Top Newsಸುದ್ದಿ

ಬಾಂಬ್​ ಇದೆ ಎಂದು ಆಟೋ ಸಮೇತ ಪೊಲೀಸ್ ಠಾಣೆಗೆ ಬಂದ ಚಾಲಕ

ಬೆಂಗಳೂರು: ಬಾಂಬ್ ಇದೆ ಎಂದು ಆಟೋ ಸಮೇತ ಚಾಲಕ ಜಯನಗರ ಪೊಲೀಸ್​ ಠಾಣೆಗೆ ಬಂದಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಅಪರಿಚಿತ ವ್ಯಕ್ತಿ ಆಟೋದಲ್ಲಿ ಬ್ಯಾಗ್ ಇಟ್ಟು ಹೋಗಿದ್ದರು. ಬಾಂಬ್ ಸ್ಕ್ವಾಡ್​ನಿಂದ ಪರಿಶೀಲನೆ ಮಾಡಿದ್ದಾಗ ಯಾವುದೇ ಸ್ಫೋಟಕ‌ ವಸ್ತು ಪತ್ತೆ ಆಗಿಲ್ಲ.ಇತ್ತೀಚೆಗೆ ನಗರದ ಬಿಎಂಎಸ್, ಎಂಎಸ್ ರಾಮಯ್ಯ ಹಾಗೂ ಬಿಐಟಿ ಇಂಜಿನಿಯರಿಂಗ್ ಕಾಲೇಜಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದವು. ಇದರಿಂದ ಕಾಲೇಜು ಆವರಣಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ಇನ್ನು ಬೆಂಗಳೂರಿನಲ್ಲಿ ಪದೇ ಪದೇ  ಬಾಂಬ್ ಬೆದರಿಕೆ ಕರೆಗಳು ಬರುತ್ತಿದ್ದವು. ಸ್ಕೂಲ್ಸ್, ಹೋಟೆಲ್ಸ್ ಬಳಿಕ ಕಾಲೇಜ್​ಗಳಿಗೂ ಬಾಂಬ್ ಬೆದರಿಕೆ ಬಂದಿದ್ದವು. ಹೀಗಾಗಿ ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲ ಪೋಷಕರು ಕೂಡ ಭಯಗೊಂಡಿದ್ದರು.

ಮಧ್ಯಾಹ್ನ ಕಾಲೇಜಿನ ಇಮೇಲ್​ಗೆ ಬಂದಿದ್ದ ಬೆದರಿಕೆ ಸಂದೇಶವನ್ನ‌ ನೋಡಿ ಗಾಬರಿಯಾದ ಕಾಲೇಜು ಆಡಳಿತ ತಕ್ಷಣವೇ ಸ್ಥಳೀಯ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದರು. ಇದರಿಂದ ಸ್ಥಳಕ್ಕೆ ದೌಡಯಿಸಿದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಇಡೀ ಕಾಲೇಜನ್ನ ಪರಿಶೀಲನೆ ಮಾಡಿದ್ದರು.

ಸಂಜೆ ಐದು ಗಂಟೆ ಒಳಗೆ ಕಾಲೇಜಿನಿಂದ ಹೊರ ಹೋಗದೆ ಇದ್ದರೆ ಬಾಂಬ್ ಬ್ಲಾಸ್ಟ್ ಆಗುತ್ತೆ ಎಂದು ಉಲ್ಲೇಖಿಸಲಾಗಿತ್ತು. ಮೂರು ಗಂಟೆಗಳಿಗೂ ಅಧಿಕ ಕಾಲ ಕಾಲೇಜುಗಳಲ್ಲಿ ಪರಿಶೀಲನೆ ನಡೆಸಿದ್ದು, ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು  ತಿಳಿಸಿದ್ದರು.

Comments (0)

Your email address will not be published. Required fields are marked *

Back to top button