ಸಿನಿಮಾ

ಡಾಲಿ ಧನಂಜಯ್ ಇನ್‌ಸ್ಟಾ ಪೋಸ್ಟ್ ಈಗ ಫುಲ್ ವೈರಲ್!

ನಟ ದಲ್ಲಿ ಧನಂಜಯ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರೋ ಒಂದು ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ. ಇಡೀ ಜಗತ್ತು ಯುದ್ಧದ ಭೀತಿಯಲ್ಲಿದ್ದು, ಎಲ್ಲಿ ನೋಡಿದರೂ ಮದ್ದು-ಗುಂಡುಗಳ ಅಬ್ಬರ ಕೇಳಿಬರುತ್ತಿರುವ ಈ ಆತಂಕದ ಸಮಯದಲ್ಲಿ ಡಾಲಿ ಶಾಂತಿ ಮಂತ್ರ ಜಪಿಸಿದ್ದಾರೆ. ಸಂತ ಶಿಶುನಾಳ ಶರೀಫರ ಅರ್ಥಗರ್ಭಿತ ಸಾಲುಗಳನ್ನು ಬಳಸಿಕೊಂಡು ವಿಶ್ವ ಶಾಂತಿಯ ಬಗ್ಗೆ ಧನಂಜಯ್ ಮಾಡಿರೋ ಪೋಸ್ಟ್ ಈಗ ಎಲ್ಲರ ಗಮನ ಸೆಳಿತಿದೆ.

ಧನಂಜಯ್ ಅವರು ಶರೀಫರ ತತ್ವಪದದ ‘ಜಗವೇ ಒಂದಳ್ಳಿ ಅಂತಾಗೋದ್ರೆ ಏನ್ ಚೆಂದ’ ಅನ್ನೋ ಸಾಲುಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಗಡಿ ವಿವಾದ, ಅಧಿಕಾರದ ಹಪಾಹಪಿ ಬಿಟ್ಟು ಎಲ್ಲರೂ ಮನುಷ್ಯತ್ವದಿಂದ ಒಂದಾಗಿ ಬದುಕಿದರೆ ಎಷ್ಟು ಚೆಂದ ಇರುತ್ತೆ ಅನ್ನೋ ಮಾರ್ಮಿಕ ಸಂದೇಶವನ್ನು ಅವರು ನೀಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಉದ್ವಿಗ್ನತೆ ಹೆಚ್ಚಾಗಿರೋ ಈ ಹೊತ್ತಿನಲ್ಲಿ, ನಟನೊಬ್ಬ ಇಷ್ಟೊಂದು ಜವಾಬ್ದಾರಿಯುತವಾಗಿ ಸಮಾಜಕ್ಕೆ ಶಾಂತಿಯ ಪಾಠ ಹೇಳಿರೋದು ನಿಜಕ್ಕೂ ಮೆಚ್ಚುವಂತಹ ವಿಚಾರ.

ಡಾಲಿ ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ, ನಿಜ ಜೀವನದಲ್ಲೂ ಸದಾ ವೈಚಾರಿಕತೆಯ ಪರವಾಗಿ ನಿಲ್ಲೋ ವ್ಯಕ್ತಿ ಅನ್ನೋದು ಈ ಪೋಸ್ಟ್‌ನಿಂದ ಮತ್ತೊಮ್ಮೆ ಸಾಬೀತಾಗಿದೆ. ಶರೀಫರ ತತ್ವಗಳ ಮೂಲಕ ಯುದ್ಧದ ಕಿಚ್ಚಿಗೆ ಪ್ರೀತಿಯ ನೀರೆರೆದಂತಿರೋ ಈ ಪೋಸ್ಟ್ ಈಗ ಫುಲ್ ವೈರಲ್ ಆಗ್ತಿದೆ.

Comments (0)

Your email address will not be published. Required fields are marked *

Back to top button