Top Newsಆಟೋ ಎಕ್ಸ್ ಪೋ

ಯಲಹಂಕದಲ್ಲಿ ಫ್ರೀಡಂಟಿವಿ ಮೆಗಾ ಎಕ್ಸ್ ಪೋ ಶುರು.. ಬನ್ನಿ ಜೊತೆಯಾಗಿ

ನಿಮ್ಮ ನೆಚ್ಚಿನ ಫ್ರೀಡಂ ಟಿವಿಯು ಬೆಂಗಳೂರಿನಲ್ಲಿ ವೀರ ವನಿತೆ ಅವಾರ್ಡ್ಸ್ 2025 ಆಯೋಜಿಸಿದೆ. ಯಲಹಂಕ ನ್ಯೂಟೌನ್​​ನಲ್ಲಿರುವ ವಿವೇಕಾನಂದ ಪ್ಲೇ ಗ್ರೌಂಡ್​​ನಲ್ಲಿ ಇಂದಿನಿಂದ 3 ದಿನಗಳ ಕಾಲ ಈ ಮೆಗಾ ಎಕ್ಸ್​​ಪೋ ನಡೀತಿದೆ.

ಯಲಹಂಕ ಕ್ಷೇತ್ರದ ಜನಪ್ರಿಯ ಶಾಸಕ ಎಸ್ ಆರ್ ವಿಶ್ವನಾಥ್ ಅವರ ನೇತೃತ್ವದಲ್ಲಿ ನಿಮ್ಮ ಫ್ರೀಡಂ ಟಿವಿ ಆಯೋಜಿಸಿರೋ ಫೆಸ್ಟಿವಲ್​​​ನಲ್ಲಿ ಫುಡ್, ಫನ್, ಫ್ಯಾಶನ್ ಜೊತೆಗೆ ಆಟೋಮೊಬೈಲ್ ಎಕ್ಸ್​ ​ಪೋ ಕೂಡ ಇದೆ.

ಇಲ್ಲಿ ಬಗೆ ಬಗೆಯ ತಿಂಡಿ ತಿನಿಸುಗಳು, ನಿಮ್ಮ ಮನೆಗೆ ಬೇಕಾದ ಗೃಹೋಪಯೋಗಿ ವಸ್ತುಗಳು, ಹೆಣ್ಮಕ್ಕಳಿಗೆ ಪ್ರಿಯವಾದ ಜ್ಯೂವೆಲ್ಲರಿ ಐಟಮ್ಸ್ ಕೂಡ ಇವೆ. ಜೊತೆಗೆ ನಿಮ್ಮಿಷ್ಟದ ವಾಹನಗಳ ವೀಕ್ಷಣೆ, ಖರೀದಿ ಕೂಡ ಮಾಡಬಹುದು.

ಸಂಜೆ ಆರು ಗಂಟೆಗೆ ಎಕ್ಸ್ ಪೋವನ್ನು ನಟ ಚೇತನ್ ಅಹಿಂಸಾ ಉದ್ಘಾಟಿಸಲಿದ್ದಾರೆ. ನಾಳೆ ನಮ್ಮೊಂದಿಗೆ ನಟಿ ಜಾಹ್ನವಿ, ಕಲಾವಿದ ಮಿಮಿಕ್ರಿ ಗೋಪಿ ಇರಲಿದ್ದಾರೆ.

ಅಂತಿಮದಿನವಾದ ಭಾನುವಾರ ನಮ್ಮಂದಿಗೆ ಸನ್ಮಾನ್ಯ ಸಚಿವರಾದ ಬೈರತಿ ಸುರೇಶ್​, ಶಾಸಕ ಎಸ್​ ಆರ್ ವಿಶ್ವನಾಥ್​, ಐಪಿಎಸ್ ಅಧಿಕಾರಿ ಡಿ ರೂಪಾ ಸೇರಿ ಗಣ್ಯರು ಇರಲಿದ್ದಾರೆ.

ಅದೇ ದಿನ ಸಂಜೆ ವಿವಿಧ ವಲಯದಲ್ಲಿ ಸಾಧನೆ ಮಾಡಿದ ಸಾಧಕಿಯರಿಗೆ ಫ್ರೀಡಂ ಟಿವಿ ವೀರ ವನಿತೆ ಅವಾರ್ಡ್ಸ್ ಪ್ರದಾನ ಮಾಡಲಾಗುತ್ತೆ..

ನೀವು ನಮ್ಮೊಂದಿಗೆ ಜೊತೆಯಾಗಿ.. ಈ ಎಕ್ಸ್​​ಪೋಗೆ ಎಲ್ಲರಿಗೂ ಉಚಿತ ಎಂಟ್ರಿ ಇದೆ… ಮೂರು ದಿನಗಳ ಕಾಲ ವಿವಿಧ ಕಾಂಪಿಟೇಷನ್​​ಗಳು ಕೂಡ ಇರಲಿದ್ದು ಸಾಕಷ್ಟು ಜನ ಈಗಾಗಲೇ ನೋಂದಣಿ ಮಾಡಿಸಿದ್ದಾರೆ. ವಿಜೇತರಿಗೆ ಬಹುಮಾನ ಹಾಗೂ ಪ್ರಶಂಸನಾ ಪತ್ರವನ್ನ ಕೂಡ ನೀಡಲಾಗುತ್ತೆ.

ಯಲಹಂಕ ಸುತ್ತಮುತ್ತಲ ಜನ ಫ್ರೀಡಂ ಟಿವಿ ಆಯೋಜಿಸಿರೋ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ.

Comments (0)

Your email address will not be published. Required fields are marked *

Back to top button