ಕ್ರಿಕೆಟ್ಸುದ್ದಿ

₹30 ಲಕ್ಷಕ್ಕೆ ಐಪಿಎಲ್‌ಗೆ ಬಂದವ, ಈಗ ₹16 ಸಾವಿರ ಕೋಟಿ ಮೌಲ್ಯದ RCB ಅಧ್ಯಕ್ಷ!

ಐಪಿಎಲ್ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹೊಸ ಮಾಲೀಕರ ಕೈಸೇರಿದೆ. 2008 ರಿಂದ ಐಪಿಎಲ್‌ನಲ್ಲಿ ಆಡುತ್ತ ಬಂದಿರುವ ಆರ್​ಸಿಬಿ ಇದುವರೆಗೆ ಒಮ್ಮೆ ಮಾತ್ರ ಚಾಂಪಿಯನ್ ಆಗಿದೆ. ಅಂದರೆ ಸತತ 18 ವರ್ಷಗಳ ಕಾಯುವಿಕೆಯ ಬಳಿಕ ಏಕೈಕ ಟ್ರೋಫಿ ಗೆದ್ದಿರುವ ಆರ್​ಸಿಬಿ, ಇದೀಗ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಒಂದು ಕಾಲದಲ್ಲಿ ಇದೇ ಐಪಿಎಲ್ ಹರಾಜಿನಲ್ಲಿ ಭಾಗವಹಿಸಿ ಕೇವಲ 30 ಲಕ್ಷ ರೂ. ಮೂಲ ಬೆಲೆಗೆ ಮಾರಾಟವಾಗಿದ್ದ ಆಟಗಾರನೊಬ್ಬ ಇದೀಗ 16 ಸಾವಿರ ಕೋಟಿ ಮೌಲ್ಯದ ಆರ್​ಸಿಬಿ ತಂಡಕ್ಕೆ ಅಧ್ಯಕ್ಷನಾಗಿ ಆಯ್ಕೆಯಾಗಿದ್ದಾನೆ.

ಕಳೆದ ವರ್ಷ ತನ್ನ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಮಾರಾಟದ ಬಗ್ಗೆಗಿನ ಸುದ್ದಿ ಕಳೆದ ವರ್ಷವೇ ಹೊರಬಿದ್ದಿತ್ತು. ಅದರಂತೆ ಮಾರ್ಚ್​ 24, 2026 ರಂದು ಆರ್​ಸಿಬಿ ಅಧಿಕೃತವಾಗಿ ಹೊಸ ಮಾಲೀಕರ ಪಾಲಾಗಿದೆ. ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಬ್ಲಾಕ್‌ಸ್ಟೋನ್ ಜಂಟಿಯಾಗಿ 16,600 ಕೋಟಿಗೆ ಫ್ರಾಂಚೈಸಿಯನ್ನು ಸ್ವಾಧೀನಪಡಿಸಿಕೊಂಡಿವೆ.

ಈ ತಂಡದಲ್ಲಿ 4 ಕಂಪನಿಗಳ ಪಾಲು ಎಷ್ಟೇಷ್ಟು ಎಂಬುದು ಇನ್ನು ಖಚಿತವಾಗಿಲ್ಲ. ಆದಾಗ್ಯೂ ಆದಿತ್ಯ ಬಿರ್ಲಾ ಗ್ರೂಪ್ ನಿರ್ದೇಶಕ ಆರ್ಯಮಾನ್ ವಿಕ್ರಮ್ ಬಿರ್ಲಾ ಅವರನ್ನು ಆರ್‌ಸಿಬಿಯ ಹೊಸ ಅಧ್ಯಕ್ಷನಾಗಿ ಘೋಷಿಸಲಾಗಿದೆ. ಬಿರ್ಲಾ ಗ್ರೂಪ್‌ನ ಮಾಲೀಕರಾದ ಕುಮಾರ್ ಮಂಗಲಂ ಬಿರ್ಲಾ ಅವರ ಪುತ್ರ. ಕೇವಲ 28 ವರ್ಷ ವಯಸ್ಸಿನಲ್ಲಿಯೇ ಐಪಿಎಲ್‌ನ ಅತ್ಯಂತ ದುಬಾರಿ ತಂಡದ ಮಾಲೀಕರಾಗಿರುವ ಆರ್ಯಮಾನ್ ವಿಕ್ರಮ್ ಬಿರ್ಲಾ, ಈ ಹಿಂದೆ ಇದೇ ಐಪಿಎಲ್‌ನಲ್ಲಿ ತಂಡವೊಂದರ ಸದಸ್ಯರಾಗಿದ್ದರು.

Comments (0)

Your email address will not be published. Required fields are marked *

Back to top button