಇಳಿಕೆಯ ಪ್ರಶ್ನೆ ಮಾತ್ರ ನನಗೆ ಸಿದ್ದರಾಮಯ್ಯ ಗರಂ!
youth congress protest at freedom park siddu criticizes fuel price hike

ಬೆಂಗಳೂರು: “ಕೇಂದ್ರದ ಬಿಜೆಪಿ ಸರ್ಕಾರದವರು ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಏರಿಸಿದಾಗ ನೀವೆಲ್ಲರೂ ಮೌನವಾಗಿರುತ್ತೀರಿ, ಮೋದಿಯನ್ನ ಯಾರೂ ಪ್ರಶ್ನೆ ಮಾಡುವುದಿಲ್ಲ. ಆದರೆ ಈಗ ನಮ್ಮನ್ನು ದರ ಇಳಿಸುತ್ತೀರಾ ಎಂದು ಕೇಳುತ್ತೀರಿ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ತಪ್ಪು ನೀತಿಗಳಿಂದಲೇ ದೇಶದಲ್ಲಿ ಇಷ್ಟೊಂದು ಬೆಲೆ ಏರಿಕೆಯಾಗಿದೆ ಎಂದು ನೇರವಾಗಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶದ ವಿಷಮ ಪರಿಸ್ಥಿತಿಗೆ ಕಾರಣ ಯಾರು? ಮಾಧ್ಯಮಗಳನ್ನೇ ಪ್ರಶ್ನಿಸಿದ ಸಿದ್ದು
ದೇಶದಲ್ಲಿ ಇಂದಿನ ಜ್ವಲಂತ ಬೆಲೆ ಏರಿಕೆಗೆ ಯಾರು ಕಾರಣ ಎಂಬುದನ್ನು ಅಂಕಿ-ಅಂಶಗಳ ಸಮೇತ ಸಿಎಂ ಸಿದ್ದರಾಮಯ್ಯನವರು ವಿವರಿಸಿದರು.”ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರಕ್ಕೆ ಬಂದಾಗ 2014ರಲ್ಲಿ ದೇಶದಲ್ಲಿ ಡೀಸೆಲ್ ಬೆಲೆ ಕೇವಲ ₹48, ಪೆಟ್ರೋಲ್ ಬೆಲೆ ₹70 ಹಾಗೂ ಗ್ಯಾಸ್ ಸಿಲಿಂಡರ್ ಬೆಲೆ ₹414 ಇತ್ತು.ಆದರೆ ಇಂದು ಇಷ್ಟೊಂದು ಬೃಹತ್ ಮಟ್ಟದಲ್ಲಿ ಬೆಲೆ ಏರಿಕೆ ಮಾಡಿದ್ದು ಯಾರು? ಮೊದಲು ಇದನ್ನು ಪ್ರಶ್ನಿಸಿ,” ಎಂದು ತಿರುಗೇಟು ನೀಡಿದರು.
ಆದರೆ, ಇದೇ ವೇಳೆ “ರಾಜ್ಯ ಸರ್ಕಾರದ ವತಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ (Tax) ಕಡಿಮೆ ಮಾಡುತ್ತೀರಾ?” ಎಂದು ಸುದ್ದಿಗಾರರು ಕೇಳಿದ ನೇರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿ ಮುಂದೆ ಸಾಗಿದರು.
‘ನೀಟ್’ ಹಗರಣ- ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಫ್ರೀಡಂ ಪಾರ್ಕ್‌ನಲ್ಲಿ ಧರಣಿ!
ಸುದ್ದಿಗೋಷ್ಠಿಯ ಬೆನ್ನಲ್ಲೇ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಯೂತ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿ ಮಾತನಾಡಿದರು.ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ‘ನೀಟ್’ (NEET) ಪರೀಕ್ಷೆ ಅಕ್ರಮದ ಹಿನ್ನೆಲೆಯಲ್ಲಿ ದೇಶದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇದು ಅತ್ಯಂತ ದುರದೃಷ್ಟಕರ ಎಂದು ಕಳವಳ ವ್ಯಕ್ತಪಡಿಸಿದರು.
ಇದು ಶಿಕ್ಷಣ ಕ್ಷೇತ್ರಕ್ಕೇ ಕಪ್ಪು ಚುಕ್ಕೆ. ಶೈಕ್ಷಣಿಕ ಕ್ಷೇತ್ರ ಅಧಃಪತನಕ್ಕೆ ಶಿಕ್ಷಣ ಸಚಿವರೇ ಕಾರಣ. ಕೂಡಲೆ ಈ ಮಹಾ ಹಗರಣದ ಸಂಪೂರ್ಣ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. “ಬಿಜೆಪಿಯವರು ಅತ್ಯಂತ ಭಂಡರು. ಕೇಂದ್ರ ಸಚಿವರು ರಾಜೀನಾಮೆ ನೀಡುವವರೆಗೂ ಕಾಂಗ್ರೆಸ್ ಹಾಗೂ ಯೂತ್ ಕಾಂಗ್ರೆಸ್ ಈ ಹೋರಾಟವನ್ನು ನಿಲ್ಲಿಸುವುದಿಲ್ಲ,ದೇಶಾದ್ಯಂತ ಪ್ರತಿಭಟನೆ ಮುಂದುವರಿಯಲಿದೆ,” ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಸಿದರು.
#FreedomTV #CMSiddaramaiah #FuelPriceHike #NarendraModi #PetrolDieselPrice #YouthCongressProtest #NEETScam #DharmendraPradhan #FreedomParkBengaluru #KarnatakaPolitics #PriceHikePolitics #KannadaNews #BengaluruUpdates




