#Exclusive NewsTop Newsಸುದ್ದಿ

ಲೈಂಗಿಕ ನಿಂದನೆ ಆರೋಪ ಪ್ರಕರಣದಲ್ಲಿ ಡೊನಾಲ್ಡ್‌ ಟ್ರಂಪ್‌ಗೆ ಭಾರೀ ಹಿನ್ನೆಡೆ

ವಾಷಿಂಗ್ಟನ್ : ಡೊನಾಲ್ಡ್‌ ಟ್ರಂಪ್‌ ಅವರು 1996ರಲ್ಲಿ ಮ್ಯಾನ್‌ಹ್ಯಾಟನ್ ಡಿಪಾರ್ಟ್‌ಮೆಂಟ್ ಸ್ಟೋರ್‌ನಲ್ಲಿ, ಲೇಖಕಿ ಇ. ಜೀನ್ ಕ್ಯಾರೊಲ್ ಅವರನ್ನು ಲೈಂಗಿಕವಾಗಿ ನಿಂದಿಸಿದ ಆರೋಪ ಎದುರಿಸುತ್ತಿದ್ದಾರೆ. ಈ ಕುರಿತು ಮಾನಹಾನಿ ಮೊಕದ್ದಮೆ ಮೂಲಕ ಜೀನ್‌ ಕ್ಯಾರೊಲ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ ಕೆಳಹಂತದ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿರುವ ಫೇಡರಲ್‌ ಮೇಲ್ಮನವಿ ನ್ಯಾಯಾಲಯ, 5 ಮಿಲಿಯನ್ ಅಮೆರಿಕನ್‌ ಡಾಲರ್‌ ಪಾವತಿಸುವಂತೆ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರಿಗೆ ಆದೇಶ ನೀಡಿದೆ.ಅಮೆರಿಕದ ಫೇಡರಲ್‌ ಮೇಲ್ಮನವಿ ನ್ಯಾಯಾಲಯ ನೀಡಿರುವ ತೀರ್ಪು, ಟ್ರಂಪ್‌ ಅವರ ವರ್ಚಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

1996ರಲ್ಲಿ ಮ್ಯಾನ್‌ಹ್ಯಾಟನ್ ಡಿಪಾರ್ಟ್‌ಮೆಂಟ್ ಸ್ಟೋರ್‌ನ ಡ್ರೆಸ್ಸಿಂಗ್ ಕೋಣೆ ಪ್ರವೇಶಿಸಿದ ಡೊನಾಲ್ಡ್‌ ಟ್ರಂಪ್‌, ತಮ್ಮನ್ನು ಲೈಂಗಿಕವಾಗಿ ನಿಂದಿಸಿದ್ದಲ್ಲದೇ ಮಾನಹಾನಿ ಮಾಡಿದರು ಎಂದು ಇ. ಜೀನ್‌ ಕ್ಯಾರೊಲ್‌ ಆರೋಪಿಸಿದ್ದರು. ಕಳದ ವರ್ಷ ಒಟ್ಟು 9 ದಿನಗಳ ಕಾಲ ನಡೆದ ಸಿವಿಲ್‌ ವಿಚಾರಣೆಯ ಬಳಿಕ, ಡೊನಾಲ್ಡ್‌ ಟ್ರಂಪ್‌ ಅವರಿಗೆ ದಂಡ ಪಾವತಿಸಿ ನ್ಯಾಯಾಲಯ ಆದೇಶ ಹೊರಡಿಸಿತ್ತು.

ಪದೇ ಪದೇ ವಿಚಾರಣೆಯನ್ನು ತಪ್ಪಿಸಿಕೊಳ್ಳುತ್ತಿದ್ದ ಟ್ರಂಪ್‌, ತಾವು ಕ್ಯಾರೊಲ್‌ ಅವರಿಗೆ ಯಾವುದೇ ರೀತಿಯ ಲೈಂಗಿಕ ನಿಂದನೆ ಮಾಡಿಲ್ಲ ಎಂದೇ ವಾದಿಸುತ್ತಿದ್ದರು. ಆದರೀಗ ಸುದೀರ್ಘ ವಿಚಾರಣೆ ಬಳಿಕ ಟ್ರಂಪ್‌ ತಪ್ಪಿತಸ್ಥರೆಂದು ನ್ಯಾಯಾಲಯ ಹೇಳಿದ್ದು, ಇದಕ್ಕಾಗಿ ಟ್ರಂಪ್ ಭಾರೀ ಮೊತ್ತದ‌ ದಂಡವನ್ನೂ ಪಾವತಿಸಬೇಕಿದೆ.

Comments (0)

Your email address will not be published. Required fields are marked *

Back to top button