ಏರ್ ಕೆನಡಾ ವಿಮಾನ ಅಪಘಾತ

ನ್ಯೂಯಾರ್ಕ್ : ಅಮೆರಿಕದ New York Cityಯ LaGuardia Airportನಲ್ಲಿ ಸಂಭವಿಸಿದ ಏರ್ ಕೆನಡಾ ವಿಮಾನ ಅಪಘಾತ ಆತಂಕ ಮೂಡಿಸಿದೆ.
ಭಾನುವಾರ (ಮಾ.22) ತಡರಾತ್ರಿ ನಡೆದ ಈ ದುರ್ಘಟನೆಯಲ್ಲಿ, ವಿಮಾನ ಸಿಬ್ಬಂದಿಯೊಬ್ಬರು ಸುಮಾರು 330 ಅಡಿ ದೂರಕ್ಕೆ ಎಸೆಯಲ್ಪಟ್ಟರೂ ಪವಾಡದಂತೆ ಬದುಕುಳಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರು ತಮ್ಮ ಜಂಪ್ ಸೀಟ್ಗೆ ಕಟ್ಟಿಹಾಕಿದ ಸ್ಥಿತಿಯಲ್ಲೇ ಕೆಳಗೆ ಬಿದ್ದಿದ್ದರು ಎನ್ನಲಾಗಿದೆ.
ಗಾಯಗೊಂಡ ಸಿಬ್ಬಂದಿಯನ್ನು ಸೋಲಾಂಜ್ ಟ್ರೆಂಬ್ಲೇ ಎಂದು ಗುರುತಿಸಲಾಗಿದ್ದು, ಅವರ ಒಂದು ಕಾಲಿನಲ್ಲಿ ಮುರಿತಗಳಾಗಿವೆ. ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಅವರ ಮಗಳು ಸಾರಾ ಲೆಪಿನ್ ತಿಳಿಸಿದ್ದಾರೆ. ಈ ಘಟನೆ ಹೇಗೆ ಸಂಭವಿಸಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

Montrealನಿಂದ ಹೊರಟಿದ್ದ Air Canada Expressಗೆ ಸೇರಿದ CRJ-900 ವಿಮಾನದಲ್ಲಿ 72 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು. ಲಾಗ್ವಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ವಿಮಾನ ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಈ ದುರ್ಘಟನೆಯಲ್ಲಿ ಪೈಲಟ್ ಮತ್ತು ಸಹ ಪೈಲಟ್ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಈ ಘಟನೆ ವಿಮಾನಯಾನ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಗಳನ್ನು ಎಬ್ಬಿಸಿದ್ದು, ತನಿಖೆ ಮುಂದುವರಿದಿದೆ.




