
ಬೀದರ್: ಜಿಲ್ಲೆಯ ಪ್ರತಿಷ್ಠಿತ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (BRIMS) ಆಸ್ಪತ್ರೆಯಲ್ಲಿ ಏಳು ಪುಟಾಣಿ ಮಕ್ಕಳಿಗೆ ಸೆಲಾಯಿನ್ ನೀಡಿದ ಬಳಿಕ ಉಂಟಾದ ಆರೋಗ್ಯ ವೈಪರೀತ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಫ್ರೀಡಂ ಟಿವಿ’ ಪ್ರಸಾರ ಮಾಡಿದ್ದ ವರದಿಗೆ ಬಿಗ್ ಇಂಪ್ಯಾಕ್ಟ್ ಸಿಕ್ಕಿದೆ. ವರದಿ ಪ್ರಸಾರವಾದ ಬೆನ್ನಲ್ಲೇ ಎಚ್ಚೆತ್ತ ಮುಖ್ಯಮಂತ್ರಿಗಳ ಕಚೇರಿಯು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಬ್ರಿಮ್ಸ್ ನಿರ್ದೇಶಕರಿಗೆ ಕೂಡಲೆ ಕಾರಣ ನೋಟಿಸ್ ಜಾರಿ ಮಾಡಿದೆ.

ಪ್ರಕರಣದ ವಿವರ
ಕಳೆದ ಮೇ 3ರಂದು ಬ್ರಿಮ್ಸ್ ಜಿಲ್ಲಾ ಬೋಧಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಏಳು ಪುಟಾಣಿ ಮಕ್ಕಳಿಗೆ ಸೆಲಾಯಿನ್ ಹಚ್ಚಲಾಗಿತ್ತು. ಆದರೆ, ಸೆಲಾಯಿನ್ ನೀಡಿದ ಕೆಲವೇ ಕ್ಷಣಗಳಲ್ಲಿ ಮಕ್ಕಳಲ್ಲಿ ತೀವ್ರ ಅಡ್ಡಪರಿಣಾಮಗಳು (Reaction) ಕಾಣಿಸಿಕೊಂಡಿದ್ದವು.ಇದರಿಂದ ಪೋಷಕರು ಆತಂಕಕ್ಕೆ ಒಳಗಾಗಿದ್ದರು. ಈ ಆಘಾತಕಾರಿ ಘಟನೆಯ ಬಗ್ಗೆ ಫ್ರೀಡಂ ಟಿವಿ ಮೇ 3ರಂದು ಎಕ್ಸ್‌ಕ್ಲೂಸಿವ್ ವರದಿಯನ್ನು ಪ್ರಸಾರ ಮಾಡಿ ಅಧಿಕಾರಿಗಳ ಬೇಜವಾಬ್ದಾರಿಯನ್ನು ಬಯಲಿಗೆಳೆದಿತ್ತು.
ಸಿಎಂ ಕಚೇರಿ ಫುಲ್ ಅಲರ್ಟ್
ಫ್ರೀಡಂ ಟಿವಿಯಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಸಂಚಲನ ಮೂಡಿದೆ. ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಯಾದ ಡಾ. ಕೆ. ವೈಷ್ಣವಿ ಅವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಮೇ 5ರಂದು ಆಸ್ಪತ್ರೆಯ ಆಡಳಿತ ಮಂಡಳಿಗೆ ಪತ್ರ ಬರೆದಿದ್ದಾರೆ.ಏಳು ಮಕ್ಕಳ ಆರೋಗ್ಯ ವ್ಯತ್ಯಯಕ್ಕೆ ಕಾರಣವೇನು? ಎಲ್ಲಿ ಲೋಪವಾಗಿದೆ? ಎಂಬ ಬಗ್ಗೆ ವಿಸ್ತೃತ ವರದಿ ನೀಡುವಂತೆ ಬ್ರಿಮ್ಸ್ ನಿರ್ದೇಶಕರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಫ್ರೀಡಂ ಟಿವಿ ವರದಿಗೆ ಜಯ
ಬಡ ರೋಗಿಗಳ ಪಾಲಿನ ಆಶಾಕಿರಣವಾಗಬೇಕಾದ ಸರ್ಕಾರಿ ಆಸ್ಪತ್ರೆಗಳಲ್ಲಿ ಇಂತಹ ನಿರ್ಲಕ್ಷ್ಯಗಳು ನಡೆಯಬಾರದು ಎಂಬ ಉದ್ದೇಶದಿಂದ ಫ್ರೀಡಂ ಟಿವಿ ಈ ವರದಿಯನ್ನು ಸವಿವರವಾಗಿ ಪ್ರಸಾರ ಮಾಡಿತ್ತು. ವರದಿಯ ಎಫೆಕ್ಟ್‌ನಿಂದಾಗಿ ಇದೀಗ ಸರ್ಕಾರ ಬಿಗಿ ಕ್ರಮ ಕೈಗೊಂಡಿದೆ.
#FreedomTV #FreedomTVImpact #BrimsHospital #BidarNews #CMO #SalineReaction #MedicalNegligence #BreakingNews #KannadaNews #ChiefMinisterOffice #BidarHealth #PublicService #ImpactNews #JusticeForChildren #HealthDepartment #BrimsDirectorNotice #ಫ್ರೀಡಂಟಿವಿ #ಬೀದರ್ #ಬ್ರಿಮ್ಸ್ಆಸ್ಪತ್ರೆ #ಸೆಲಾಯಿನ್ರಿಯಾಕ್ಷನ್ #ಸಿಎಂನೋಟಿಸ್ #ಬಿಗ್ಇಂಪ್ಯಾಕ್ಟ್