#Exclusive NewsTop Newsಮನರಂಜನೆಸುದ್ದಿ

ಒಂದು ಸಿನಿಮಾ ; 30 ಬಾರಿ ಲಿಪ್​ ಕಿಸ್​….!

ಹಿಂದಿ ಸಿನಿಮಾದ ಮೂಲಕ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದರು. ಅವರು 2008ರಲ್ಲಿ ‘ಜನ್ನತ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ಕನ್ನಡದಲ್ಲಿ ‘ಚೆಲುವೆಯೇ ನಿನ್ನ ನೋಡಲು’ ಸಿನಿಮಾ ಮಾಡಿದ್ದಾರೆ. ಅವರು ಬೇರಾರೂ ಅಲ್ಲ ಸೋನಾಲ್ ಚೌಹಾಣ್. ಸೋನಾಲ್ ಮೊದಲ ಚಿತ್ರದಿಂದ ರಾಷ್ಟ್ರೀಯ ಕ್ರಶ್ ಆದರು. ತೆಲುಗು, ಹಿಂದಿ ಭಾಷೆಗಳಲ್ಲಿ ಸಿನಿಮಾ, ಮ್ಯೂಸಿಕ್ ಆಲ್ಬಂ ಮಾಡಿದ್ದರೂ ಈ ಚೆಲುವೆಗೆ ಸಿಗಬೇಕಾದ ಕ್ರೇಜ್ ಸಿಕ್ಕಿಲ್ಲ. ಇನ್ನೊಂದು ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ ಇವರು ಒಂದೇ ಸಿನಿಮಾದಲ್ಲಿ 30 ಲಿಪ್ಲಾಕ್ ಸೀನ್​ಗಳಲ್ಲಿ ನಟಿಸಿ ಹುಡುಗರ ನಿದ್ದೆಗೆಡಿಸಿದ್ದರು.

2013ರಲ್ಲಿ ಸೋನಾಲ್ ಚೌಹಾಣ್ ‘3ಜಿ- ಎ ಕಿಲ್ಲರ್ ಕನೆಕ್ಷನ್’ ಚಿತ್ರದಲ್ಲಿ ನಟಿಸಿದ್ದರು. ನೀಲ್ ನಿತಿನ್ ಮುಖೇಶ್ ಇದರಲ್ಲಿ ನಾಯಕನಾಗಿ ನಟಿಸಿದ್ದಾರೆ. ಅದು ಬಾಕ್ಸ್ ಆಫೀಸ್‌ನಲ್ಲಿ ಸೋತಿತು. ಆದರೆ ಚಿತ್ರವು 30 ಕಿಸ್ ದೃಶ್ಯಗಳನ್ನು ಹೊಂದಿದ್ದು,  ದಾಖಲೆ ಬರೆದಿದೆ. ಈ ಹಿಂದೆ ಇಮ್ರಾನ್ ಹಶ್ಮಿ ಮತ್ತು ಮಲ್ಲಿಕಾ ಶೆರಾವತ್ ಅಭಿನಯದ ‘ಮರ್ಡರ್’ ಚಿತ್ರವು 20 ಕಿಸ್ ದೃಶ್ಯಗಳನ್ನು ಹೊಂದಿತ್ತು. ಆ ದಾಖಲೆಯನ್ನು 3G ಚಿತ್ರ (30 ಕಿಸ್ ಸೀನ್‌ಗಳು) ಮುರಿದಿತ್ತು. ಸೋನಾಲ್ ಯಾವಾಗಲೂ ಇನ್​​ಸ್ಟಾಗ್ರಾಮ್​ನಲ್ಲಿ ಸಕ್ರಿಯವಾಗಿರುತ್ತಾರೆ. ಯಾವಾಗಲೂ ಇತ್ತೀಚಿನ ಫೋಟೋಗಳೊಂದಿಗೆ ಅಭಿಮಾನಿಗಳನ್ನು ರಂಜಿಸುತ್ತಾರೆ.

 

Comments (0)

Your email address will not be published. Required fields are marked *

Back to top button