Freedom TV

ಫುಡ್ ಪಾರ್ಕ್ ಅಧಿಕಾರಿಗಳಿಗೆ ಹೆಚ್.ಟಿ.ಮಂಜು ಫುಲ್ ಕ್ಲಾಸ್!

MLA H T manju class at KR Pet regarding Mega food park road issue

ರಸ್ತೆ ತಕರಾರು-ರೈತರು ಹೋರಾಟಕ್ಕೆ ತಯಾರು
ಅಶೋಕನಗರ ಹಾಗೂ ಬಣ್ಣೇನಹಳ್ಳಿ ಗ್ರಾಮದ ಸಮೀಪವಿರುವ ಮೆಗಾ ಫುಡ್ ಫ್ಯಾಕ್ಟರಿ ಸ್ಥಾಪನೆಗೆ ಅಂದು ರೈತರಿಂದ ಭೂಮಿ ಪಡೆದಾಗ ರಸ್ತೆ ನೀಡುವ ಹಾಗೂ ಇನ್ನಿತರೆ ಭರವಸೆಗಳನ್ನು ಅಧಿಕಾರಿಗಳನ್ಉ ನೀಡಿದ್ದರು. ಆದರೆ ಇಂದು ಆ ಭರವಸೆಗಳೆಲ್ಲಾ ಗಾಳಿಯಲ್ಲಿ ತೂರಿದ್ದರು. ಇದರಿಂದ ರೈತರಿಗೆ ಅನಾನುಕೂಲವಾಗಿದೆ ಎಂಬುದು ರೈತರ ಗಂಭೀರ ಆರೋಪ.
ರೈತರು ಓಡಾಡುವ ಹಳೆಯ ದಾರಿಯನ್ನು ಬಂದ್ ಮಾಡಿ ಫ್ಯಾಕ್ಟರಿಯವರು ಕಾಂಪೌಂಡ್ ನಿರ್ಮಿಸುತ್ತಿದ್ದಾರೆ. ಇದರಿಂದ ರೈತರ ಸಂಚಾರಕ್ಕೆ ತೊಂದರೆಯಾಗಿದೆ. ಭೂಮಿ ನೀಡಿದ ಸ್ಥಳೀಯರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳು, ಈಗ ಕೆಲಸದಲ್ಲಿದ್ದವರನ್ನೇ ವಜಾ ಮಾಡುತ್ತಿದ್ದಾರೆ.ಇದು ರೈತರಿಗೆ ಎಸಗಿದ ಮಹಾನ್ ದ್ರೋಹ ಎಂದು ರೈತರು ಕೆಂಡ ಕಾರಿದ್ದಾರೆ. ಫ್ಯಾಕ್ಟರಿಯ ಕಲುಷಿತ ನೀರನ್ನು ಗ್ರಾಮದ ಕೆರೆಗಳಿಗೆ ಬಿಡುತ್ತಿರುವುದರಿಂದ ಜಲಮೂಲಗಳು ವಿಷಪೂರಿತವಾಗುತ್ತಿದ್ದು ಪರಿಸರ ಮಾಲಿನ್ಯವಾಗುತ್ತಿದೆ.
ಅಧಿಕಾರಿಗಳಿಗೆ ಬೆವರಿಳಿಸಿದ ಶಾಸಕ ಹೆಚ್.ಟಿ. ಮಂಜು
ರೈತರ ಪ್ರತಿಭಟನಾ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ ಶಾಸಕ ಹೆಚ್.ಟಿ. ಮಂಜು, ಕಾಂಪೌಂಡ್ ನಿರ್ಮಾಣ ಕಾರ್ಯವನ್ನು ತಡೆದರು. ರೈತರಿಗೆ ತೊಂದರೆ ಕೊಡುತ್ತಿರುವ ಅಧಿಕಾರಿಗಳ ವಿರುದ್ಧ ಏಕವಚನದಲ್ಲೇ ಗುಡುಗಿದ ಶಾಸಕರು, “ರೈತರ ಹಿತ ಬಲಿಗೊಟ್ಟು ಕಾರ್ಖಾನೆ ನಡೆಸಲು ಬಿಡುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.”ರೈತರಿಗೆ ತೊಂದರೆ ನೀಡಿದರೆ ನಾನು ಸುಮ್ಮನಿರಲ್ಲ. ಸ್ಥಳೀಯರಿಗೆ ಉದ್ಯೋಗ ನೀಡಿ, ದಾರಿ ಬಿಟ್ಟು ಕೆಲಸ ಮಾಡಿ. ರೈತರ ಪರವಾಗಿ ನಿಲ್ಲದ ಜಿಲ್ಲಾಧಿಕಾರಿಗಳ ಧೋರಣೆ ಸರಿಯಲ್ಲ” ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಮಂಡ್ಯ ಜಿಲ್ಲಾಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಇದೇ ವೇಳೆ ಶಾಸಕರು ಕಿಡಿಕಾರಿದ್ದು, ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

#Mandya #KRPete #HTManju #FarmersProtest #MegaFoodPark #BreakingNews #MandyaPolitics #FreedomTV #JusticeForFarmers #KarnatakaNews

Comments (0)

Your email address will not be published. Required fields are marked *

Back to top button