Top Newsಸುದ್ದಿ

ಭೂಮಿ ಸಮೀಪದಲ್ಲೇ ಹಾದು ಹೋಗಲಿದೆ ಫುಟ್‌ಬಾಲ್‌ ಸ್ಟೇಡಿಯಂ ಗಾತ್ರದ ಕ್ಷುದ್ರಗ್ರಹ..! ಭೂಮಿಗೆ ಕಾದಿದೆಯಾ ಗಂಡಾಂತರ..?

ದೆಹಲಿ: ಭೂಮಿಯ ಮೂಲಕ ಸ್ಟೇಡಿಯಂ ಗಾತ್ರದ ಬೃಹತ್ ಕ್ಷುದ್ರಗ್ರಹವೊಂದು ಮಂಗಳವಾರ ಹಾದುಹೋಗಲಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದೆ. ಆದರೆ, ಇದು ಯಾವುದೇ ಅಪಾಯಕಾರಿಯಲ್ಲ ಎಂದು ವಿಜ್ಞಾನಿಗಳು ಖಚಿತಪಡಿಸಿದ್ದಾರೆ.

2024 ಡಿಸೆಂಬರ್‌ನಲ್ಲಿ ಭೂಮಿಯ ಮೂಲಕ ಬೃಹತ್ ಕ್ಷುದ್ರಗ್ರಹವು ಹಾದುಹೋಗಲಿದೆ ಎಂದು ನಾಸಾ ಇತ್ತೀಚೆಗೆ ಘೋಷಣೆ ಮಾಡಿತ್ತು. ಈ ಕ್ಷುದ್ರಗ್ರಹವು ಎಲ್ಲರ ಗಮನ ಸೆಳೆಯುವಷ್ಟು ದೊಡ್ಡದಾಗಿದ್ದು, 1,300 ಅಡಿಗಳು ಗಾತ್ರವಿದೆ. ಗಂಟೆಗೆ 44 ಸಾವಿರ ಕಿ.ಮೀ ವೇಗವಾಗಿ ಚಲಿಸುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದರು.

ಯಾವಾಗ ಹಾದು ಹೋಗಲಿದೆ..?

ವರದಿಗಳ ಪ್ರಕಾರ, ಈ ಕ್ಷುದ್ರಗ್ರಹಗಳು ಡಿಸೆಂಬರ್ 3 ರಂದು ಭಾರತೀಯ ಕಾಲಮಾನದ ಪ್ರಕಾರ ಬೆಳಗಿನ ಜಾವ 4.46 ಭೂಮಿಯ ಮೂಲಕ ಹಾದುಹೋಗಲಿದೆ ಎನ್ನಲಾಗಿದೆ. ಈ ಬಗ್ಗೆ ಮೊದಲೇ ಮುನ್ಸೂಚನೆ ನೀಡಿದ್ದ ನಾಸಾ, ಈ ಘಟನೆ ಸಂಭವಿಸಿದ ಬಳಿಕ ಸಂಪೂರ್ಣ ಮಾಹಿತಿ ನೀಡಬೇಕಿದೆ.

ಎಷ್ಟು ದೂರದಲ್ಲಿದೆ..?

ಇಂತಹ ಘಟನೆಯು ಸಾಮಾನ್ಯವಾಗಿ ಪ್ರತಿ 5 ರಿಂದ 10 ವರ್ಷಗಳಿಗೊಮ್ಮೆ ಸಂಭವಿಸುತ್ತವೆ. ಭೂಮಿಯಿಂದ ಚಂದ್ರನ ನಡುವಿನ ಅಂತರಕ್ಕಿಂತ 14 ಪಟ್ಟು ಹೆಚ್ಚು ದೂರದಲ್ಲಿದೆ. ಇದು ಸುರಕ್ಷಿತ ಅಂತರವಾಗಿದೆ. ಆದ್ದರಿಂದ ಯಾವುದೇ ಅಪಾಯ ಇಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಹೆಚ್ಚಿನ ವಿವರ ಇಲ್ಲಿದೆ

  • ಈ ಕ್ಷುದ್ರಗ್ರಹವನ್ನು 447755 (2007 JX2) ಎಂದು ಕರೆಯಲಾಗುತ್ತದೆ.
  • 1,300 ಅಡಿಗಳು ದೊಡ್ಡದಾಗಿದೆ.
  • ಗಂಟೆಗೆ 44000 ಕಿಮೀ ವೇಗದಲ್ಲಿ ಬಾಹ್ಯಾಕಾಶದಲ್ಲಿ ಚಲಿಸುತ್ತದೆ.
  • ಭೂಮಿಯಿಂದ ಕ್ಷುದ್ರಗ್ರಹದ ಅಂತರವು 5.5 ಮಿಲಿಯನ್ ಕಿಲೋಮೀಟರ್ ಇದೆ.
  • ಭೂಮಿಗೆ ಯಾವುದೇ ಅಪಾಯವಿಲ್ಲ.
  • ನಾಸಾ ಕ್ಷುದ್ರಗ್ರಹ ಬೃಹತ್ ಗಾತ್ರದ ಕಾರಣ ಚಲಿಸುವ ಮಾರ್ಗ ಅಧ್ಯಯನಕ್ಕೆ ಸಹಕಾರಿ.

Comments (0)

Your email address will not be published. Required fields are marked *

Back to top button