ಮನರಂಜನೆ

ಪ. ಬಂಗಾಳದಲ್ಲಿ ಮೇ 15ಕ್ಕೆ ‘ದಿ ಬೆಂಗಾಳ್ ಫೈಲ್ಸ್’

ಬಿಜೆಪಿ ಆಡಳಿತದ ಬೆನ್ನಲ್ಲೇ ‘ದಿ ಬೆಂಗಾಳ್ ಫೈಲ್ಸ್’ ತೆರೆಗೆ

ಪಶ್ಚಿಮ ಬಂಗಾಳ: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಬೆಂಗಾಳ್ ಫೈಲ್ಸ್’ ಮೇ.15ಕ್ಕೆ ಪಶ್ಚಿಮ ಬಂಗಾಳದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಬೆಂಗಾಳ್ ಫೈಲ್ಸ್’ ಸಿನಿಮಾ ಮುಂದಿನ ಶುಕ್ರವಾರ ಮೇ 15ರಂದು ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಬದಲಾವಣೆಯಾಗಿದೆ 15 ವರ್ಷಗಳ ಕಾಲ ಆಡಳಿತದಲ್ಲಿದ್ದ ದೀದಿ ಸರ್ಕಾರ ಪತನವಾಗಲಿದ್ದು ಮೊಟ್ಟ ಮೊದಲ ಬಾರಿಗೆ ಬಂಗಾಳದ ನೆಲದಲ್ಲಿ ಬಿಜೆಪಿ ಆಡಳಿತ ಚುಕ್ಜಾಣಿ ಹಿಡಿಯಲಿದೆ. ಈ ಬೆನ್ನಲ್ಲೇ ವಿವೇಕ್ ಅಗ್ನಿಹೋತ್ರಿ ಅವರ ದಿ ಬೆಂಗಾಲ್ ಫೈಲ್ಸ್ ಸಿನಿಮಾ ಬಿಡುಗಡೆಯಾಗುತ್ತಿರುವುದು ಬಿಜೆಪಿಯ ರಾಜಕೀಯ ಪ್ರಾಪಗಂಡಾಗೆ ಪುಷ್ಟಿ ನೀಡಿದೆ.
2025ರಲ್ಲಿ ಬಿಡುಗಡೆಯಾದ ‘ದಿ ಕಾಶ್ಮೀರ್ ಫೈಲ್ಸ್’ ಸಾಕಷ್ಟು ಟೀಕೆಗೆ ಒಳಗಾಗಿತ್ತು. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಇಡೀ ಭಾರತದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಇದು ಪಕ್ಕಾ ಬಿಜೆಪಿಮಯ ಸಿನಿಮಾದಂತಿದೆ ಎಂದು ಸಿನಿ ಪ್ರೇಕ್ಷಕರು ಹಾಗೂ ಚಿಂತಕರು ಬುದ್ಧಿಜೀವಿಗಳು ಕಟುವಾಗಿ ಟೀಕಿಸಿದ್ದರು. ಈಗ ಬಂಗಾಳದ ಸರದಿ.
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ ಚಿತ್ರದ ಪ್ರದರ್ಶನಕ್ಕೆ ಪರೋಕ್ಷವಾಗಿ ತಡೆ ಒಡ್ಡಿತ್ತು. ಈ ಬಗ್ಗೆ ವಿವೇಕ್ ಅಗ್ನಿಹೋತ್ರಿ ವಿರೋಧ ವ್ಯಕ್ತಪಡಿಸಿದ್ದರು.ಚಿತ್ರಮಂದಿರಗಳ ಮಾಲೀಕರಿಗೆ ಬೆದರಿಕೆ ಹಾಕಲಾಗುತ್ತಿದೆ ಮತ್ತು ಚಿತ್ರದ ವಿರುದ್ಧ ಉದ್ದೇಶಪೂರ್ವಕವಾಗಿ ಕಾನೂನುಕ್ರಮ ಜರುಗಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.

‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಪಶ್ಚಿಮ ಬಂಗಾಳದ ನೈಜ ಕರಾಳ ಘಟನೆಗಳಾದ ನೇರ ಕ್ರಮ ದಿನ ಮತ್ತು ನೋಖಾಲಿ ದಂಗೆ ಸುತ್ತ ಹೆಣೆಯಲಾದ ಕಥೆಯನ್ನು ಹೊಂದಿದೆ. ಈ ಚಿತ್ರವು ಸಂಪೂರ್ಣ ಪ್ರಚೋದಮಯವಾದದ್ದು ಎಂಬ ಟೀಕೆಗಳಿದ್ದರೂ ಹಿಂದಿನ ಇತಿಹಾಸವನ್ನು ಜನರಿಗೆ ತಲುಪಿಸುವುದೇ ನನ್ನ ಸಿನಿಮಾದ ಉ್ದೇಶ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅಭಿಪ್ರಾಯ ನೀಡಿದ್ದಾರೆ.ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ ಮತ್ತು ಪಿಎಂ ಮೋದಿಯವರ ಪ್ರಚಾರದ ಫಲ ಬಿಜೆಪಿ ಆಡಳಿತಕ್ಕೆ ಬರುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಿನಿಮಾ ಬಿಡುಗಡೆ ಸುಗಮವಾದರೂ ಈ ಸಿನಿಮಾ ಪಕ್ಕಾ ಬಿಜೆಪಿ ಪ್ರಾಯೋಜಿತ ಚಿತ್ರಕಥೆಯನ್ನು ಹೊಂದಿದೆ ಎಂದು ಸಿನಿರಸಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

#TheBengalFile #VivekAgnihotri #WestBengalPolitics #BJPBengal #MamataBanerjee #TMC #CinemaNews #PoliticalDrama #DirectActionDay #NoakhaliRiots

Comments (0)

Your email address will not be published. Required fields are marked *

Back to top button