ದೇಶ/ವಿದೇಶವೈರಲ್ ನ್ಯೂಸ್

5 ವರ್ಷ ಸುರಂಗ ತೋಡಿದ್ದ ಕೈದಿ; ಹೊರಬಂದಾಗ ಕಾಯುತ್ತಿದ್ದರು ಭದ್ರತಾ ಸಿಬ್ಬಂದಿ!

ಬ್ರೆಜಿಲ್‌ : ಜೈಲೊಂದರಲ್ಲಿ ನಡೆದ ಈ ರೋಚಕ ಘಟನೆ ಸಿನಿಮಾದ ಕಥೆಯನ್ನೂ ಮೀರಿಸುವಂತಿದೆ. ಕೈದಿಯೊಬ್ಬ ಜೈಲಿನಿಂದ ತಪ್ಪಿಸಿಕೊಳ್ಳಲು ಬರೋಬ್ಬರಿ ಐದು ವರ್ಷಗಳ ಕಾಲ ಅತ್ಯಂತ ತಾಳ್ಮೆಯಿಂದ ಸುರಂಗ ತೋಡಿದ್ದು, ಅಂತಿಮವಾಗಿ ಆತ ತಲುಪಿದ ಜಾಗ ಮಾತ್ರ ಯಾರಿಗೂ ಊಹಿಸಲೂ ಅಸಾಧ್ಯವಾದುದಾಗಿತ್ತು. ಸ್ವಾತಂತ್ರ್ಯದ ಹಂಬಲದಲ್ಲಿ ರಹಸ್ಯವಾಗಿ ಸುರಂಗ ಕೊರೆದ ಆತ ಹೊರಬಂದಿದ್ದು ನೇರವಾಗಿ ಭದ್ರತಾ ಸಿಬ್ಬಂದಿಯ ಕೋಣೆಗೆ.

ಬಹಳ ಎಚ್ಚರಿಕೆಯಿಂದ ಮತ್ತು ಯೋಜಿತವಾಗಿ ವರ್ಷಗಳ ಕಾಲ ಶ್ರಮಪಟ್ಟು ಕೆಲಸ ಮಾಡಿದ್ದ ಆ ಕೈದಿ, ಸುರಂಗದ ಕೊನೆಯಲ್ಲಿ \ಹೊರಜಗತ್ತನ್ನು ನಿರೀಕ್ಷಿಸಿದ್ದ. ಆದರೆ, ವಿಧಿಯಾಟ ಎನ್ನುವಂತೆ ಆ ಸುರಂಗವು ಜೈಲಿನ ಕಾವಲುಗಾರರು ಮತ್ತು ಅಧಿಕಾರಿಗಳು ಕುಳಿತಿದ್ದ ಭದ್ರತಾ ಕೇಂದ್ರದಲ್ಲೇ ಕೊನೆಗೊಂಡಿತ್ತು. ಆತ ಸುರಂಗದಿಂದ ಹೊರಬರುತ್ತಿದ್ದಂತೆ ಅಲ್ಲಿ ಸನ್ನದ್ಧರಾಗಿದ್ದ ಅಧಿಕಾರಿಗಳು ಆತನನ್ನು ಅಕ್ಷರಶಃ ಕೈಬಾಚಿ ಸ್ವಾಗತಿಸಿ, ಮತ್ತೆ ಜೈಲಿನ ಕಂಬಿಗಳ ಹಿಂದೆ ತಳ್ಳಿದ್ದಾರೆ.

ಈ ಘಟನೆಯು ಬ್ರೆಜಿಲ್‌ನ ಜೈಲುಗಳಲ್ಲಿನ ಕಿಕ್ಕಿರಿದ ಪರಿಸ್ಥಿತಿ ಮತ್ತು ಕೈದಿಗಳ ಮನಸ್ಥಿತಿಯ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ. ವಿಸ್ತೀರ್ಣದಲ್ಲಿ ವಿಶ್ವದ 5ನೇ ಅತಿದೊಡ್ಡ ದೇಶವಾಗಿರುವ ಬ್ರೆಜಿಲ್‌ನಲ್ಲಿ ಅಪರಾಧಿಗಳ ಸಂಖ್ಯೆಯೂ ಅಧಿಕವಾಗಿದ್ದು, 2023ರ ವರದಿಯಂತೆ ಸುಮಾರು 8,11,707 ಕೈದಿಗಳು ಅಲ್ಲಿನ ಕಾರಾಗೃಹಗಳಲ್ಲಿದ್ದಾರೆ. ಜೈಲಿನಿಂದ ತಪ್ಪಿಸಿಕೊಳ್ಳಲು ಕೈದಿಗಳು ಮಾಡುವ ಇಂತಹ ವಿಫಲ ಸಾಹಸಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.

Comments (0)

Your email address will not be published. Required fields are marked *

Back to top button