ಕಲಬುರಗಿ : ಭಾರತಕ್ಕೆ ಒಂದು ಸಂವಿಧಾನ ಆದ್ರೆ ಕಲಬುರಗಿಗೆ ಒಂದು ಸಂವಿಧಾನ ಇದೆ ಎಂದು ಕಲಬುರಗಿಯಲ್ಲಿ ಬಿಜೆಪಿಯ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಹೇಳಿಕೆ ನೀಡಿದ್ದಾರೆ.ಚಿತ್ತಾಪೂರನಲ್ಲಿ ಛಲವಾದಿ ನಾರಾಯಣ ಸ್ವಾಮಿಗೆ ಕೂಡಿ ಹಾಕಿದಕ್ಕೆ ಮಾಜಿ ಶಾಸಕ ಆಕ್ರೋಶ ಹೊರ ಹಾಕಿದ್ದಾರೆ.
ಕಲಬುರ್ಗಿಯಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆ.ಒಬ್ಬ ವಿರೋಧ ಪಕ್ಷದ ನಾಯಕನನ್ನ ಚಿತ್ತಾಪೂರ ಸರ್ಕ್ಯೂಟ್ ಔಸ್ ನಲ್ಲಿ ಕೂಡಿ ಹಾಕಿದ್ದಾರೆ.ಪೊಲೀಸರ ವೈಫಲ್ಯವೇ ಇದಕ್ಕೆಲ್ಲಾ ಕಾರಣ.ಪ್ರತಿಭಟನೆಗೂ ಸಹ ಪೊಲೀಸರೇ ಕುಮ್ಮಕ್ಕು ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.ಇದರಲ್ಲಿ ಹಕ್ಕು ಚ್ಯುತಿ ಆಗಿದೆ.ಯಾರ ಅಣತಿಯಂತೆ ಪೊಲೀಸರು ಕೆಲಸ ಮಾಡುತ್ತಿದ್ದಾರೆ.ಪೊಲೀಸರನ್ನು ತಕ್ಷಣ ಅಮಾನತು ಮಾಡಬೇಕೆಂದು ತೇಲ್ಕೂರ್ ಆಗ್ರಹಿಸಿದರು.
ಚಿತ್ತಾಪೂರನಲ್ಲಿ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಗೆ ಹೋಗಲು ಛಲವಾದಿ ನಾರಾಯಣ ಸ್ವಾಮಿ ಅವರಿಗೆ ಬಿಡಲಿಲ್ಲ .ಮೇ 24 ರಂದು ಬಿಜೆಪಿ ನಾಯಕರು ’ಕಲಬುರ್ಗಿ ಚಲೋ’ ಹೋರಾಟವನ್ನು ಹಮ್ಮಿಕೊಂಡಿದ್ದಾರೆ.ರಾಜ್ಯಾಧ್ಯಕ್ಷರು, ಮಾಜಿ ಸಿಎಂ ಸೇರಿ ರಾಜ್ಯ ಮಟ್ಟದ ನಾಯಕರು ಭಾಗಿಯಾಗಲಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಗುಂಡಾ ಕಾಯ್ದೆಯಡಿ ಕೇಸ್ ದಾಖಲು ಮಾಡಬೇಕು ಎಂದು ಕಲಬುರ್ಗಿಯಲ್ಲಿ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಒತ್ತಾಯ ಮಾಡಿದ್ದಾರೆ.


