ಸುದ್ದಿ

ಚೈತ್ರಾ ಕುಂದಾಪುರ vs ಅಶ್ವಿನಿ ಗೌಡ ಸೋಶಿಯಲ್ ಮೀಡಿಯಾ ವಾರ್!

ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯಗೊಂಡು ವಾರಗಳೇ ಕಳೆದಿದ್ದರೂ, ಸ್ಪರ್ಧಿಗಳ ನಡುವಿನ ಹಳೆಯ ವೈಷಮ್ಯ ಮಾತ್ರ ಇನ್ನೂ ತಣ್ಣಗಾಗಿಲ್ಲ. ಮನೆಯೊಳಗೆ ಪರಸ್ಪರ ಕೆಸರೆರಚಾಟ ನಡೆಸಿದ್ದ ಚೈತ್ರಾ ಕುಂದಾಪುರ ಮತ್ತು ಅಶ್ವಿನಿ ಗೌಡ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಜಗಳಕ್ಕೆ ಇಳಿದಿದ್ದಾರೆ. ಅಶ್ವಿನಿ ಗೌಡ ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್ ಈ ಹೊಸ ಸಮರಕ್ಕೆ ನಾಂದಿ ಹಾಡಿದೆ. ತಮ್ಮ ಕೈಕಾಲುಗಳ ಮೇಲೆ ಆಗಿರುವ ಪರಚಿದ ಗಾಯದ ಗುರುತುಗಳ ಫೋಟೋವನ್ನು ಅಶ್ವಿನಿ ಪೋಸ್ಟ್ ಮಾಡಿದ್ದು, ಇದು ಬಿಗ್ ಬಾಸ್ ಮನೆಯಲ್ಲಿದ್ದಾಗ ಚೈತ್ರಾ ಕುಂದಾಪುರ ಅವರು ಮಾಡಿದ್ದ ಗಾಯಗಳು ಎಂದು ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಚರ್ಚೆ ಆರಂಭಿಸಿದ್ದಾರೆ.

ಈ ಪೋಸ್ಟ್‌ನಿಂದ ಕೆರಳಿದ ಚೈತ್ರಾ ಕುಂದಾಪುರ ಅವರು ತಕ್ಷಣವೇ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. “ನನ್ನ ದೇಹದ ಮೇಲೂ ಇಂತಹ ಪರಚಿದ ಕಲೆಗಳಿವೆ, ಆದರೆ ಕ್ಷಮಿಸಿ, ಇವುಗಳನ್ನು ವೈಭವೀಕರಿಸಲು ಅಥವಾ ಪ್ರಚಾರ ಮಾಡಲು ನನ್ನ ಬಳಿ ಯಾವುದೇ ಪ್ರತ್ಯೇಕ ಪಿಆರ್ ತಂಡ ಇಲ್ಲ” ಎಂದು ಬರೆಯುವ ಮೂಲಕ ಅಶ್ವಿನಿ ಗೌಡ ಅವರಿಗೆ ವ್ಯಂಗ್ಯವಾಗಿ ಕೌಂಟರ್ ಕೊಟ್ಟಿದ್ದಾರೆ. ಚೈತ್ರಾ ಅವರ ಈ ಪೋಸ್ಟ್ ಅಶ್ವಿನಿ ಗೌಡ ಅವರ ಅಭಿಮಾನಿಗಳನ್ನು ಕೆರಳಿಸಿದ್ದು, ಚೈತ್ರಾ ವಿರುದ್ಧ ಸರಣಿ ಪೋಸ್ಟ್ ಹಾಗೂ ಕಮೆಂಟ್‌ಗಳ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ.

ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆ ಪ್ರವೇಶಿಸಿದ್ದ ಚೈತ್ರಾ ಕುಂದಾಪುರ ಮತ್ತು ಅಶ್ವಿನಿ ಗೌಡ ನಡುವೆ ಮೊದಲ ದಿನದಿಂದಲೂ ಸರಿ ಇರಲಿಲ್ಲ. ಮನೆಯೊಳಗೆ ನಡೆದ ದೈಹಿಕ ಟಾಸ್ಕ್ ಒಂದರಲ್ಲಿ ಇಬ್ಬರ ನಡುವೆ ದೊಡ್ಡ ಮಟ್ಟದ ಸಂಘರ್ಷ ಏರ್ಪಟ್ಟಿತ್ತು. ಅಂದು ನಡೆದ ಗಲಾಟೆಯ ಕಲೆಗಳು ಈಗ ಪೋಸ್ಟ್ ವಾರ್ ರೂಪ ಪಡೆದುಕೊಂಡಿವೆ. ಇಬ್ಬರು ಮಾಜಿ ಸ್ಪರ್ಧಿಗಳ ಈ ಸೋಶಿಯಲ್ ಮೀಡಿಯಾ ಕಿತ್ತಾಟವನ್ನು ನೋಡಿ ನೆಟ್ಟಿಗರು, “ಶೋ ಮುಗಿದ ಮೇಲೆ ಇಬ್ಬರೂ ಅವರವರ ಕೆಲಸ ನೋಡಿಕೊಳ್ಳುವುದನ್ನು ಬಿಟ್ಟು ಇನ್ನೂ ಯಾಕೆ ಹೀಗೆ ಮಾಡುತ್ತಿದ್ದಾರೆ?” ಎಂದು ರಿಯಾಕ್ಟ್ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button